ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anti-Valentine’s Week: ವ್ಯಾಲೆಂಟೈನ್ಸ್ ಡೇ ಮುಗೀತು ಇನ್ನು ಆ್ಯಂಟಿ-ವ್ಯಾಲೆಂಟೈನ್ ವೀಕ್! – ಏನಿದರ ಮಹತ್ವ?

ಫೆಬ್ರವರಿ ಪ್ರೀತಿಯ ತಿಂಗಳು. ಈ ಫೆಬ್ರವರಿಯಲ್ಲಿ 7ನೇ ತಾರೀಖಿನಿಂದ 14ರವರೆಗೆ ಪ್ರೇಮಿಗಳ ವಾರವೆಂದೇ ಆಚರಿಸಲಾಗುತ್ತದೆ. ಆದರೆ, ಫೆ. 14ರಂದು ಪ್ರೇಮಿಗಳ ದಿನಾಚರಣೆ ಮುಗಿದ ತಕ್ಷಣ ಪ್ರೇಮ ವಿರೋಧಿ ವಾರ ಶುರುವಾಗುತ್ತದೆ. ಈ ಹಿನ್ನಲೆ ಸ್ಲ್ಯಾಪ್ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು,ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇಂದು ಸ್ಲ್ಯಾಪ್ ಡೇ – ರಪ್ಪಂತ ಒಂದು ಕೊಟ್ರೆ ಆಯ್ತು!

ಸ್ಲ್ಯಾಪ್ ಡೇ

Profile Sushmitha Jain Feb 15, 2025 1:32 PM

ತಮ್ಮ ಪ್ರೀತಿಯನ್ನು (Love) ನಿವೇದಿಸಿಕೊಳ್ಳಲು, ಪ್ರೀತಿ ಪಾತ್ರರಿಗೆ ನಾನೆಷ್ಟು ನಿನ್ನನ್ನು ಪ್ರೀತಿಸುತ್ತೇನೆ ಎಂದು ತೋರಿಸಲು ಇರೋ ಒಂದು ದಿನವೇ ಈ ವ್ಯಾಲೆಂಟೈನ್ಸ್ ಡೇ (Valentines Day). ಈ ಸ್ಪೆಷಲ್‌ ದಿನದಂದು ಪ್ರೇಮಿಗಳು (Lovers) ತಮ್ಮ ಸಂಗಾತಿಗೆ ಪ್ರಪೋಸ್‌ ಮಾಡಿ, ಐ ಲವ್‌ ಯೂ ಹೇಳಿ ಒಂದು ಗಿಫ್ಟ್‌, ಹೂವು ನೀಡೋದು ರೂಢಿ. ಪ್ರೇಮಿಗಳ ದಿನಾಚರಣೆಯನ್ನು ವಿಶ್ವದಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳ ಪಾಲಿನ ವಿಶೇಷ ದಿನವಾಗಿದ್ದು, ಪ್ರೀತಿಯನ್ನು ವ್ಯಕ್ತಪಡಿಸಲು ಈ ದಿನಕ್ಕಿಂತ ವಿಶೇಷವಾದ ದಿನ ಬೇರೋಂದಿಲ್ಲ. ಜಾಗತಿಕವಾಗಿ ಅತ್ಯಂತ ವ್ಯಾಪಕವಾಗಿ ಆಚರಿಸಲಾಗುವ ಹಲವು ವಿಶೇಷ ದಿನಗಳಲ್ಲಿ ಪ್ರೇಮಿಗಳ ದಿನ ಕೂಡ ಒಂದು. ಪ್ರೇಮಿಗಳು ಮತ್ತು ಕಪಲ್ಸ್ ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.

