ತನಿಷ್ಕ್ ನ ಫೆಸ್ಟಿವಲ್ ಆಫ್ ಡೈಮಂಡ್ಸ್ ಆಚರಣೆ ಆರಂಭ: ನೂತನ ವಿನ್ಯಾಸಗಳಲ್ಲಿ ಮಿನುಗಲಿವೆ ನೈಸರ್ಗಿಕ ವಜ್ರಗಳ ಆಭರಣಗಳು
ಈ ಬಾರಿಯ ಉತ್ಸವದಲ್ಲಿ ಆಧುನಿಕ ಶೈಲಿ ಹಾಗೂ ನವೀನ ತಂತ್ರಜ್ಞಾನ ಮೇಳೈಸಿದ ದೈನಂದಿನ ನೈಸರ್ಗಿಕ ವಜ್ರದ ಆಭರಣಗಳ ಹೊಸ ಶ್ರೇಣಿಯನ್ನು ಪರಿಚಯಿಸಲಾಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂ(Ananya Pandey)ಡೆ ಈ ಪ್ರಚಾರ ಅಭಿಯಾನದ ನೇತೃತ್ವ ವಹಿಸಿದ್ದು, ಯುವ ಪೀಳಿಗೆಯನ್ನು ಆಕರ್ಷಿಸುವ ಶೈಲಿಯಲ್ಲಿ ಅಭಿಯಾನ ಮೂಡಿಬಂದಿದೆ.
-
ಬೆಂಗಳೂರು: ಟಾಟಾ ಸಮೂಹದ ಭಾರತದ ಪ್ರಮುಖ ಆಭರಣ ರಿಟೇಲ್ ಸಂಸ್ಥೆ ತನಿಷ್ಕ್, ತನ್ನ ಬಹುನಿರೀಕ್ಷಿತ ಫೆಸ್ಟಿವಲ್ ಆಫ್ ಡೈಮಂಡ್ಸ್ ಆಚರಣೆಯನ್ನು ಮರಳಿ ತಂದಿದೆ. ನೈಸರ್ಗಿಕ ವಜ್ರದ ಆಭರಣ ಪ್ರಿಯರಿಗೆ ಇದು ವರ್ಷದ ಅತಿ ದೊಡ್ಡ ಉತ್ಸವವಾಗಿದ್ದು, ದೈನಂದಿನ ಬಳಕೆಯ ಆಭರಣ ಗಳಿಂದ ಹಿಡಿದು ಅದ್ಧೂರಿ ಸಮಾರಂಭಗಳ ಶೈಲಿಯವರೆಗಿನ ವಿಸ್ತಾರವಾದ ಡೈಮಂಡ್ ಸಂಗ್ರಹ ವನ್ನು ಅನ್ವೇಷಿಸಲು ಸೂಕ್ತ ಸಂದರ್ಭವಾಗಿದೆ.
ಈ ಬಾರಿಯ ಉತ್ಸವದಲ್ಲಿ ಆಧುನಿಕ ಶೈಲಿ ಹಾಗೂ ನವೀನ ತಂತ್ರಜ್ಞಾನ ಮೇಳೈಸಿದ ದೈನಂದಿನ ನೈಸರ್ಗಿಕ ವಜ್ರದ ಆಭರಣಗಳ ಹೊಸ ಶ್ರೇಣಿಯನ್ನು ಪರಿಚಯಿಸಲಾಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂ(Ananya Pandey)ಡೆ ಈ ಪ್ರಚಾರ ಅಭಿಯಾನದ ನೇತೃತ್ವ ವಹಿಸಿದ್ದು, ಯುವ ಪೀಳಿಗೆಯನ್ನು ಆಕರ್ಷಿಸುವ ಶೈಲಿಯಲ್ಲಿ ಅಭಿಯಾನ ಮೂಡಿಬಂದಿದೆ. ದೃಶ್ಯ ಭ್ರಮೆಗಳ (ಆಪ್ಟಿಕಲ್ ಇಲ್ಯೂಷನ್) ಆಕರ್ಷಕ ಪರಿಕಲ್ಪನೆಯಿಂದ ಪ್ರೇರಿತವಾದ ಈ ಹೊಸ ಸರಣಿಯು, ಬೆಳಕು ಮತ್ತು ನೋಟದ ಕೋನಕ್ಕೆ ತಕ್ಕಂತೆ ವಜ್ರದ ಹೊಳಪನ್ನು ದ್ವಿಗುಣಗೊಳಿಸುವ ವಿಶಿಷ್ಟ ಶೈಲಿಯನ್ನು ಹೊಂದಿದೆ.
