ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಕುಬೇರ ದಿಕ್ಕು ಅಥವಾ ಅಗ್ನಿ ಮೂಲೆ- ಅಡುಗೆ ಮನೆ ಎಲ್ಲಿದ್ದರೆ ಒಳ್ಳೆಯದು? ಇಲ್ಲಿದೆ ಉತ್ತರ

ಅಡುಗೆ ಮನೆಯಲ್ಲಿ ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಇಟ್ಟರೂ ವಾಸ್ತು ದೋಷ ಎದುರಾಗಲಿದ್ದು, ಮನೆಯಲ್ಲಿ ಕಲಹ ಅಸಮಾಧಾನದ ವಾತಾವರಣ ನಿರ್ಮಾಣವಾಗುತ್ತದೆ. ಅಡುಗೆ ಮನೆಯಲ್ಲಿ ವಾಸ್ತು ಸಲಹೆಯ ಪ್ರಕಾರ ಯಾವ ವಸ್ತುಗಳನ್ನು ಇಡಬಾರದು..? ಸಿಂಕ್ ಎಲ್ಲಿರಬೇಕು..? ಅಡುಗೆ ಮನೆ ಕುಬೇರ ಅಥವಾ ಅಗ್ನಿ ಮೂಲೆಯಲ್ಲಿರಬೇಕಾ..? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಸಾಂದರ್ಭಿಕ ಚಿತ್ರ

ಬೆಂಗಳೂರು: ಅಡುಗೆ ಮನೆ(Kitchen), ಮನೆಯ ಅತ್ಯಂತ ಪ್ರಮುಖ ಭಾಗ. ಕುಟುಂಬದ ಒಗ್ಗಟ್ಟು, ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿರುವ ಈ ಸ್ಥಳವನ್ನು ವಾಸ್ತು ಶಾಸ್ತ್ರದ(Vastu Shastra) ನಿಯಮಗಳಂತೆ ರೂಪಿಸಿದರೆ ಮಾತ್ರ ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ತಪ್ಪಾದ ವಿನ್ಯಾಸದಿಂದ ನಿಮ್ಮ ಮನಸ್ಸಿಗೆ ಬಂದಂತೆ ವಾಸ್ತು ನಿಯಮಗಳಿಗೆ ವಿರುದ್ಧವಾಗಿ ಅಡುಗೆ ಮನೆ ನಿರ್ಮಿಸಿದ್ದರೆ ಅ ಶಾಂತಿ, ಅನಾರೋಗ್ಯ ಸಮಸ್ಯೆಗಳು ಹಾಗೂ ಆರ್ಥಿಕ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ಅಡುಗೆ ಮನೆಯಲ್ಲಿ ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಇಟ್ಟರೂ ವಾಸ್ತು ದೋಷ ಎದುರಾಗಲಿದ್ದು, ಮನೆಯಲ್ಲಿ ಕಲಹ ಅಸಮಾಧಾನದ ವಾತಾವರಣ ನಿರ್ಮಾಣವಾಗುತ್ತದೆ.

ಹಾಗಾದರೆ ಅಡುಗೆ ಮನೆಯಲ್ಲಿ ವಾಸ್ತು ಸಲಹೆಯ(Vastu Tips) ಪ್ರಕಾರ ಯಾವ ವಸ್ತುಗಳನ್ನು ಇಡಬಾರದು..? ಸಿಂಕ್ ಎಲ್ಲಿರಬೇಕು..? ಅಡುಗೆ ಮನೆ ಕುಬೇರ ಅಥವಾ ಅಗ್ನಿ ಮೂಲೆಯಲ್ಲಿರಬೇಕಾ..? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ವಾಸ್ತು ಶಾಸ್ತ್ರದಲ್ಲಿ ಅಗ್ನಿ, ಜಲ, ಭೂಮಿ, ವಾಯು ಮತ್ತು ಆಕಾಶ ಎಂಬ ಐದು ತತ್ವಗಳಿಗೆ ವಿಶೇಷ ಮಹತ್ವ ಇದೆ. ಈ ತತ್ವಗಳಿಗೆ ಹೊಂದುವ ಬಣ್ಣಗಳನ್ನು ಅಡುಗೆ ಮನೆಯಲ್ಲಿ ಬಳಸಿದರೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಉದಾಹರಣೆಗೆ ಅಗ್ನಿ ತತ್ವಕ್ಕೆ ಕೆಂಪು, ಭೂಮಿಗೆ ಹಳದಿ, ನೀರಿಗೆ ನೀಲಿ, ವಾಯು/ಮೆಟಲ್‌ಗೆ ಗ್ರೇ ಬಣ್ಣಗಳನ್ನು ಬಳಸಬೇಕು.