ಹೀಗೆ ಕಳೆದ ಒಂದು ವಾರದಿಂದ ರೋಸ್ ಡೇ , ಕಿಸ್ ಡೇ, ಟೆಡ್ಡಿ, ಆ ಡೇ , ಈ ಡೇ ಅಂತ ತಮ್ಮ ಪ್ರೀತಿ ಪಾತ್ರರೊಂದಿಗೆ ದಿನ ಕಳೆದು ನೆನ್ನೆ ಅಂದು ಫೆ. ರಂದು ಬಹಳ ಸಡಗರ ಸಂಭ್ರಮದಿಂದ ಪ್ರೇಮಿಗಳ ದಿನ ಆಚರಿಸಿದ್ದಾರೆ. ತಮ್ಮ ಪ್ರೀತಿ, ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮತ್ತು ತಮ್ಮ ಜೀವನದುದ್ದಕ್ಕೂ ಪರಸ್ಪರರ ಪಕ್ಕದಲ್ಲಿರಲು ಭರವಸೆ ನೀಡುವ ವರ್ಷದ ಅತ್ಯಂತ ರೋಮ್ಯಾಂಟಿಕ್ ದಿನದ ನೆನಪು ಮಾಸು ಅಷ್ಟರೊಳಗೆ ಪ್ರೇಮಿಗಳ ವಿರೋಧಿ ದಿನದ ಬಾಗಿಲಿಗೆ ಬಂದು ನಿಂತಿದೆ.

ಹೌದು ಪ್ರೇಮಿಗಳ ವಾರದ ನಂತರ, ಪ್ರೇಮಿಗಳ ವಿರೋಧಿ ವಾರ ಪ್ರಾರಂಭವಾಯಿತು. ಆ್ಯಂಟಿ-ವ್ಯಾಲೆಂಟೈನ್ಸ್ ವೀಕ್ ಎಂದು ಪ್ರೇಮವಿಲ್ಲದ ಮತ್ತು ಪ್ರೇಮದಿಂದ ಹೊರಕ್ಕೆ ಬಂದಿರುವವರು ಆಚರಣೆ ಮಾಡುವ ದಿನವಾಗಿದೆ. ಆದರೆ ಇದಕ್ಕೆ ವಿರೋಧವಾಗಿ ಇಂದಿನಿಂದ ಆ್ಯಂಟಿ-ವ್ಯಾಲೆಂಟೈನ್ಸ್ ವೀಕ್‌ (Anti-Valentine’s Week) ಪ್ರಾರಂಭವಾಗಲಿದ್ದು, ಇಂದು ಪ್ರೇಮಿಗಳ ವಿರೋಧಿ ವಾರದ ಮೊದಲನೆಯ ದಿನವಾಗಿ ಸ್ಲ್ಯಾಪ್ ಡೇ (Slap Day) ಯನ್ನು ಆಚರಿಸಲಾಗುತ್ತಿದೆ.

ಈ ಸುದ್ದಿಯನ್ನು ಓದಿ: Valentine’s Day Celebration: ಅದ್ದೂರಿಯಾಗಿ, ಅರ್ಥಪೂರ್ಣವಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಿದ ಅಲ್ಬನಿಯ ಕನ್ನಡಿಗರು!

ಹೌದು ಪ್ರೇಮಿಗಳ ವಿರೋಧಿ ವಾರದ ಮೊದಲ ದಿನ ಸ್ಲ್ಯಾಪ್ ಡೇ ಇದು ಫೆಬ್ರವರಿ 15 ರಂದು ಆಚರಣೆ ಮಾಡಲಾಗುತ್ತಿದ್ದು, ಯಾರಾದರೂ ತಮ್ಮ ಪ್ರೀತಿಯಿಂದ ದೂರವಾಗಿದ್ದರೆ, ಅವರಿಂದ ನೋವು ಉಂಟಾಗಿದ್ದರೆ, ಅದರ ಒತ್ತಡ ಮತ್ತು ದ್ರೋಹವನ್ನು ಮರೆಯಲು ಈ ದಿನವನ್ನು ಆಚರಿಸುತ್ತಾರೆ. ಈ ದಿನವು ನಿಮ್ಮ ಜೀವನದಿಂದ ಆ ಕಹಿ ಅನುಭವಗಳನ್ನು ತೆಗೆದುಹಾಕುವ ಸಮಯವಾಗಿದ್ದು, ಇದು ನೀವು ಪ್ರೀತಿಯಲ್ಲಿ ಅನುಭವಿಸಿದ ನೋವನ್ನು ಕಡಿಮೆ ಮಾಡಲು ಇರುವ ಪರಿಪೂರ್ಣ ಸಮಯವಾಗಿದೆ.

