ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ಮಕ್ಕಳು ಕಲಿತುಕೊಳ್ಳಲೇ ಬೇಕಾದ “ಐದು ಚಿನ್ನದಂತಹ ಪದಗಳು”

ಮಕ್ಕಳಿಗೆ ಶಿಕ್ಷಣಭ್ಯಾಸ ಎಷ್ಟು ಮಹತ್ವವೋ ಅಷ್ಟೇ ಮುಖ್ಯ ಅವರ ವ್ಯಕ್ತಿತ್ವ ನಿಮಾ೯ಣ ಮತ್ತು ಬುದ್ಧಿ ವಿಕಸನ. ಅವರ ವ್ಯಕ್ತಿತ್ವವನ್ನು ಅವರ ನಡವಳಿಕೆ ಮತ್ತು ಮಾತುಗಳಲ್ಲಿ ನಾವು ಕಾಣಬಹುದು. ಸಾಮಾಜಿಕ ಮತ್ತು ಸಂವಹನ ಕೌಶಲ್ಯಗಳು( ಸೋಷಿಯಲ್ & ಕಮ್ಯೂನಿಕೇಶನ್ ಸ್ಕಿಲ್ಸ್) ಕೂಡ ಮಕ್ಕಳಿಗೆ ಬಹಳ ಅಗತ್ಯ.

ದೈನಂದಿನ ದಿನದಲ್ಲಿ ಮಕ್ಕಳು ಬಳಸಬಹುದಾದ “ಐದು  ಮೋಡಿ ಮಾಡುವ ಪದಗಳು”

-

ಮಕ್ಕಳಿಗೆ ಶಿಕ್ಷಣಭ್ಯಾಸ ಎಷ್ಟು ಮಹತ್ವವೋ ಅಷ್ಟೇ ಮುಖ್ಯ ಅವರ ವ್ಯಕ್ತಿತ್ವ (Mana Santwana) ನಿಮಾ೯ಣ ಮತ್ತು ಬುದ್ಧಿ ವಿಕಸನ. ಅವರ ವ್ಯಕ್ತಿತ್ವವನ್ನು ಅವರ ನಡವಳಿಕೆ ಮತ್ತು ಮಾತುಗಳಲ್ಲಿ ನಾವು ಕಾಣಬಹುದು. ಸಾಮಾಜಿಕ ಮತ್ತು ಸಂವಹನ ಕೌಶಲ್ಯಗಳು( ಸೋಷಿಯಲ್ & ಕಮ್ಯೂನಿಕೇಶನ್ ಸ್ಕಿಲ್ಸ್) ಕೂಡ ಮಕ್ಕಳಿಗೆ ಬಹಳ ಅಗತ್ಯ. ಬೆಳೆಯುವ ಮಕ್ಕಳ ಈ ಕೌಶಲ್ಯಗಳನ್ನು ಸಧೃಢ ಮಾಡುವಲ್ಲಿ, ಮೂರು ಮೋಡಿ ಪದಗಳ ಬಳಕೆಗಳು ಸಹಾಯಕರವಾಗಿದೆ. ಈ ಪದಗಳು ಹೀಗಿವೆ-

- ಕ್ಷಮಿಸಿ(ಸಾರಿ)

- ದಯವಿಟ್ಟು(ಪ್ಲೀಸ್),

- ಧನ್ಯವಾದ(ಥಾಂಕ್ಸ್)

- ಸ್ವಾಗತ (ವೆಲ್ ಕಮ್)

- ಅನುಮತಿ ( ಮೇ ಐ)

ಇಂಗ್ಲಿಷ್‌ನಲ್ಲಿ ಈ ಐದು ಪದಗಳನ್ನು "ಗೋಲ್ಡನ್ ವಡ್ಸ್೯" ಅಥವಾ "ಮ್ಯಾಜಿಕ್ ಪದಗಳು ಎಂದು ಕರೆಯಲಾಗುತ್ತದೆ.

