ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Star Fashion 2026: ಕ್ರಾಪ್‌ ಬ್ಲೇಜರ್‌ ಧರಿಸಿ ಜೆನ್‌ ಜಿ ಸೀರೆ ಫ್ಯಾಷನ್‌ ಫಾಲೋ ಮಾಡಿದ ಅಮಲಾ ಪೌಲ್‌

Amala Paul: ಬಹುಭಾಷಾ ತಾರೆ ಅಮಲಾ ಪೌಲ್‌ ಸಾಲಿಡ್‌ ಕಲರ್‌ನ ಬ್ಲ್ಯಾಕ್‌ ಸೀರೆ ಮೇಲೆ ಕ್ರಾಪ್‌ ಬ್ಲೇಜರ್‌ ಧರಿಸಿ, ಇಂಡೋ-ವೆಸ್ಟರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ಗೆ ಜೆನ್‌ ಜಿ ಯುವತಿಯರು ಫಿದಾ ಆಗಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಜೆನ್‌ ಜಿ ಸೀರೆ ಫ್ಯಾಷನ್‌ ಫಾಲೋ ಮಾಡಿದ ಅಮಲಾ ಪೌಲ್‌

ಚಿತ್ರಗಳು: ಅಮಲಾ ಪೌಲ್‌, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಾಲಿಡ್‌ ಕಲರ್‌ನ ಬ್ಲ್ಯಾಕ್‌ ಸೀರೆಗೆ ಕ್ರಾಪ್‌ ಬ್ಲೇಜರ್‌ ಧರಿಸಿ, ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ಗೆ (Star Fashion 2026) ಸೈ ಎಂದಿದ್ದಾರೆ ಹಾಗೂ ಜೆನ್‌ ಜಿ ಸೀರೆ ಫ್ಯಾಷನ್‌ ಫಾಲೋ ಮಾಡಿದ್ದಾರೆ ಬಹುಭಾಷಾ ತಾರೆ ಅಮಲಾ ಪೌಲ್‌ (Amala Paul). ಹೌದು, ಜೆನ್‌ ಜಿ ಸೀರೆ ಫ್ಯಾಷನನ್ನ್ನು ಫಾಲೋ ಮಾಡಿರುವ ಅಮಲಾ ಪೌಲ್‌ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತಾವು ಕೂಡ ಜೆನ್‌ ಜಿ ಫ್ಯಾಷನ್‌ ಫಾಲೋ ಮಾಡುತ್ತಿರುವುದಾಗಿ ತೋರ್ಪಡಿಸಿಕೊಂಡಿದ್ದಾರೆ.

Crop Blazer

ಅಮಲಾ ಪೌಲ್‌ ಫ್ಯಾಷನ್‌ ಸೆನ್ಸ್

ಅಂದಹಾಗೆ, ಬಹುಭಾಷಾ ನಟಿ ಅಮಲಾ ಪೌಲ್‌ ಮೊದಲಿನಿಂದಲೂ ಸಖತ್‌ ಫ್ಯಾಷೆನಬಲ್‌ ನಟಿ. ಮದುವೆಯಾಗಿ ಮಗುವಾದ ನಂತರವೂ ಮಾಡೆಲ್‌ನಂತೆ ಫಿಟ್ನೆಸ್‌ ಕಾಪಾಡಿಕೊಂಡಿದ್ದಾರೆ. ಮೊದಲಿಗಿಂತ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾದರೂ ಕೂಡ ಆಗಾಗ್ಗೆ ಟ್ರಾವೆಲ್‌ ಫ್ಯಾಷನ್‌ ಇಲ್ಲವೇ ಫ್ಯಾಷನ್‌ಶೂಟ್ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ ಎನ್ನುವ ಫ್ಯಾಷನ್‌ ವಿಮರ್ಶಕರ ಪ್ರಕಾರ, ಅಮಲಾ ಪೌಲ್‌ ಫ್ಯಾಷನ್‌ ಸದಾ ಡಿಫರೆಂಟ್‌ ಆಗಿರುತ್ತದೆ ಎನ್ನುತ್ತಾರೆ.

Amala Paul

ಸೀರೆಗೆ ಅಮಲಾ ಪೌಲ್‌ ಕ್ರಾಪ್‌ ಬ್ಲೇಜರ್‌

ಸೀರೆಗೆ ಗಿಡ್ಡನಾದ ಕ್ರಾಪ್‌ ಬ್ಲೇಜರ್‌ ಧರಿಸುವುದರ ಅಮಲಾ ಪೌಲ್‌ ಸೀರೆ ಪ್ರಿಯರಿಗೆ ಹೊಸ ಐಡಿಯಾ ನೀಡಿದ್ದಾರೆ. ಜತೆಗೆ ಜೆನ್‌ ಜಿಯ ಸೀರೆ ಫ್ಯಾಷನ್‌ಗೆ ಸೈ ಎಂದಿದ್ದಾರೆ.

Indo Western look

ಅಮಲಾ ಪೌಲ್‌ ನಯಾ ಲುಕ್‌ಗೆ ಫುಲ್‌ ಮಾರ್ಕ್ಸ್

ಅಮಲಾ ಪೌಲ್‌ರ ಈ ಸೀರೆ ಲುಕ್‌ಗೆ ಫ್ಯಾಷನ್‌ ವಿಮರ್ಶಕರು ಫುಲ್‌ ಮಾಕರ್ಸ್ ನೀಡಿದ್ದಾರೆ. ಇದು ಇಂಡೋ-ವೆಸ್ಟರ್ನ್‌ ಲುಕ್‌ ಮಾತ್ರವಲ್ಲ, ರ‍್ಯಾಂಪ್‌ ಲುಕ್‌ ಎಂದಿದ್ದಾರೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)