ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Children's Day 2025 Gift Ideas: ನಿಮ್ಮ ಪುಟ್ಟ ಮಕ್ಕಳಿಗೆ ಈ ರೀತಿಯ ಉಡುಗೊರೆಗಳನ್ನು ನೀಡಿ; ಖುಷಿ ಪಡುತ್ತಾರೆ...

Childrens Day: ಪ್ರತಿವರ್ಷ ನವೆಂಬರ್ 14ರಂದು ಮಕ್ಕಳ ದಿನ ಆಚರಿಸಲಾಗುತ್ತದೆ. ಈ ದಿನದಂದು ಪೋಷಕರು ತಮ್ಮ ಮಕ್ಕಳ ಖುಷಿಗಾಗಿ ಏನಾದರೂ ಉಡುಗೊರೆ ನೀಡಬೇಕು ಎಂದುಕೊಂಡಿದ್ದಲ್ಲಿ, ಇಲ್ಲಿ ನೀಡಿರುವ ಗಿಫ್ಟ್‌ ಐಡಿಯಾಗಳನ್ನು ನೋಡಿ, ನಿಮ್ಮ ಮುದ್ದಾದ ಮಕ್ಕಳಿಗೆ ಸೂಕ್ತ ಎನಿಸುವ ಉಡುಗೊರೆ ನೀಡಿ. ಅವರ ಮುಖದಲ್ಲಿ ಹೊಳೆಯುವ ಆನಂದವನ್ನು ಅನುಭವಿಸಿ.

ಮಕ್ಕಳ ದಿನಾಚರಣೆಗೆ ಉಡುಗೊರೆ ಐಡಿಯಾಗಳು ಇಲ್ಲಿವೆ ನೋಡಿ

ಮಕ್ಕಳ ದಿನಾಚರಣೆ -

Profile
Sushmitha Jain Nov 14, 2025 7:15 AM

ಬೆಂಗಳೂರು: ನವೆಂಬರ್‌ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆಯ(Childrens Day) ಸಂಭ್ರಮ. ಇಂದು ಭಾರತದ ಮೊದಲ ಪ್ರಧಾನ ಮಂತ್ರಿ ಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು (Jawaharlal Nehru) ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆಚರಿಸಬೇಕೆಂದು ಆಲೋಚನೆ ನಿಮಗಿದ್ದರೆ ಈ ರೀತಿಯ ಸಣ್ಣ ಪುಟ್ಟ ಉಡುಗೊರೆಗಳನ್ನು(Gift Ideas) ನೀಡಿ ಅವರನ್ನು ಸಂತೋಷ ಪಡಿಸಿ.

ಹೌದು ಮಕ್ಕಳಿಗೆ ಉಡುಗೊರೆ ಎಂದರೆ ಖುಷಿಯಾಗುತ್ತದೆ. ಹೀಗೆ ಏನಾದ್ರೂ ಸರ್ಪ್ರೈಸ್ ನೀಡಿದ್ರೆ ಸಂತೋಷ ಪಡುತ್ತಾರೆ. ಅದರಿಂದ ನಮಗೂ ಖಷಿಯಾಗುತ್ತದೆ. ಆದರೆ ಪುಟ್ಟ ಮಕ್ಕಳಿಗೆ ಯಾವ ರೀತಿಯ ಉಡುಗೊರೆ ನೀಡಬಹುದು ಎಂಬ ಗೊಂದಲ ಹಲವರಿಗೆ ಇರುತ್ತದೆ. ನಿಮಗೂ ಈ ಬಗ್ಗೆ ಕನ್ಫ್ಯೂಸ್ಟನ್ ಇದ್ದರೆ ಪರಿಹಾರ ನಾವು ಕೊಡುತ್ತೇವೆ. ಏನು ಗಿಫ್ಟ್ ನೀಡಬಹುದು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಕೆಲವು ಸಲಹೆಗಳು ಇಲ್ಲಿದ್ದು, ಮಕ್ಕಳ ದಿನಾಚರಣೆಯ ವಿಶೇಷವಾಗಿ
ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿಗೆ ಎಂತಹ ಉಡುಗೊರೆ ನೀಡಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

ಉಡುಗೊರೆ ಹೇಗಿರಬೇಕು..?

