#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಪ್ರೇಮಿಗಳ ವಾರದ 5ನೇ ದಿನ ಯಾವುದೆಂದು ನಿಮ್ಗೊತ್ತಾ?

ಪ್ರೇಮಿಗಳ ದಿನದಂದು (ಫೆ. 14) ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುವ ಮೊದಲು ವಾರಗಳ ಕಾಲ ಆಚರಿಸಲ್ಪಡುವ ವಿವಿಧ ವಿಶೇಷ ದಿನಗಳು ಪ್ರೇಮ ಸೌಧಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ. ವ್ಯಾಲೆಂಟೈನ್ ವೀಕ್‌ನ ಐದನೇ ದಿನವೇ ಪ್ರಾಮಿಸ್ ಡೇ.

ಎಲ್ಲ ಮನಸ್ಸುಗಳಿಗೂ ಭರವಸೆ ತುಂಬುವ ದಿನ ‘ಪ್ರಾಮಿಸ್ ಡೇ’

ಸಾಂದರ್ಭಿಕ ಚಿತ್ರ

Profile Sushmitha Jain Feb 11, 2025 8:00 AM

ಬೆಂಗಳೂರು: ಪ್ರೇಮಿಗಳ ವಾರದ (Valentine’s Week) ಐದನೇ ದಿನ ಅಂದರೆ ಫೆ. 11ರಂದು ‘ಪ್ರಾಮಿಸ್ ಡೇ’ (ಭರವಸೆಯ ದಿನ) (Promise Day) ಎಂದು ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳು ಮತ್ತು ದಂಪತಿ ತಮ್ಮ ಸಂಬಂಧ ಹಾಗೂ ಪ್ರೀತಿಯ ಬಗ್ಗೆ ಭರವಸೆಯನ್ನು ನೀಡುವುದು ವಿಶೇಷ. ಪ್ರೀತಿ, ಬಾಂಧವ್ಯ ಮತ್ತು ಸಂಬಂಧವನ್ನು ಸಂಭ್ರಮಿಸಲು ನಡೆಸುವ ಹಬ್ಬ ಅಥವಾ ಆಚರಣೆ‌ ವ್ಯಾಲೆಂಟೈನ್ಸ್ ಡೇ. 'ಪ್ರೇಮಿಗಳ ದಿನ' ಎಂದು ಕರೆದರೂ, ಜಗತ್ತಿನಾದ್ಯಂತ ಒಂದು ಇಡೀ ವಾರ ಆಚರಿಸುವ ಪ್ರೀತಿಸುವವರ ಹಬ್ಬವಾಗಿದೆ.

ಪ್ರತಿ ವರ್ಷ ಫೆ. 7ರಿಂದ 14ರವರೆಗೂ 'ವ್ಯಾಲೆಂಟೈನ್ಸ್ ವೀಕ್‌' ಎಂದು ಆಚರಿಸಲಾಗುತ್ತದೆ. ಪ್ರೇಮಿಗಳಿಗೆ ಈ ವಾರದ ಒಂದೊಂದು ದಿನವೂ ವಿಶೇಷ ದಿನ ಇರುತ್ತದೆ. ಎಲ್ಲ ಮನಸ್ಸುಗಳಿಗೂ ಭರವಸೆ ತುಂಬುವ ದಿನ ‘ಪ್ರಾಮಿಸ್ ಡೇ’.

ಪ್ರಾಮಿಸ್ (ಭರವಸೆ) ಎನ್ನುವುದು ಸಂಬಂಧಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ತಪ್ಪಲ್ಲ. ಸಂಬಂಧಗಳು ಗಟ್ಟಿಯಾಗಿ ಉಳಿದುಕೊಳ್ಳಲು ಅಗತ್ಯವಾದ ಸಂಗತಿಯೇ ಭರವಸೆ. ನಾನು ನಿನ್ನೊಂದಿಗೆ ಸದಾ ಕಾಲ ಇರುತ್ತೇನೆ ಎಂಬ ಭರವಸೆಯು ಪ್ರೀತಿ ಮತ್ತು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು. ಈ ಹಿನ್ನೆಲೆಯಲ್ಲಿ ಪ್ರಾಮಿಸ್ ಡೇ ಹೆಚ್ಚು ವಿಶೇಷತೆ ಪಡೆದಿದೆ.