ಅಲ್ಲದೇ ಈ ವಾರವು ಸ್ಲ್ಯಾಪ್ ಡೇಯೊಂದಿಗೆ ಪ್ರಾರಂಭವಾಗುತ್ತದೆ, ಇದು ವ್ಯಕ್ತಿಗಳು ನಕಾರಾತ್ಮಕತೆ, ದ್ವೇಷಗಳು ಮತ್ತು ಹಿಂದಿನ ಸಂಬಂಧಗಳ ಭಾವನಾತ್ಮಕ ಹೊರೆಗಳನ್ನು "ಹೊಡೆಯಲು" ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮವಾಗಿದೆ. ಇದು ಅಕ್ಷರಶಃ ಹೊಡೆಯುವುದರ ಬಗ್ಗೆ ಅಲ್ಲ, ಬದಲಾಗಿ ಹತಾಶೆಯನ್ನು ಹೊರಹಾಕುವುದು ಮತ್ತು ಪ್ರೀತಿ ಮತ್ತು ಹೃದಯಾಘಾತದಿಂದ ಉಂಟಾಗುವ ನೋವು ಅಥವಾ ಕೋಪವನ್ನು ಬಿಡುವುದರ ಬಗ್ಗೆ. ಜನರು ತಮ್ಮನ್ನು ತಾವು ಹೊಸ ಆರಂಭಕ್ಕೆ ಪರಿಗಣಿಸಿಕೊಳ್ಳುವ ಮೂಲಕ, ತಾವು ಉತ್ತಮವಾಗಿ ಅರ್ಹರು ಎಂದು ಒಪ್ಪಿಕೊಳ್ಳುವ ಮೂಲಕ ಮತ್ತು ಭಾವನಾತ್ಮಕವಾಗಿ ಮುಂದುವರಿಯುವ ಮೂಲಕ ಆಚರಿಸುತ್ತಾರೆ.

ಇನ್ನುಫೆಬ್ರವರಿ 15ರಂದು ಕಪಾಳಮೋಕ್ಷ (ಸ್ಲ್ಯಾಪ್) ದಿನ, ಫೆಬ್ರವರಿ 16ರಂದು ಒದೆಯುವ (ಕಿಕ್) ದಿನ, ಫೆಬ್ರವರಿ 17ರಂದು ಪರ್ಫ್ಯೂಮ್ ದಿನ, ಫೆಬ್ರವರಿ 18ರಂದು ಫ್ಲರ್ಟ್ ದಿನ, ಫೆಬ್ರವರಿ 19ರಂದು ಕನ್ಫೆಷನ್ ದಿನ, ಫೆಬ್ರವರಿ 20ರಂದು ಮಿಸ್ಸಿಂಗ್ ದಿನ, ಮತ್ತು ಫೆಬ್ರವರಿ 21ರಂದು ಬ್ರೇಕಪ್ ದಿನವನ್ನು ಆಚರಿಸಲಾಗುತ್ತದೆ. ಪ್ರೀತಿಸಿ ಬ್ರೇಕಪ್ ಆಗಿರುವ, ಒಂಟಿಯಾಗಿರುವ ಅಥವಾ ಪ್ರೇಮಕ್ಕೆ ಬೀಳದೆ ಸಿಂಗಲ್ ಆಗಿರುವ ಜನರು ಆ್ಯಂಟಿ ವ್ಯಾಲೆಂಟೈನ್ಸ್ ವೀಕ್‌ನ 7 ದಿನಗಳನ್ನು ಆಚರಿಸುತ್ತಾರೆ.