ಮೊದಲಿಗೆ ಮಕ್ಕಳಿಗೆ ಖರೀದಿಸುವ ಉಡುಗೊರೆಗಳು ಅವರಿಗೆ ಉಪಯೋಗವಾಗುವಂತಿರಬೇಕು. ಮಕ್ಕಳಿಗೆ ವಿವಿಧ ರೀತಿಯ ಉಡುಗೊರೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆಟಿಕೆ, ಬಟ್ಟೆ, ಚಾಕೊಲೇಟ್, ಸ್ಟೇಶನರಿಗಳು ಏನಾದರೂ ನೀಡಬಹುದು. ಹೆಚ್ಚು ಉಪಯುಕ್ತವಾಗುವ ಉಡುಗೊರೆಗಳನ್ನು ಆಯ್ದು ನೀಡಿ.

ಗಿಫ್ಟ್ ನೀಡಲು ಇವುಗಳು ಬೆಸ್ಟ್ ಆಯ್ಕೆ..!

ಪುಸ್ತಕಗಳು: ಜ್ಞಾನದ ಭಂಡಾರವನ್ನು ಹೆಚ್ಚಿಸುವ ಪುಸ್ತಕ ಮಕ್ಕಳಿಗೆ ನೀಡಲು ಬೆಸ್ಟ್ ಉಡುಗೊರೆಯಾಗಿದ್ದು, ಇದೊಂದು ಉತ್ತಮ ಸ್ನೇಹಿಯೂ ಹೌದು. ಮಕ್ಕಳಿಗೆ ಬುಕ್ ಅನ್ನು ಗಿಫ್ಟ್ ಆಗಿ ನೀಡುವುದರಿಂದ ಓದುವ ಹವ್ಯಾಸವನ್ನು ಬೆಳೆಸಿದಂತಾಗಲಿದ್ದು, ಏಕಾಗ್ರತೆ ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಪುಸ್ತಕ ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಓದಿ: Children’s Day 2025: ನಾಳೆ ಮಕ್ಕಳ ದಿನಾಚರಣೆ; ಇದರ ಇತಿಹಾಸ, ಮಹತ್ವ ಏನು ಗೊತ್ತಾ...?


ಹುಂಡಿ: ಉಳಿತಾಯದ ಮೌಲ್ಯವನ್ನು ಮಕ್ಕಳಿಗೆ ಕಲಿಸುವುದು ತುಂಬಾ ಮುಖ್ಯ. ಒಂದೊಂದು ರೂಪಾಯಿಗೂ ಪ್ರಾಮುಖ್ಯತೆ ಇದೆ ಎಂಬುದನ್ನು ಮಕ್ಕಳಿಗೆ ತಿಳಿಸಿ. ಈ ಮಕ್ಕಳ ದಿನದಂದು, ಅವರಿಗೆ ಒಂದು ಹಣ ಸಂಗ್ರಹಿಸುವ ಡಬ್ಬವನ್ನು ಉಡುಗೊರೆಯಾಗಿ ನೀಡಿ. ಇದರಿಂದ ಅವರಲ್ಲಿ ಉಳಿಕೆಯ ಬಗ್ಗೆ ಅರಿವು ಮೂಡಲಿದ್ದು, ಹಣ ದುಂದು ವ್ಯರ್ಥ ಮಾಡದಂತೆ ಸೇವಿಂಗ್ ಮಾಡುವುದನ್ನು ಕಲಿಯುತ್ತಾರೆ.

ಸಸ್ಯಗಳು: ಈ ಆಧುನೀಕರಣದ ಹೊತ್ತಿನಲ್ಲಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಬಹಳ ಮುಖ್ಯ. ಹಾಗಾಗಿ ಮಕ್ಕಳ ದಿನಾಚರಣೆಯಂದು
ಮಗುವಿಗೆ ಗಿಡವನ್ನು ಉಡುಗೊರೆಯಾಗಿ ನೀಡಿ. ಇದರಿಂದ ಮಗುವಿಗೆ ಮರಗಿಡಗಳು ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸಿದಂತಾಗುತ್ತದೆ. ಅದನ್ನು ಪೋಷಿಸಿ, ಬೆಳೆಸುವ ಜವಾಬ್ದಾರಿಯನ್ನು ಅವರಿಗೆ ಕೊಟ್ಟಾಗ ಪರಿಸರದ ಬಗ್ಗೆ ಕಾಳಜಿ ಬರುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆಯ ಅರಿವು ಮೂಡಿಸಿ, ಅದನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿ.

ಇವುಗಳನ್ನು ಹೊರತು ಪಡಿಸಿ ನೀವು ಚಾಕೊಲೇಟ್ಸ್, ಡಿಜಿಟಲ್ ವಾಚ್, ಒಳ್ಳಾಂಗಣದ ಆಟಿಕೆಗಳಾದ ವೀಡಿಯೊ ಗೇಮ್, ಹೇಗೆ ಸರಳ ಉಡುಗೊರೆಗಳನ್ನು ನೀಡಬಹುದು.