Fabrics shrink: ಒಗೆದ ನಂತರ ಬಟ್ಟೆಗಳ ಸೈಜ್ ಬದಲಾಗುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ
ಮಾರುಕಟ್ಟೆಯಲ್ಲಿ ಸರಿಯಾದ ಗಾತ್ರ ನೋಡಿ ತಂದ ಬಟ್ಟೆಗಳನ್ನು ವಾಶ್ ಮಾಡಿ ಧರಿಸುವಾಗ ಹಾಕಲು ಬರುವುದಿಲ್ಲ. ಕಾರಣ ಸೈಜ್ ಬದಲಾವಣೆಯಾಗಿರುತ್ತದೆ. ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದ್ದೀರಾ? ಒಗೆದ ಬಳಿಕ ಬಟ್ಟೆಗಳ ಸ್ವರೂಪ, ಗಾತ್ರ ಬದಲಾಗಲು ಹಲವು ಕಾರಣಗಳಿವೆ. ಇದಕ್ಕೆ ವಿಜ್ಞಾನಿಗಳು ಹೇಳಿರುವ ಕಾರಣಗಳು ಇಂತಿವೆ.


ನವದೆಹಲಿ: ಬಟ್ಟೆಗಳನ್ನು (Fabrics shrink) ಶಾಪ್‌ಗಳಲ್ಲಿ ಟ್ರಯಲ್ ಮಾಡಿ ನೋಡಿದಾಗ ಎಲ್ಲವೂ ಸರಿ ಇದೆ ಎಂದೆನಿಸುತ್ತದೆ. ಆದರೆ ಮನೆಗೆ ತಂದು ಒಗೆದು ಧರಿಸಿದ ( Clothes Shrink After Washing) ಮೇಲೆ ಅದರ ಗಾತ್ರ (Fabrics shrink) ಬದಲಾಗಿರುತ್ತದೆ. ಸಾಮಾನ್ಯವಾಗಿ ಒಗೆದ ಬಟ್ಟೆಗಳನ್ನು ಮತ್ತೆ ಹಿಂದಿರುಗಿಸಲು ಕೂಡ ಆಗುವುದಿಲ್ಲ. ಹೀಗಾಗಿ ಬಟ್ಟೆ ಮಾತ್ರವಲ್ಲ ಹಣ ಕೂಡ ವ್ಯರ್ಥ ಎಂದೆನಿಸುತ್ತದೆ. ಸಾಮಾನ್ಯವಾಗಿ ವಾಶ್ ಮಾಡುವಾಗ ಬಿಸಿ ನೀರು ಬಳಸಿದರೆ ಬಟ್ಟೆಯಲ್ಲಿರುವ ಫೈಬರ್ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಬಟ್ಟೆಯಲ್ಲಿರುವ ನೂಲಿನ ಎಳೆಗಳು ಚಲಿಸುತ್ತದೆ. ಬಿಗಿಯಾಗಿ ನೇಯ್ದ ಬಟ್ಟೆಗಳಿಗಿಂತ ಸಡಿಲವಾಗಿ ನೇಯ್ದ ಬಟ್ಟೆಗಳು ಸುಲಭವಾಗಿ ಕುಗ್ಗುತ್ತವೆ.