ಇದನ್ನೂ ಓದಿ: Tanishq: ಆಧುನಿಕ ಸ್ಫೂರ್ತಿಗಾಗಿ ನೈಸರ್ಗಿಕ ವಜ್ರಗಳ ಅಭಿವ್ಯಕ್ತಿ 'ಎಲಾನ್' ಅನಾವರಣಗೊಳಿಸಿದ ತನಿಷ್ಕ್
ನಾಲ್ಕು ವಿಶಿಷ್ಟ ವಿನ್ಯಾಸಗಳೊಂದಿಗೆ ರೂಪಿಸಲಾದ ಈ ಆಭರಣ ಶ್ರೇಣಿಯು, ನೈಸರ್ಗಿಕ ವಜ್ರದ ಆಭರಣ ವಿನ್ಯಾಸವನ್ನು ಮರುನಿರೂಪಿಸುವ ತನಿಷ್ಕ್ ನ ನಿರಂತರ ಬದ್ಧತೆಯನ್ನು ತೋರಿಸುತ್ತದೆ. ತನಿಷ್ಕ್ ಪ್ರಥಮ ಬಾರಿಗೆ ಪರಿಚಯಿಸಿರುವ ಭಾರತದ ಮೊದಲ ಸಿಎನ್‌ಸಿ ರೇನ್‌ಬೋ ಪ್ಲೇಟಿಂಗ್ ತಂತ್ರಜ್ಞಾನವು ಬೆಳಕು ಮತ್ತು ನೈಸರ್ಗಿಕ ವಜ್ರಗಳ ನಡುವಿನ ಸಂವಹನವನ್ನು ಹೆಚ್ಚಿಸಿ, ಅವುಗಳ ಕಾಂತಿಯನ್ನು ಇಮ್ಮಡಿಗೊಳಿಸುತ್ತದೆ. ಫ್ಲೋಟಿಂಗ್ ಡೈಮಂಡ್ಸ್ ತಂತ್ರಜ್ಞಾನವು ನೈಸರ್ಗಿಕ ರತ್ನಗಳ ಮೇಲೆ ವಜ್ರಗಳು ತೇಲುತ್ತಿರುವಂತೆ ಭಾಸವಾಗುವಂತೆ ಮಾಡಿ, ವಜ್ರಗಳ ಹೊಳಪಿನತ್ತ ಗಮನ ಸೆಳೆಯುತ್ತದೆ.
ಇನ್ನು ರಿಫ್ಲೆಕ್ಷನ್ ಮತ್ತು ಫಾರ್ಮ್ ಇಲ್ಯೂಷನ್ಸ್ ತಂತ್ರಜ್ಞಾನವು ಪ್ರತಿಯೊಂದು ಕೋನದಿಂದಲೂ ಹೊಸ ಆಯಾಮಗಳನ್ನು ತೆರೆದಿಡುತ್ತಾ, ವಜ್ರದ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಆವಿಷ್ಕಾರ ಗಳು ಒಟ್ಟಾಗಿ ಆಭರಣಗಳಿಗೆ ಅತ್ಯಾಧುನಿಕ, ನವೀನ ಹಾಗೂ ಆಧುನಿಕ ಸ್ಪರ್ಶವನ್ನು ನೀಡುತ್ತವೆ.