ಇವುಗಳು ಮಕ್ಕಳಲ್ಲಿ ಪ್ರೀತಿ, ಸೌಹಾದ೯ತೆ, ಬಾಂಧವ್ಯ, ಮತ್ತು ಗೌರವವನ್ನು ಬೆಳೆಸುವಂತಹ ಪದಗಳು. ಈ ಪದಗಳು ದೈನಂದಿನ ಸಂವಹನಗಳಲ್ಲಿ ಮಕ್ಕಳ ಸಭ್ಯತೆಯನ್ನು ಮತ್ತು ಗೌರವವನ್ನು ತೋರಿಸುತ್ತದೆ.

ಮಕ್ಕಳನ್ನು ಪೋಷಕರು ಮತ್ತು ಸಮಾಜವು ಪ್ರಶಂಶಿಸಿದಾಗ ಮಕ್ಕಳಿಗೆ ಎಷ್ಟು ಸಂತೋಷ ಮತ್ತು ಪ್ರೋತ್ಸಾಹ ನೀಡುತ್ತದೆಯೋ ಹಾಗೆಯೇ ಮಕ್ಕಳ ಹಿತಕರವಾದ ಸ್ವಭಾವ ಮತ್ತು ಮಾತುಗಳು ಜನಗಳಿಗೆ ಗೌರವದ ಬಹುಮಾನ ನೀಡಿದಂತೆ ಕಾಣುತ್ತದೆ.

ಈ ಪದಗಳು ಜನರಿಗೆ ಒಂದು ಕಡೆ ಗೌರವ ಸಲ್ಲಿಸಿದರೆ, ಇನ್ನೊಂದು ಕಡೆ, ಮಕ್ಕಳ ಭಾಷೆಯನ್ನು ಸುಧಾರಿಸುತ್ತದೆ. ವ್ಯಯುಕ್ತಿಕವಾಗಿ ಮಕ್ಕಳ ಮನಸ್ಸನ್ನು ಪಾಸಿಟೀವ್ ಮಾಡುತ್ತದೆ.

  1. ದಯವಿಟ್ಟು(ಪ್ಲೀಸ್) - ಏನನ್ನಾದರೂ ನಯವಾಗಿ ವಿನಂತಿಸಲು ಬಳಸಲಾಗುತ್ತದೆ. ಮಕ್ಕಳು ತಮಗೆ ಬೇಕಾದ್ದನ್ನು ಕೇಳುವಾಗ ಅಥವ ಹೇಳುವಾಗ ‘ದಯವಿಟ್ಟು ಅಥವ ಪ್ಲೀಸ್’ ಎಂದು ತಮ್ಮ ಮಾತಿನ್ನಲ್ಲಿ ಸೇರಿಸಿದರೆ, ಸಭ್ಯತೆಯನ್ನು ಸೂಚಿಸುತ್ತದೆ. ವರಟುತನ, ಬಲವಂತ(ಡಿಮ್ಯಾಂಡ್) ಅಥವ ಆದೇಶ(ಅರ್ಡರ್) ಕಾಣುವುದಿಲ್ಲ

- ಉದಾ: ಅಪ್ಪ ಇಂದು ನನಗೆ ಹೆಚ್ಚು ಓದುವುದು ಇದೇ, ಆದ್ದರಿಂದ ನೀವು ಪ್ಲೀಸ್ ನನ್ನ ಬಟ್ಟೆ ಇಸ್ತ್ರಿ ಮಾಡಿಕೆೊಡಲು ಸಾಧ್ಯವೇ”

- ನಿನ್ನೆ ನಾನು ಶಾಲೆಗೆ ಬರಲು ಆಗಲಿಲ್ಲ, ದಯವಿಟ್ಟು ನಿನ್ನ ನೋಟ್ಸ್ ಒಂದು ದಿನದ ಮಟ್ಟಿಗೆ ಕೊಡಲು ಸಾಧ್ಯವೇ?