ಹೊಸ ಬಟ್ಟೆಗಳಲ್ಲಿ ವಿಶೇಷವಾಗಿ ಹತ್ತಿ ಮತ್ತು ಲಿನಿನ್ ನಿಂದ ಮಾಡಿದ ಉಡುಪುಗಳನ್ನು ಮೊದಲ ಬಾರಿಗೆ ತೊಳೆದಾಗ ಶ್ರಿಂಕ್ ಆಗುತ್ತವೆ. ಇದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕಾದರೆ ಅದರ ತಯಾರಿ ವಿಧಾನವನ್ನು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಹತ್ತಿ ಮತ್ತು ಲಿನಿನ್ ಬಟ್ಟೆಗಳಲ್ಲಿ ನೈಸರ್ಗಿಕ ನಾರುಗಳಿರುತ್ತವೆ. ಇದರಲ್ಲಿ ಸೆಲ್ಯುಲೋಸ್ ಅಣುಗಳಿರುತ್ತವೆ. ಇದು ತಯಾರಿಕೆಯ ಸಮಯದಲ್ಲಿ ನಾರುಗಳನ್ನು ಎಳೆಗಳಾಗಿ ವಿಸ್ತರಿಸುತ್ತದೆ. ಇದರಿಂದ ಬಟ್ಟೆಗಳ ಗಾತ್ರ ಹಿಗ್ಗುತ್ತದೆ. ಇದಕ್ಕೆ ನೀರು ತಾಗಿದಾಗ ಅದು ನೈಸರ್ಗಿಕ ಗುಣವನ್ನು ಪಡೆದು ಕುಗ್ಗುತ್ತದೆ. ಇದರಿಂದಾಗಿ ಬಟ್ಟೆಗಳ ಗಾತ್ರದಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಯಾವ ಬಟ್ಟೆಯಲ್ಲಿ ಎಷ್ಟು ವ್ಯತ್ಯಾಸ ?
ಸಾಮಾನ್ಯವಾಗಿ ಒಂದು ಮೀಟರ್ ಹತ್ತಿ ಬಟ್ಟೆಯನ್ನು ಮೊದಲ ಬಾರಿಗೆ ತೊಳೆದಾಗ ಶೇ. 3ರಿಂದ ಶೇ. 5ರಷ್ಟು ಕುಗ್ಗುತ್ತದೆ. ಇದರಿಂದ ಬಟ್ಟೆಯ ಒಟ್ಟು ಉದ್ದ ಸುಮಾರು 95 ರಿಂದ 97 ಸೆಂ.ಮೀ. ಕಡಿಮೆಯಾಗುತ್ತದೆ. ಬಟ್ಟೆಯು ಹೆಚ್ಚು ಕುಗ್ಗಿದರೆ ಅದನ್ನು ಹೆಚ್ಚಿನ ಪ್ರಮಾಣದ ನೈಸರ್ಗಿಕ ನಾರುಗಳಿಂದ ಮಾಡಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ರೇಯಾನ್ ಬಟ್ಟೆಯು ಶೇ. 10, ಪಾಲಿಯೆಸ್ಟರ್ ಬಟ್ಟೆಗಳು ಶೇ. 4 ರಿಂದ 8ವರೆಗೆ, ಹತ್ತಿ ಮತ್ತು ಪಾಲಿಯೆಸ್ಟರ್ ಮಿಶ್ರಿತ ಬಟ್ಟೆಯು ಶೇ. 3.5ರಿಂದ 5.5 ರವರೆಗೆ, ಪಾಪ್ಲಿನ್ ಮತ್ತು ಟ್ವಿಲ್ ಬಟ್ಟೆಯು ಶೇ. 3 ರಿಂದ 4.5ರವರೆಗೆ ಕುಗ್ಗುತ್ತವೆ. ರೇಯಾನ್, ಲೇಬರ್ ಫ್ಯಾಬ್ರಿಕ್ ಮತ್ತು ಶುದ್ಧ ಹತ್ತಿಗಳು ಹೆಚ್ಚಾಗಿ ಕುಗ್ಗುತ್ತವೆ. ಪಾಲಿಯೆಸ್ಟರ್ ಮಿಶ್ರಿತ ಬಟ್ಟೆಗಳು ಕಡಿಮೆ ಶ್ರಿಂಕ್ ಆಗುತ್ತವೆ. ರೆಡಿಮೇಡ್ ಬಟ್ಟೆಗಳು ಸಾಮಾನ್ಯವಾಗಿ ಶ್ರಿಂಕ್ ಆಗುವುದು ಕಡಿಮೆ. ಯಾಕೆಂದರೆ ಇದನ್ನು ಹೊಲಿಗೆ ಮಾಡುವ ಮೊದಲು ತೊಳೆಯಲಾಗುತ್ತದೆ.