ಈ ಹೊಸ ಸಂಗ್ರಹದಲ್ಲಿ ಕಿವಿಯೋಲೆಗಳು, ಉಂಗುರಗಳು, ಪೆಂಡೆಂಟ್, ನೆಕ್ವೇರ್, ಬಳೆಗಳು ಮತ್ತು ಬ್ರೇಸ್ ಲೆಟ್ ಗಳು ಸೇರಿದಂತೆ ವೈವಿಧ್ಯಮಯ ನೈಸರ್ಗಿಕ ವಜ್ರದ ವಿನ್ಯಾಸಗಳು ಲಭ್ಯವಿವೆ. ₹40,000 ರಿಂದ ಆರಂಭವಾಗುವ ಬೆಲೆಗಳಲ್ಲಿ ದೊರೆಯುವ ಈ ಫೆಸ್ಟಿವಲ್ ಆಫ್ ಡೈಮಂಡ್ಸ್, ಮೊದಲ ಬಾರಿಗೆ ವಜ್ರದ ಆಭರಣ ಖರೀದಿಸುವವರಿಂದ ಹಿಡಿದು, ತಮ್ಮ ಸಂಗ್ರಹಕ್ಕೆ ಆಧುನಿಕ ಶೈಲಿಯನ್ನು ಸೇರಿಸಲು ಬಯಸುವ ಪ್ರತಿಯೊಬ್ಬರಿಗೂ ಸೂಕ್ತವಾಗಿದೆ. ಈ ನೂತನ ಸಂಗ್ರಹ ಮಾತ್ರವಲ್ಲದೆ, ಗ್ರಾಹಕರ ಆಯ್ಕೆಗಾಗಿ ತನಿಷ್ಕ್ 10,000ಕ್ಕೂ ಹೆಚ್ಚು ನೈಸರ್ಗಿಕ ವಜ್ರದ ವಿನ್ಯಾಸಗಳನ್ನು ನೀಡುತ್ತಿದೆ.
ಇದಕ್ಕೆ ಪೂರಕವಾಗಿ ಇದೀಗ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅಭಿನಯದ ಹೊಸ ಪ್ರಚಾರ ಜಾಹೀರಾತು ಬಿಡುಗಡೆಯಾಗಿದ್ದು, ಈ ನೂತನ ಜಾಹೀರಾತು ಚಿತ್ರವು ಬೆಳಕು, ಚಲನೆ ಮತ್ತು ವಿಭಿನ್ನ ಕೋನಗಳ ಆಕರ್ಷಕ ಸಂವಹನವನ್ನು ಬಿಂಬಿಸುತ್ತದೆ. ಅನನ್ಯಾ ಅವರು ಈ ಹೊಸ ಆಭರಣಗಳನ್ನು ಪರಿಶೀಲಿಸುತ್ತಿದ್ದಾಗ, ವಜ್ರದ ಅಪಾರ ಕಾಂತಿಯನ್ನು ಕಂಡು ಪುಟ್ಟ ಬಾಲಕಿ ಯೊಬ್ಬಳು "ಲೈಟ್ ಆ ರಹೀ ಹೈ" (ಬೆಳಕು ಬರುತ್ತಿದೆ) ಎನ್ನುತ್ತಾ ಸುತ್ತಲೂ ಇರುವ ಪ್ರತಿಯೊಬ್ಬರಿಗೂ ಸನ್ ಗ್ಲಾಸ್ ಬೇಕು ಎಂದು ಭಾವಿಸುವ ಸನ್ನಿವೇಶ ಆಹ್ಲಾದಕರ ರೀತಿಯಲ್ಲಿ ಮೂಡಿ ಬಂದಿದೆ. ಮುಗ್ಧತೆ, ಹಾಸ್ಯ ಮತ್ತು ವಿಸ್ಮಯ ಭಾವಗಳನ್ನೊಳಗೊಂಡ ಈ ಚಿತ್ರವು ತನಿಷ್ಕ್ ನ ನೈಸರ್ಗಿಕ ವಜ್ರಗಳ ಅದ್ಭುತ ಮಿನುಗುವಿಕೆಯನ್ನು ಸುಂದರವಾಗಿ ತೋರಿಸುತ್ತದೆ.
