Star Saree Fashion 2026: ಭೂಮಿ ಪೆಡ್ನೇಕರ್ ಉಟ್ಟ ಸ್ಯಾಟಿನ್ ಫ್ಲೋರಲ್ ಸೀರೆಯ ಜಾದೂ
Bhumi Pednekar: ನಟಿ ಭೂಮಿ ಪೆಡ್ನೇಕರ್ ಉಟ್ಟಿದ್ದ ಸ್ಯಾಟಿನ್ ಫ್ಲೋರಲ್ ಸೀರೆ ಇದೀಗ ಯುವತಿಯರನ್ನು ಸಮ್ಮೋಹನಗೊಳಿಸಿದೆ. ರೆಟ್ರೊ ಲುಕ್ ನೀಡುವ ಈ ಸೀರೆಯ ವಿಶೇಷತೆಯಾದರೂ ಏನು? ಅವರಂತೆಯೇ ಕಾಣಿಸುವುದು ಹೇಗೆ? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಭೂಮಿ ಪೆಡ್ನೇಕರ್, ನಟಿ -
ನಟಿ ಭೂಮಿ ಪೆಡ್ನೇಕರ್ ಉಟ್ಟ ಫ್ಲೋರಲ್ ಸ್ಯಾಟೀನ್ ಸೀರೆ ಇದೀಗ ಸೀಸನ್ಗೆ ಮರಳಿವೆ. ಹೌದು, ರೆಟ್ರೋ ಲುಕ್ ನೀಡುವ ಈ ಶೈಲಿಯ ಸೀರೆಗಳು ಗ್ರಾಫಿಕ್ ಫ್ಲೋರಲ್ ಚಿತ್ತಾರ ನಯಾ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಹೊಸತನ ಮೂಡಿಸಿವೆ.
ಭೂಮಿ ಪೆಡ್ನೇಕರ್ ಸ್ಯಾಟಿನ್ ಫ್ಲೋರಲ್ ಸೀರೆ
ಅಂದಹಾಗೆ, ಭೂಮಿ ಪೆಡ್ನೇಕರ್, ಆಶ್ದೀನ್ ಲೈಲೋವಾಲಾ ಬ್ರ್ಯಾಂಡ್ನ ಕೌಡಿಯಾ ಸೀರೆ ಅಂದರೇ, ಲೈಲಾಕ್ /ಲ್ಯಾವೆಂಡರ್ ಶೇಡ್ನ ವಿಂಟೇಜ್ ಲುಕ್ ನೀಡುವ ಫ್ಲೋರಲ್ ಪ್ರಿಂಟ್ಸ್ ಸೀರೆಯನ್ನು ಫ್ಯಾಷನ್ ಶೂಟ್ಗಾಗಿ ಉಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಅಪ್ಲೋಡ್ ಆಗಿದ್ದೇ ತಡ, ಆಗಲೇ ಲೋಕಲ್ ಸೀರೆ ಬ್ರ್ಯಾಂಡ್ಗಳು ತಮ್ಮ ಸೀರೆಗಳನ್ನು ಪ್ರದರ್ಶನಕ್ಕಿರಿಸಿ, ಆನ್ಲೈನ್ನಲ್ಲಿ ಈ ಶೈಲಿಯ ಸೀರೆಗಳ ಮಾರಾಟ ಹೆಚ್ಚಿಸಿಕೊಂಡವು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಭೂಮಿ ಸೀರೆಯ ಸ್ಪೆಷಾಲಿಟಿ
ಒಟ್ಟಿನಲ್ಲಿ, ಭೂಮಿ ಉಟ್ಟ ಈ ಸೀರೆ ವಿಂಟೇಜ್ ಲುಕ್ ನೀಡುವಂತದ್ದಾಗಿದ್ದು, ರೋಮನ್ ಹಾಲಿಡೇ ಕಲೆಕ್ಷನ್ದ್ದಾಗಿದೆ. ಸ್ಕಲೋಪ್ಡ್ ಬಾರ್ಡರ್ ಹೊಂದಿದ್ದು ಹಾಲ್ಟರ್ ನೆಕ್ಲೈನ್ ಇರುವ ಬ್ಲೌಸ್ ಮ್ಯಾಚ್ ಮಾಡಲಾಗಿದೆ.
ಸಾದಾ ಬದಲು ಬಂತು ಪ್ರಿಂಟೆಡ್ ಸ್ಯಾಟಿನ್ ಸೀರೆ
ಇನ್ನು, ಎಲ್ಲರಿಗೂ ಗೊತ್ತಿರುವಂತೆ, ಸಾದಾ ಸ್ಯಾಟಿನ್ ಸೀರೆಗಳು ಮಾತ್ರ ಇನ್ನೂ ಟ್ರೆಂಡ್ನಲ್ಲಿವೆ. ರೆಟ್ರೊ ಲುಕ್ ಕೆಟಗರಿಯಲ್ಲಿದ್ದ, ಸೈಡಿಗೆ ಸರಿದಿದ್ದ ಸ್ಯಾಟಿನ್ ಗ್ರಾಫಿಕ್ ಫ್ಲೋರಲ್ ಸೀರೆಗಳು ಮತ್ತೊಮ್ಮೆ ಎಂಟ್ರಿ ನೀಡಿವೆ. ಬಗೆಬಗೆಯ ಹೂ-ಬಳ್ಳಿಗಳ ಚಿತ್ತಾರಗಳ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಪರಿಣಾಮ, ಮಾನಿನಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ ರಿಯಾ.
ಭೂಮಿಯಂತೆ ಕಾಣಿಸಲು 5 ಟಿಪ್ಸ್
- ಫ್ಲೋರಲ್ ಸ್ಯಾಟೀನ್ ಸೀರೆ ಆಯ್ಕೆ ಮಾಡಿ ಉಡಿ.
- ಹೊಸತನ ಮೂಡಿಸುವಂತಹ ಫ್ಲೋರಲ್ ಚಿತ್ತಾರದ್ದಾಗಿರಲಿ.
- ಇಂಡೋ-ವೆಸ್ಟರ್ನ್ ಲುಕ್ ನೀಡಿ.
- ಗ್ಲಾಮರಸ್ ಬ್ಲೌಸ್ ಧರಿಸಿ.
- ಸಿಂಪಲ್ ಮೇಕೋವರ್ ಮಾಡಿ.