ಇದನ್ನೂ ಓದಿ: Valentines Day Nail Art 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ನೇಲ್ ಆರ್ಟ್‌ಗಳಿವು!

ಈ ವಿಶೇಷ ದಿನದ ಮಹತ್ವ ಏನು ಗೊತ್ತಾ?

ಪ್ರಾಮಿಸ್ ಡೇ ಸಂಬಂಧದಲ್ಲಿ ಬದ್ಧತೆ ಮತ್ತು ನಿಷ್ಠೆಯ ಮಹತ್ವವನ್ನು ಒತ್ತಿ ಹೇಳುತ್ತದೆ. ಪ್ರಾಮಿಸ್ ಡೇ ಪ್ರೇಮಿಗಳ ವಾರದ ಐದನೇ ದಿನ. ಇದು ಸಂಬಂಧದಲ್ಲಿ ಬದ್ಧತೆ ಮತ್ತು ನಿಷ್ಠೆಯನ್ನು ಸೂಚಿಸುವ ಅರ್ಥಪೂರ್ಣ ಆಚರಣೆ. ಈ ದಿನವು ಸಂಗಾತಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಒಬ್ಬರಿಗೊಬ್ಬರು ಸದಾ ಜೊತೆಯಾಗಿ ಇರುತ್ತೇವೆ ಎಂದು ಪ್ರಮಾಣ ಮಾಡುವ ದಿನವಿದು.

ಮಹತ್ವ

ಪ್ರೀತಿ ಮತ್ತು ಬೆಂಬಲದ ಅಭಿವ್ಯಕ್ತಿಗಳಿಂದ ಹಿಡಿದು ಭವಿಷ್ಯದ ನಿರ್ದಿಷ್ಟ ಗುರಿಗಳು ಮತ್ತು ಹಂಚಿಕೆಯ ಕನಸುಗಳವರೆಗೆ, ಭರವಸೆಗಳು ಸಂಬಂಧದಲ್ಲಿ ನಂಬಿಕೆ ಮತ್ತು ಬಲವಾದ ಬಂಧವನ್ನು ನಿರ್ಮಿಸಲು ಮೂಲಾಧಾರವಾಗಿದೆ. ಈ ದಿನವು ನಂಬಿಕೆಯನ್ನು ಕಾಪಾಡಿಕೊಳ್ಳಲು, ಸಂಬಂಧಗಳನ್ನು ಬಲಪಡಿಸಲು ಮತ್ತು ಸಂಬಂಧಗಳಲ್ಲಿ ಒಬ್ಬರ ಮಾತನ್ನು ಉಳಿಸಿಕೊಳ್ಳಲು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀಡಿದ ಭರವಸೆಗಳ ಹಿಂದಿನ ಪ್ರಾಮಾಣಿಕತೆ.

ಸುಖ ದುಃಖ, ನೋವು ನಲಿವು ಹೀಗೆ ಯಾವುದೇ ಸಂದರ್ಭ, ಯಾವುದೇ ಸನ್ನಿವೇಶದಲ್ಲಿ ಜತೆಜತೆಯಾಗಿ ಹೆಜ್ಜೆ ಇಡುವುದೇ ಪ್ರೀತಿಯ ದೊಡ್ಡ ಶಕ್ತಿ. ಸಂಬಂಧಗಳು ಗಟ್ಟಿಯಾಗುವುದು, ಬಾಂಧವ್ಯದ ಸವಿಯ ನಿಜದರ್ಶನವಾಗುವುದು ಇಂತಹ ಸಂದರ್ಭದಲ್ಲಿಯೇ. ಹೀಗಾಗಿ, ಪರಸ್ಪರ ವಾಗ್ದಾನ ನೀಡುವುದು ಅತೀ ಮುಖ್ಯ. ಹೀಗೆ ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳುವುದು ಅದಕ್ಕಂತಲೂ ಬಲು ಮುಖ್ಯ.

ಪ್ರೀತಿಯ ಭರವಸೆ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ, ಸವಿಯಾಗಿಸುತ್ತದೆ. ಇದೇ ಕಾರಣಕ್ಕೆ ಪ್ರಾಮಿಸ್ ಡೇಗೆ ಹೆಚ್ಚು ಮಹತ್ವವಿದೆ.