ಈ ಸಂಗ್ರಹ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ತನಿಷ್ಕ್ ನ ಮುಖ್ಯ ಮಾರುಕಟ್ಟೆ ಅಧಿಕಾರಿ ಶ್ರೀಮತಿ ಪೆಲ್ಕಿ ತ್ಶೆರಿಂಗ್ ಅವರು, "ಈ ವರ್ಷದ ಫೆಸ್ಟಿವಲ್ ಆಫ್ ಡೈಮಂಡ್ಸ್ ಮೂಲಕ, ಅಭೂತಪೂರ್ವ ತಂತ್ರಜ್ಞಾನಗಳು ಹಾಗೂ ವಿಶಿಷ್ಟ ಶೈಲಿಯ ಮೂಲಕ ನೈಸರ್ಗಿಕ ವಜ್ರದ ಆಭರಣ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನೂತನ ಸಂಗ್ರಹವನ್ನು ಪರಿಚಯಿಸಲು ನಾವು ಬಯಸಿದ್ದೆವು. ಪ್ರತಿಯೊಂದು ಆಭರಣವನ್ನು ಗರಿಷ್ಠ ಹೊಳಪನ್ನು ನೀಡುವಂತೆ ಅತ್ಯಂತ ಜಾಗರೂಕತೆಯಿಂದ ರೂಪಿಸಲಾಗಿದೆ.
ಜೊತೆಗೆ, ಇದು ನಾವು ಮುಂಚೆಂದೂ ನೀಡದಿರುವಂತಹ ನವೀನ, ಶೈಲಿಪೂರ್ಣ ಹಾಗೂ ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದೆ. ಈ ನೂತನ ಆವಿಷ್ಕಾರಗಳನ್ನು ಪರಿಚಯಿಸಿಕೊಳ್ಳಲು, ವಿನ್ಯಾಸದ ಮೂಲಕ ಎದ್ದು ಕಾಣುವ ಸಂಗ್ರಹವನ್ನು ವೀಕ್ಷಿಸಲು ಮತ್ತು ಸುಲಭವಾಗಿ ಧರಿಸಬಹುದಾದ ನೈಸರ್ಗಿಕ ವಜ್ರಗಳ ಹೊಸ ರೂಪವನ್ನು ಅನುಭವಿಸಲು ಫೆಸ್ಟಿವಲ್ ಆಫ್ ಡೈಮಂಡ್ಸ್ ಗ್ರಾಹಕರಿಗೆ ನೀಡುತ್ತಿರುವ ಆಹ್ವಾನವಾಗಿದೆ" ಎಂದು ಹೇಳಿದರು.
ಈ ಸಹಯೋಗದ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ ಅನನ್ಯಾ ಪಾಂಡೆ, "ಶೈಲಿ ಎಂಬುದು ವ್ಯಕ್ತಿತ್ವವನ್ನು ವ್ಯಕ್ತಪಡಿಸುವ ಅತ್ಯಂತ ವೈಯಕ್ತಿಕ ಮಾರ್ಗವಾಗಿದೆ. ಈ ಸಂಗ್ರಹವು ಅದನ್ನು ಇಷ್ಟೊಂದು ಅನರೀಕ್ಷಿತ ರೀತಿಯಲ್ಲಿ ಸಂಭ್ರಮಿಸುತ್ತದೆ ಎಂಬುದು ನನಗೆ ತುಂಬಾ ಇಷ್ಟವಾಯಿತು. ಪ್ರತಿಯೊಂದು ಆಭರಣವೂ ಬೆಳಕು, ಚಲನೆ ಮತ್ತು ದೃಷ್ಟಿಕೋನದ ಮೂಲಕ ವಿಭಿನ್ನ ನೋಟ ವನ್ನು ತೆರೆದಿಡುತ್ತದೆ; ಇದು ಹೊಸತನ, ಬಹುಮುಖತೆ ಹಾಗೂ ಅತ್ಯಾಧುನಿಕತೆ ಯನ್ನು ನೀಡುತ್ತದೆ.
ದಿನನಿತ್ಯದ ಕ್ಷಣಗಳಿಗಾಗಿ ಇರಲಿ ಅಥವಾ ವಿಶೇಷ ಸಂದರ್ಭಕ್ಕಿರಲಿ, ಪ್ರತಿಯೊಬ್ಬ ಮಹಿಳೆಯೂ ತನ್ನ ವ್ಯಕ್ತಿತ್ವದ ವಿಭಿನ್ನ ಮಗ್ಗಲುಗಳನ್ನು ವ್ಯಕ್ತಪಡಿಸಲು ಇದು ಅವಕಾಶ ನೀಡುತ್ತದೆ ಎಂಬುದು ನನಗೆ ಅತ್ಯಂತ ವಿಶೇಷವೆನಿಸಿತು. ಇದೇ ಕಾರಣಕ್ಕೆ ಈ ಸಂಗ್ರಹವು ಅತ್ಯಂತ ಆಕರ್ಷಕವಾಗಿ ಮತ್ತು ಉತ್ಸಾಹದಾಯಕವಾಗಿ ಎನಿಸುತ್ತದೆ" ಎಂದರು.
