ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Fashion News 2026: 10ನೇ ವರ್ಷಕ್ಕೆ ಕಾಲಿಟ್ಟ ಮಿಸೆಸ್ ಇಂಡಿಯಾ ಕರ್ನಾಟಕ ಆಸ್ಟ್ರಲ್‌ ಬ್ಯೂಟಿ ಪೇಜೆಂಟ್‌

ಪ್ರತಿಭಾ ಸಂಶಿಮಠ್‌ ನೇತೃತ್ವದ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ಬ್ಯೂಟಿ ಪೇಜೆಂಟ್‌ ಯಶಸ್ವಿಯಾಗಿ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈಗಾಗಲೇ ಈ ಬ್ಯೂಟಿ ಪೇಜೆಂಟ್‌ ಮೂಲಕ ನೂರಾರು ಮಾಡೆಲ್‌ಗಳು ಫ್ಯಾಷನ್‌ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಕುರಿತಂತೆ ಅವರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

10ನೇ ವರ್ಷಕ್ಕೆ ಮಿಸೆಸ್ ಇಂಡಿಯಾ ಕರ್ನಾಟಕ ಆಸ್ಟ್ರಲ್‌ ಬ್ಯೂಟಿ ಪೇಜೆಂಟ್‌

ಚಿತ್ರಗಳು: ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉದ್ಯಾನನಗರಿಯಲ್ಲಿ ಸೆಪ್ಟೆಂಬರ್‌ 10ರಂದು ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ಬ್ಯೂಟಿ ಪೇಜೆಂಟ್‌ ನಡೆಯಲಿದೆ. ಪೇಜೆಂಟ್‌ ಡೈರೆಕ್ಟರ್‌ ಪ್ರತಿಭಾ ಸಂಶಿಮಠ್‌ ನೇತೃತ್ವದ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ಬ್ಯೂಟಿ ಪೇಜೆಂಟ್‌ ಈಗಾಗಲೇ ಯಶಸ್ವಿಯಾಗಿ 10 ನೇ ವರ್ಷಕ್ಕೆ ಕಾಲಿಟ್ಟಿದೆ. ಈಗಾಗಲೇ ಈ ಬ್ಯೂಟಿ ಪೇಜೆಂಟ್‌ ಮೂಲಕ ನೂರಾರು ಮಾಡೆಲ್‌ಗಳು ಫ್ಯಾಷನ್‌ ಲೋಕದಲ್ಲಿ (Fashion News 2026) ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

Fashion News

ಮಿಸೆಸ್‌ ಇಂಡಿಯಾ ಕರ್ನಾಟಕ ಬ್ಯೂಟಿ ಪೇಜೆಂಟ್‌ ಹಿಸ್ಟರಿ

ಮಿಸೆಸ್‌ ಏಷ್ಯಾ ಇಂಟರ್‌ನ್ಯಾಷನಲ್‌ ಕೀರೀಟವನ್ನು ವಿದೇಶದಲ್ಲಿ ಗೆದ್ದುಕೊಂಡು ಬಂದ ಪ್ರತಿಭಾ ಸಂಶಿಮಠ್‌, ಮಿಸೆಸ್‌ ಇಂಡಿಯಾ ಕರ್ನಾಟಕ ವ್ಯಾಪ್ತಿಯ ಸೌಂದರ್ಯ ಸ್ಪರ್ಧೆಯನ್ನು ಮೊತ್ತ ಮೊದಲಿಗೆ ರಾಜ್ಯದಲ್ಲಿ ದಶಕಗಳ ಹಿಂದೆಯೇ ಜಾರಿಗೆ ತಂದರು. ವಿವಾಹಿತರು ಕೂಡ ಫ್ಯಾಷನ್‌ ಲೋಕದಲ್ಲಿ ಮಿಂಚಬಹುದು ಎಂಬುದನ್ನು ಈ ಮೂಲಕ ತೋರಿಸಿದರು.

Mrs India Karnataka

ವಿಶ್ವವಾಣಿ ನ್ಯೂಸ್‌ಗೆ ಪ್ರತಿಭಾ ಪ್ರತಿಕ್ರಿಯೆ

ಮಿಸೆಸ್‌ ಇಂಡಿಯಾ ಕರ್ನಾಟಕ ಬ್ಯೂಟಿ ಪೇಜೆಂಟ್‌ ಯಶಸ್ವಿಯಾಗಿರುವ ಕುರಿತಂತೆ ವಿಶ್ವವಾಣಿ ನ್ಯೂಸ್‌ ಮಾತನಾಡಿಸಿದಾಗ ಅವರು ಸಂಕ್ಷಿಪ್ತವಾಗಿ ಹೀಗೆ ವಿವರಣೆ ನೀಡಿ, ಪ್ರತಿಕ್ರಿಯಿಸಿದರು.

Astral Beauty Pageant

ಪ್ರತಿಭಾ ಸೌಂಶಿಮಠ್‌ ಹೇಳುವುದೇನು?

ಕರ್ನಾಟಕದಲ್ಲಿ ಮೊದಲು ಫ್ಯಾಷನ್‌ ಲೋಕ ಎಂದರೇ ಮಡಿವಂತಿಕೆ ಇತ್ತು. ಅದರಲ್ಲೂ ಮದುವೆಯಾದ ಮಹಿಳೆಯರಂತೂ ಈ ಬಗ್ಗೆ ಕನಸನ್ನು ಕೂಡ ಕಾಣುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಹುಟ್ಟು ಹಾಕಿದ ಈ ಬ್ಯೂಟಿ ಪೇಜೆಂಟ್‌ ಸಾಕಷ್ಟು ಯಶಸ್ವಿಯಾಯಿತು ಎನ್ನುತ್ತಾರೆ ಪ್ರತಿಭಾ ಸಂಶಿಮಠ್‌.

Mrs India Karnataka

ಫ್ಯಾಷನ್‌ ಲೋಕದಲ್ಲಿ ಮಹಿಳಾ ಸಬಲೀಕರಣ

ಅವರು ಹೇಳುವಂತೆ, ನಂತರ ಫ್ಯಾಷನ್‌ ಲೋಕದಲ್ಲೂ ಮಹಿಳಾ ಸಬಲೀಕರಣದ ದನಿ ಏರಲು ಕಾರಣವಾಯಿತು. ಇದು ಮತ್ತಷ್ಟು ಬ್ಯೂಟಿ ಪೇಜೆಂಟ್‌ಗಳು ಹುಟ್ಟಲು ಕಾರಣವಾಯಿತು ಎನ್ನುತ್ತಾರೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)