#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Valentines Day Nail Art 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ನೇಲ್ ಆರ್ಟ್‌ಗಳಿವು!

Valentines Day Nail Art 2025: ವ್ಯಾಲೆಂಟೈನ್ಸ್ ವೀಕ್ ಸಂಭ್ರಮಕ್ಕೆ ನಾನಾ ಬಗೆಯ ಹೊಸ ನೇಲ್ ಆರ್ಟ್ ಡಿಸೈನ್‌ಗಳು ಬಿಡುಗಡೆಯಾಗಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ವೈವಿಧ್ಯಮಯ ಹಾರ್ಟ್ ಡಿಸೈನ್‌ಗಳು ಉಗುರುಗಳನ್ನು ಸಿಂಗರಿಸುತ್ತಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ನೇಲ್ ಆರ್ಟ್‌ಗಳಿವು!

ಚಿತ್ರಕೃಪೆ: ಇನ್ಸ್ಟಾಗ್ರಾಮ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್ ವೀಕ್ ಹಿನ್ನೆಲೆಯಲ್ಲಿ, ನೇಲ್ ಆರ್ಟ್‌ನಲ್ಲಿನ ಹಾರ್ಟ್ ಡಿಸೈನ್‌ಗಳು (Valentines Day Nail Art 2025) ಪ್ರತಿಬಾರಿಯಂತೆ ಈ ಬಾರಿಯೂ ಹೊಸ ರೂಪದಲ್ಲಿ ಕಾಣಿಸಿಕೊಂಡಿವೆ. ನೇಲ್ ಆರ್ಟ್ ಡಿಸೈನರ್ ರಂಜಿತಾ ಪ್ರಕಾರ, ವ್ಯಾಲೆಂಟೇನ್ಸ್ ಡೇ ಅಥವಾ ವೀಕ್ ಸೀಸನ್‌ನಲ್ಲಿ, ವೈವಿಧ್ಯಮಯ ಡಿಸೈನ್‌ನ ಹೃದಯಾಕಾರಗಳು ಅಂದರೆ, ಹಾರ್ಟ್ ಡಿಸೈನ್ಸ್, ನೇಲ್ ಆರ್ಟ್ ಪ್ರಿಯರ ಉಗುರುಗಳ ಮೇಲೆ ಲಗ್ಗೆ ಇಡುತ್ತವೆ. ಇದಕ್ಕೆ ಪೂರಕ ಎಂಬಂತೆ, ಪ್ರತಿ ಬಾರಿಯೂ ಒಂದಿಷ್ಟು ಥೀಮ್ ಬಿಡುಗಡೆಗೊಳ್ಳುತ್ತವೆ. ನಾನಾ ಕಲರ್‌ನ ಹೃದಯದ ಚಿತ್ತಾರಗಳು ಜತೆಗೆ ಲವ್ ಕೋಟ್ಸ್ ಡಿಸೈನ್‌ಗಳು ಹುಡುಗಿಯರ ನೇಲ್ ಸಿಂಗರಿಸುತ್ತವೆ ಎನ್ನುತ್ತಾರೆ ಡಿಸೈನರ್ಸ್.

11

ಮಿನುಗುವ ಪ್ರೆಸ್ ಆನ್ ಕ್ರಿಸ್ಟಲ್ ಹಾರ್ಟ್ಸ್

ಒಂದೆರೆಡು ಶೈನಿಂಗ್ ನೇಲ್ ಪಾಲಿಶ್ ಕೋಟ್ ಹಚ್ಚಿದ ನಂತರ ರೆಡಿಯಾಗಿ ದೊರಕುವ ಸ್ಟಿಕ್ಕರ್ ಮಾದರಿಯ ಕ್ರಿಸ್ಟಲ್ ಹಾರ್ಟ್‌ಗಳನ್ನು ಉಗುರುಗಳ ಮೇಲೆ ಅಂಟಿಸುವುದೇ ಈ ಡಿಸೈನ್‌ನ ವಿಶೇಷತೆ.