ಹೀಗೆ ‘ದಯವಿಟ್ಟು ಅಥವ ಪ್ಲೀಸ್’ ಪದಗಳನ್ನು ಬಳಸಿದಾಗ ನಿಮ್ಮ ಬಯಕೆ, ಅಗತ್ಯವನ್ನು ಬೇರೊಬ್ಬರು ಪರಿಗಣಿಸುವಂತೆ ಮಾಡುವ ಸಾಧ್ಯತೆ ಹೆಚ್ಚು.

  1. ಧನ್ಯವಾದಗಳು( ಥಾಂಕ್ಯು) - “ಧನ್ಯವಾದಗಳು" ಎಂದು ಹೇಳುವುದು ಮುಖ್ಯ ಏಕೆಂದರೆ ಈ ಪದವು ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಮೆಚ್ಚುಗೆ ಮತ್ತು ಗೌರವವನ್ನು ಕೂಡ ತೋರಿಸುತ್ತದೆ.

- ಉದಾ: “ಅಪ್ಪ ಇದು ವರೆಗೆ ನನ್ನ ಮಾತನ್ನು ನೀವು ಗಮನವಿಟ್ಟು ಆಲಿಸಿದ್ದೀರಿ, ಸಮಾಧಾನವಾಯಿತು ಧನ್ಯವಾದಗಳು”

- “ ಅಮ್ಮ ನೀನು ಅಡುಗೆ ಬಹಳ ಚೆನ್ನಾಗಿರುತ್ತದೆ, ನನ್ನ ಸ್ನೇಹಿತರೆಲ್ಲರಿಗೂ ಬಹಳ ಇಷ್ಟವಾಗಿದೆ, ಥಾಂಕ್ಯೂ ಅಮ್ಮ”

- ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದ ನೀವು ಇತರರ ಕೊಡುಗೆ ಮತ್ತು ಸಹಾಯಗಳನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದ್ದೇರೆಂದು ತಿಳಿದುಬರುತ್ತದೆ.

  1. ಕ್ಷಮಿಸಿ: ಈ ಪದವನ್ನು ಕ್ಷಮೆಯಾಚಿಸಲು ಮತ್ತು ತಪ್ಪನ್ನು ಒಪ್ಪಿಕೊಳ್ಳಲು ಬಳಸಲಾಗುತ್ತದೆ. ನಮ್ಮ ತಪ್ಪನ್ನು ಒಪ್ಪಿಕೊಂಡ ಸೂಚನೆಯನ್ನು ನೀಡುತ್ತದೆ. ಮತ್ತು ತಪ್ಪನ್ನು ಸುಧಾರಿಸಿಕೊಳ್ಳುವ ಲಕ್ಷಣವನ್ನು ತೋರಿಸುತ್ತದೆ. ಇದು ಸಂಬಂಧಗಳನ್ನು ಸರಿಪಡಿಸಲು ಮತ್ತು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ ಪ್ರಾಮಾಣಿಕ ಕ್ಷಮೆಯಾಚನೆಯು ಮಕ್ಕಳ ನಮ್ರತೆಯನ್ನು ತೋರಿಸುತ್ತದೆ ಮತ್ತು ಸಂಬಂಧವನ್ನು ಗೌರವಿಸುವ ಗುಣವನ್ನು ಬೆಳೆಸುತ್ತದೆ. ಇದರಿಂದ ಮಕ್ಕಳು ತಪ್ಪು ಮಾಡಿದರೂ ಕೂಡ ಕ್ಷಮಿಸಿ ಮುಂದೆ ಸಾಗಬೇಕೆಂಬ ಭಾವನೆಯನ್ನು ದೊಡ್ಡವರಲ್ಲಿ ಹುಟ್ಟಿಹಾಕುತ್ತದೆ. ಉದಾ: “ಕ್ಷಮಿಸು, ನಾನು ನಿನಗೆ ಸಾಕಷ್ಟು ಸಮಯ ನೀಡಲಿಲ್ಲ”, “ ಕ್ಷಮಿಸು, ನಿನ್ನನ್ನು ನಾನು ಬಹಳ ನಿಂದಿಸಿದೆ”.
  2. ಸ್ವಾಗತ (ವೆಲ್ ಕಮ್)- ಇನ್ನೊಬ್ಬರ ಆಗಮನವನ್ನು ಆತ್ಮೀಯವಾಗಿ ಸ್ವಾಗತ ನೀಡಲು ಬಳಸುವ ಪದ. ಹಾಗೆಯೇ, ಜನರ ಅಭಿಪ್ರಾಯ, ಮತ್ತು ಕೃತಜ್ಞತೆಯನ್ನು ನಾವು ಸ್ವೀಕರಿಸಿದ್ದೇವೆ ಎಂದು ಸೂಚಿಸಲು ಬಳಕೆ ಮಾಡುವ ಪದ. ಧನ್ಯವಾದಕ್ಕೆ ಪ್ರತಿಕ್ರಿಯೆಯಾಗಿ ಬಳಸಲಾಗುವ ಪದ. ಅವರು ನನಗೆ ಧನ್ಯವಾದ ಹೇಳಿದರು, ಮತ್ತು ನಾನು ಅವರಿಗೆ ಸ್ವಾಗತ ಎಂದು ಹೇಳಿದೆ.

