Poncho Fashion 2025: ಸೀಸನ್ಗೆ ಎಂಟ್ರಿ ಕೊಟ್ಟ ಪೊಂಚೊ ಫ್ಯಾಷನ್ವೇರ್ಸ್
Poncho Fashion 2025: ಮಳೆ-ಚಳಿ-ಗಾಳಿಗೆ ಧರಿಸಿದಾಗ ಬೆಚ್ಚಗಿಡುವುದರೊಂದಿಗೆ ನೋಡಲು ಆಕರ್ಷಕವಾಗಿ ಬಿಂಬಿಸುವ ನಾನಾ ಬಗೆಯ ಪೊಂಚೊ ಫ್ಯಾಷನ್ವೇರ್ಗಳು ಇದೀಗ ಯುವತಿಯರನ್ನು ಸವಾರಿ ಮಾಡತೊಡಗಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಕುರಿತ ವಿವರ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್ -


ಈ ಸೀಸನ್ನಲ್ಲಿ ಪೋಂಚೊ ಫ್ಯಾಷನ್ವೇರ್ಗಳು ಟ್ರೆಂಡಿಯಾಗಿವೆ. ಹೌದು, ಕ್ರೊಶಾದಲ್ಲಿ ಹೆಣೆದ ಕಲರ್ಫುಲ್ ಪೊಂಚೊ, ವೂಲ್ನಲ್ಲಿ ಸಿದ್ಧಪಡಿಸಿದ ಮಾಡರ್ನ್ ಪೊಂಚೊ, ಚೆಚ್ಚಗಿರಿಸುವ ಸ್ಟೈಲಿಶ್ ಪೊಂಚೊ, ಟಾಪ್ನಂತೆ ಕಾಣಿಸುವ ಕ್ರಾಪ್ ಪೊಂಚೊ ಸೇರಿದಂತೆ ನಾನಾ ಬಗೆಯ ಪೊಂಚೋವೇರ್ಸ್ ಯುವತಿಯರ ಫ್ಯಾಷನ್ ಸ್ಟೇಟ್ಮೆಂಟ್ಗೆ ಸೇರಿವೆ.
ಏನಿದು ಪೊಂಚೊ!
ಹಾಗೆಂದು ಇದು ಇಂದಿನ ಫ್ಯಾಷನ್ವೇರ್ ಅಲ್ಲ! ಬಹಳ ಹಿಂದಿನ ಕಾಲದಿಂದಲೂ ನಾನಾ ರೂಪ ಬದಲಿಸುತ್ತಾ, ಬಂದಂತಹ ಫ್ಯಾಷನ್ವೇರ್ ಇದು ಎನ್ನುತ್ತಾರೆ ಫ್ಯಾಷನಿಸ್ಟಾ ಗೋಯಲ್. ಅವರ ಪ್ರಕಾರ, ಈ ಮೊದಲು ಚಳಿಗಾಲದ ಫ್ಯಾಷನ್ನಲ್ಲಿದ್ದ ಈ ಪೊಂಚೊ ಇದೀಗ ಈ ಸೀಸನ್ಗೂ ಕಾಲಿಟ್ಟಿದೆಯಂತೆ.

ಉಲ್ಲನ್ ಪೊಂಚೊ ಫ್ಯಾಷನ್
ಅಂದಹಾಗೆ, ಮೊದಲಿನಿಂದಲೂ ಉಲ್ಲನ್ ಪೊಂಚೊ ಪ್ರಚಲಿತದಲ್ಲಿದೆ. ದೇಹವನ್ನು ಬೆಚ್ಚಗಿಡುವ ಉಲ್ಲನ್ ಪೊಂಚೊಗಳನ್ನು ಹಿಲ್ ಸ್ಟೇಷನ್ಗಳಲ್ಲಿ ವಾಸಿಸುವ ಯುವತಿಯರ ನೆಚ್ಚಿನ ಮೇಲುಡುಗೆಯಾಗಿತ್ತು. ಆದರೆ, ಇದೀಗ ಮಳೆ-ಗಾಳಿಗೆ ಎಲ್ಲಾ ಕಡೆ ಇವನ್ನು ಬಳಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಡಿಸೈನರ್ಸ್.

ನಾನಾ ಫ್ಯಾಬ್ರಿಕ್ನಲ್ಲಿ ಪೊಂಚೊ ಟಾಪ್
ಪೊಂಚೊ ಡಿಸೈನ್ ಮೂಲವಾಗಿಟ್ಟುಕೊಂಡು ನಾನಾ ಫ್ಯಾಬ್ರಿಕ್ನಲ್ಲಿ ಟಾಪ್ ಶೈಲಿಯಲ್ಲಿ ಇವು ಬಿಡುಗಡೆಗೊಂಡಿವೆ. ಇದೀಗ ಎಲ್ಲಾ ಕಾಲದಲ್ಲೂ ಧರಿಸುವಂತೆ ವಿನ್ಯಾಸಗೊಳಿಸಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಲೆಮೆನ್ ಯೆಲ್ಲೊ, ವೈಟ್, ಆರೆಂಜ್, ನಿಯಾನ್, ಕೊಬಾಲ್ಟ್ ಬ್ಲ್ಯೂನಂತಹ ಶೇಡ್ಗಳ ಪೊಂಚೊಗಳು ಇಂದು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ಡಿಸೈನರ್ಗಳು.

ಲೇಯರ್ ಲುಕ್ಗಾಗಿ ಪೊಂಚೊ
ಪೊಂಚೊಗಳನ್ನು ಇತ್ತೀಚೆಗೆ ಲೇಯರ್ ಲುಕ್ನಲ್ಲಿಯೂ ಬಳಸಲಾಗುತ್ತಿದೆ. ಅದರಲ್ಲೂ ಶ್ರಗ್ಸ್ ಬಗೆಯಲ್ಲೂ ಧರಿಸಲಾಗುತ್ತಿದೆ. ಸಾದಾ ಉಡುಪಿನ ಮೇಲೆ ಇವನ್ನು ಧರಿಸಿದಾಗ ನೋಡಲು ಸಂಪೂರ್ಣ ವಿಭಿನ್ನ ಲುಕ್ ನೀಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಪೊಂಚೊ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಎತ್ತರವಿರುವವರಿಗೆ ಆಕರ್ಷಕವಾಗಿ ಕಾಣಿಸುತ್ತವೆ.
- ಟ್ರೆಂಡಿಯಾಗಿರುವ ಡಿಸೈನ್ನದ್ದನ್ನು ಧರಿಸಿ.
- ನೆಕ್ಲೈನ್ ಕೊಂಚ ಫ್ರೀಯಾಗಿರುವಂತವನ್ನು ಆಯ್ಕೆ ಮಾಡಿ.
- ಟಾಸೆಲ್ಸ್ನವು ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.