13

ಉಗುರಿನ ಮೇಲೆ ಮಿನುಗುವ ಶೈನಿಂಗ್ ಹಾರ್ಟ್ಸ್

ಶೈನಿಂಗ್ ನೇಲ್‌ಕೋಟ್‌ಗಳನ್ನು ಹಚ್ಚಿ ಡಿಸೈನ್ ಮಾಡಲಾಗುವ ಶೈನಿಂಗ್ ಹಾರ್ಟ್ ಡಿಸೈನ್, ಕಾರ್ಪೋರೇಟ್ ಕ್ಷೇತ್ರದ ಹುಡುಗಿಯರನ್ನು ಬರಸೆಳೆದಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ವಿನ್ಯಾಸದ ನೇಲ್ ಆರ್ಟ್ ನೇಲ್ ಸಲೂನ್‌ನಲ್ಲಿ ಮಾತ್ರವಲ್ಲ, ಮನೆಯಲ್ಲಿಯೂ ಚಿತ್ರಿಸಬಹುದು. ಆದರೆ, ಅದಕ್ಕಾಗಿ ಮತ್ತೊಬ್ಬರ ಸಹಾಯ ಬೇಕಾಗಬಹುದು. ಪ್ರೆಸ್ ಆನ್ ನೇಲ್ ಆದಲ್ಲಿ, ಉಗುರುಗಳಿಗೆ ಖುದ್ದು ಅಂಟಿಸಿಕೊಳ್ಳಬಹುದು. ಈ ವಿನ್ಯಾಸ ಟ್ರೆಂಡಿಯಾಗಿರುವುದರಿಂದ ಇತ್ತೀಚೆಗೆ ಎಲ್ಲಾ ವರ್ಗದ ಹುಡುಗಿಯರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಾರೆ ನೇಲ್ ಸಲೂನ್ ಡಿಸೈನರ್ ನೇಹಾ. ಅವರ ಪ್ರಕಾರ, ಇವು ನೋಡಲು ಸುಂದರವಾಗಿ ಕಾಣುತ್ತವೆ. ಮಾತ್ರವಲ್ಲ, ರಾತ್ರಿ ವೇಳೆ ಲೈಟಿಂಗ್ಸ್‌ನಲ್ಲಿ ಇವು ಮಿನುಗುತ್ತವೆ ಎನ್ನುತ್ತಾರೆ.

12

ಈ ಸುದ್ದಿಯನ್ನೂ ಓದಿ | Valentine’s Chocolate Day Speacial 2025: ವ್ಯಾಲೆಂಟೈನ್ಸ್ ವೀಕ್ ಗಿಫ್ಟ್ ಟಾಪ್ ಲಿಸ್ಟ್‌ನಲ್ಲಿ ಹಾರ್ಟ್ ಶೇಪ್ ಚಾಕೊಲೇಟ್ಸ್

ವ್ಯಾಲೆಂಟೈನ್ಸ್ ಡೇ ನೇಲ್‌ ಹಾರ್ಟ್ ಪ್ರಿಯರಿಗೆ ಟಿಪ್ಸ್

  • ನಾನಾ ಕಲರ್ ಹಾಗೂ ಡಿಸೈನ್‌ನ ನೇಲ್ ಹಾರ್ಟ್ ಸ್ಟಿಕ್ಕರ್ಸ್ ಇನ್‌ಸ್ಟಂಟ್ ಡಿಸೈನ್‌ಗೆ ಬಳಸಬಹುದು.
  • ನೇಲ್ ಡಿಸೈನ್ ಮಾಡಿಸಲಾಗದಿದ್ದಲ್ಲಿ, ನೀವು ಪ್ರೆಸ್ ಆನ್ ಡಿಸೈನರ್ ನೇಲ್‌ಗಳನ್ನು ಖರೀದಿಸಿ, ಉಗುರಿಗೆ ಚಿತ್ತಾರ ಮೂಡಿಸಬಹುದು.
  • ನೇಲ್ಆರ್ಟ್ ಆರಂಭಿಸುವ ಮುನ್ನ ಮೆನಿಕ್ಯೂರ್ ಮಾಡಿಸಿ.
  • ನೇಲ್ ಆರ್ಟ್ ಸಲೂನ್‌ನಲ್ಲಿ ಡಿಸೈನ್ ಮಾಡಿಸಿದ್ದಲ್ಲಿ ಅದು ಉಗುರು ಬೆಳೆಯುವವರೆಗೂ ಮಾಸುವುದಿಲ್ಲ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)