ಉದಾ: “ನಿಮಗೆ ಉಡುಗೊರೆ ಇಷ್ಟವಾಗಿದ್ದು ನನಗೆ ಸಂತೋಷವಾಯಿತು”

“ನೀವು ಬರೆದ ಕವನ ಬಹಳ ಇಷ್ಟವಾಯಿತು .. ಥಾಂಕ್ಯು.. ವೆಲ್ ಕಮ್”

ಹೀಗೆ ಮುಕ್ತವಾಗಿ ವ್ಯಕ್ತ ಪಡಿಸುವುದರಿಂದ, ಸ್ಪಷ್ಟತೆ ಹಾಗೂ ಸಂಬಧಗಳು ಬೆಸೆಯುತ್ತವೆ.

  1. ಅನುಮತಿ ( ಮೇ ಐ ? )- ಏನೇ ಮಾಡುವ ಮೊದಲು ಅನುಮತಿ ಪಡೆದು ಮಾಡುವಂತದ್ದು. ಹೀಗೆ ಮಾಡುವುದರಿಂದ ಅವಿನಯ ಅಥವ ವರಟುತನವನ್ನು ತಡೆಯಬಹುದು. ಉದಾ: “ನಾನು ಮಾತಾಡಬಹುದೇ?” “ನಾನು ನಿನ್ನನ್ನು ನಾನು ಏನೋ ಕೇಳಬಹುದೇ?” “ನಾನು ನಿನಗೆ ಸಹಾಯ ಮಾಡಬಹುದೇ” . ಇಗು ಸಭ್ಯತೆಯನ್ನು ಸೂಚಿಸುವ ಪದವಾಗಿದೆ.

ಈ ಗುಣಗಳನ್ನು ಕಲಿಸುವುದು ಹೇಗೆ ?

ಬೆಳೆಯುತ್ತಿರುವ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಪೋಷಕರು ಹೇಳಿದಂತೆ ಮಕ್ಕಳು ಮಾಡದಿದ್ದರೂ, ಪೋಷಕರು ಮಾಡಿದಂತೆ ಮಕ್ಕಳು ಮಾಡುವ ಸಾಧ್ಯತೆ ಹೆಚ್ಚು. ಪೋಷಕರ ನಂತರ ಶಿಕ್ಷಕರು. ಇವರೇ ಈ ಮಕ್ಕಳ ಮಾದರಿಯಾಗಬೇಕು. ಪೋಷಕರು, ಶಿಕ್ಷಕರು ಈ ಪದಗಳನ್ನು ದೈನಂದಿನ ಬದುಕಿನ್ನಲ್ಲಿ ಸಾಧ್ಯವಾದಷ್ಟು ಸೂಕ್ತವಾಗಿ ಬಳಸಿದ್ದಲ್ಲಿ ಮಕ್ಕಳೂ ಸಹ ಬಳಸುವುದನ್ನು ಕಾಣಬಹುದು.