ಈ ಹಬ್ಬದ ಸಂಭ್ರಮಕ್ಕಾಗಿ ತನಿಷ್ಕ್ ನೈಸರ್ಗಿಕ ವಜ್ರದ ಆಭರಣಗಳ ಮೌಲ್ಯದ ಮೇಲೆ ಪೂರ್ಣ ಶೇಕಡಾ 20 ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದು, ಈ ಕೊಡುಗೆಯು 2026ರ ಜುಲೈ 21 ರಿಂದ ಅನ್ವಯವಾಗಲಿದೆ. ಹೆಚ್ಚುವರಿಯಾಗಿ, ಗ್ರಾಹಕರು ತಮ್ಮ ಹಳೆಯ ಆಭರಣಗಳನ್ನು ವಿನಿಮಯ ಮಾಡಿಕೊಂಡು ಕಣ್ಣುಕೋರೈಸುವ ನೂತನ ವಿನ್ಯಾಸಗಳನ್ನು ಪಡೆಯಬಹುದು. ವಜ್ರದ ಆಭರಣ ಗಳ ಖರೀದಿಯ ಮೇಲೆ, 9 ಕ್ಯಾರೆಟ್ ನಷ್ಟು ಕಡಿಮೆ ಇರುವ ಹಳೆಯ ಚಿನ್ನದ ವಿನಿಮಯಕ್ಕೂ ತನಿಷ್ಕ್ ಶೇಕಡಾ 0 ರಷ್ಟು ಕಡಿತ ಸೌಲಭ್ಯ ನೀಡುತ್ತಿದೆ.
ಗ್ರಾಹಕರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು, ಗ್ರಾಹಕರು ಆಯ್ದ ಮಳಿಗೆಗಳಲ್ಲಿ ವಜ್ರ ತಜ್ಞತೆ ಕೇಂದ್ರ (ಡೈಮಂಡ್ ಎಕ್ಸ್ ಪರ್ಟೈಸ್ ಸೆಂಟರ್ - ಡಿ ಎಕ್ಸ್ ಸಿ) ಅನ್ನು ಅನುಭವಿಸಬಹುದು. ಅಲ್ಲಿ ಸುಧಾರಿತ ಮೌಲ್ಯಮಾಪನ ಉಪಕರಣಗಳು ಮತ್ತು ತರಬೇತಿ ಪಡೆದ ರತ್ನಶಾಸ್ತ್ರಜ್ಞರು ಗ್ರಾಹಕರು ತಂದಿರುವ (ಇತರ ಆಭರಣ ಮಳಿಗೆಗಳಿಂದ ಖರೀದಿಸಿದ ವಜ್ರಗಳನ್ನು ಒಳಗೊಂಡಂತೆ) ಯಾವುದೇ ನೈಸರ್ಗಿಕ ವಜ್ರವನ್ನು ಉಚಿತವಾಗಿ ಪರೀಕ್ಷಿಸಲು ನೆರವಾಗುತ್ತಾರೆ.
ವಜ್ರದ ಮೂಲ, ಬೆಳಕಿನ ಕಾರ್ಯಕ್ಷಮತೆ, ಸ್ಪಷ್ಟತೆ ಮತ್ತು ನೈಜತೆಯನ್ನು ಪರೀಕ್ಷಿಸಲು ಈ ಕೇಂದ್ರ ಸಹಾಯ ಮಾಡುತ್ತದೆ, ಹಾಗೂ ಖರೀದಿಯ ಸಮಯದಲ್ಲಿ ನೀಡಿದ ಭರವಸೆಗೆ ಗುಣಮಟ್ಟವು ಸರಿಹೊಂದುತ್ತದೆಯೇ ಎಂದು ಖಚಿತಪಡಿಸುತ್ತದೆ. ಗ್ರಾಹಕರು ಆಯ್ದ ಮಳಿಗೆಗಳಲ್ಲಿ ಈ ಕೇಂದ್ರದ ಅನುಭವ ಪಡೆಯಬಹುದು.