ಉಣ್ಣೆಯ ಬಟ್ಟೆಯ ಸ್ವಭಾವ ಬೇರೆ ರೀತಿಯಾಗಿದೆ. ಇದರಲ್ಲಿ ಕೆರಾಟಿನ್ ಎಂಬ ಅಂಶವಿದೆ. ಇದರಿಂದ ಅವು ತೊಳೆಯುವಾಗ ತೆರೆದು ಹೆಚ್ಚಿನ ಪ್ರಮಾಣದಲ್ಲಿ ಕುಗ್ಗುತ್ತದೆ.
ಸಿಂಥೆಟಿಕ್ಸ್ ಏಕೆ ಕುಗ್ಗುವುದಿಲ್ಲ?
ಪಾಲಿಯೆಸ್ಟರ್ ಮತ್ತು ನೈಲಾನ್ ಬಟ್ಟೆಗಳ ಬಾಳಿಕೆಗಾಗಿ ಪೆಟ್ರೋಲಿಯಂ ಬಳಸಲಾಗುತ್ತದೆ. ಅವುಗಳಲ್ಲಿರುವ ಸ್ಫಟಿಕದಂತಹ ಪಾಲಿಮರ್ ರಚನೆಯು ಕುಗ್ಗುವಿಕೆಯನ್ನು ತಡೆಯುತ್ತದೆ. ಬಟ್ಟೆಗಳನ್ನು ಸಾಮಾನ್ಯವಾಗಿ ವಿವಿಧ ವಸ್ತುಗಳಿಂದ ತಯಾರಿಸಲಾಗುತ್ತದೆ. ಅವುಗಳಲ್ಲಿ ನೈಸರ್ಗಿಕ ಮತ್ತು ಸಂಶ್ಲೇಷಿತ ನಾರುಗಳಿರುತ್ತವೆ. ನೈಸರ್ಗಿಕ ನಾರುಗಳ ಮೂಲ ಸಸ್ಯ ಮತ್ತು ಪ್ರಾಣಿಗಳು. ಹತ್ತಿ ಮರ, ಸೆಣಬಿನ ಮರ, ಬಿದಿರು, ಕೋಕೂನ್ ಹುಳು, ಕುರಿ, ಒಂಟೆ, ಮೊಲಗಳಂತಹ ಪ್ರಾಣಿಗಳಿಂದ ನೈಸರ್ಗಿಕ ನಾರುಗಳನ್ನು ಪಡೆಯಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Viral Video: ಶೂ ಧರಿಸಿ ಹವನದಲ್ಲಿ ಪಾಲ್ಗೊಂಡ ಲಾಲು ಪ್ರಸಾದ್ ಯಾದವ್; ನೆಟ್ಟಿಗರಿಂದ ತರಾಟೆ
ಸಂಶ್ಲೇಷಿತ ನಾರಳಲ್ಲಿ ಪೆಟ್ರೋಲಿಯಂ ಆಧಾರಿತ ರಾಸಾಯನಿಕಗಳಿರುತ್ತವೆ. ಇದರಲ್ಲಿ ದೀರ್ಘ ಕಾಲ ಬಾಳಿಕೆ ಬರುವ ಪಾಲಿಯೆಸ್ಟರ್, ನೈಲಾನ್ ಮತ್ತು ಅಕ್ರಿಲಿಕ್ ಸೇರಿವೆ.
ಕುಗ್ಗಿದ ಬಟ್ಟೆಗಳನ್ನು ಹಿಗ್ಗಿಸುವುದು ಹೇಗೆ?
ಕೆಲವೊಂದು ವಿಧಾನಗಳನ್ನು ಬಳಸಿ ಶ್ರಿಂಕ್ ಆಗಿರುವ ಬಟ್ಟೆಗಳನ್ನು ಸ್ವಲ್ಪ ಮಟ್ಟಿಗೆ ಹಿಗ್ಗಿಸಬಹುದು. ಆದರೆ ಇದನ್ನು ಪೂರ್ತಿಯಾಗಿ ಮೊದಲಿನ ಗಾತ್ರಕ್ಕೆ ತರುವುದು ಸ್ವಲ್ಪ ಕಷ್ಟ.