Astro Tips: ಆರ್ಥಿಕ ಕಷ್ಟಗಳಿಂದ ಬಳಲ್ತಿದ್ದೀರಾ? ಹಾಗಾದ್ರೆ ಸೋಮವಾರದಂದು ಈ ಸರಳ ಕ್ರಮಗಳನ್ನು ಅನುಸರಿಸಿ

ಅಡುಗೆ ಮನೆ ಸದಾ ಅಗ್ನಿ ದಿಕ್ಕು (ಆಗ್ನೇಯ) ನಲ್ಲೇ ಇರಬೇಕು. ಈ ದಿಕ್ಕಿನ ಅಧಿಪತಿ ಶುಕ್ರನಾಗಿದ್ದು, ಸಂಪತ್ತಿನ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಒಲೆ ಆಗ್ನೇಯ ಮೂಲೆಯಲ್ಲಿ ಇರಬೇಕು. ಆದರೆ ಸಿಂಕ್ ಅನ್ನು ಅದೇ ಕಡೆ ಇಡುವುದು ಸೂಕ್ತವಲ್ಲ. ನೀರಿನ ಅಂಶ ಅಗ್ನಿ ವಲಯದಲ್ಲಿ ಹೆಚ್ಚಾದರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಸಿಂಕ್ ಅನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ಈಗಾಗಲೇ ನೀವು ನಿಮ್ಮ ಮನೆಯಲ್ಲಿ ತಪ್ಪಾಗಿ ಸಿಂಕ್ ಅಳವಡಿಸಿದ್ದರೆ ಅದರ ಕೆಳಭಾಗಕ್ಕೆ ಹಳದಿ ಬಣ್ಣ ಬಳಿಯುವ ಮೂಲಕ ಪರಿಹಾರ ಮಾಡಿಕೊಳ್ಳಬಹುದು.

ಹಾಗೇ ಒಲೆ ಮತ್ತು ಸಿಂಕ್ ಅನ್ನು ಅಕ್ಕಪಕ್ಕ ಇಡುವುದೂ ವಾಸ್ತು ಶಾಸ್ತ್ರಕ್ಕೆ ವಿರೋಧವಾಗಿದೆ. ಮಧ್ಯದಲ್ಲಿ ತರಕಾರಿ ಕತ್ತರಿಸುವ ಮಣೆ ಇಟ್ಟರೆ ಅಗ್ನಿ–ಜಲ ಶಕ್ತಿಗಳು ಸಮತೋಲನದಲ್ಲಿರುತ್ತವೆ. ಮೂರು ಒಲೆಗಳ ಗ್ಯಾಸ್ ಸ್ಟವ್‌ಗಿಂತ ನಾಲ್ಕು ಒಲೆಗಳ ಸ್ಟವ್ ಶುಭಕರವೆಂದು ಶಾಸ್ತ್ರ ಹೇಳುತ್ತದೆ.

ಅಡುಗೆ ಮನೆಯಲ್ಲಿ ಔಷಧಿ ಬಾಟಲ್‌ಗಳನ್ನು ಇಡಬಾರದು. ಅಡುಗೆ ಮನೆಯ ಮೇಲ್ಭಾಗದಲ್ಲಿ ಅಥವಾ ಪಕ್ಕದಲ್ಲಿ ಶೌಚಾಲಯ/ಸ್ನಾನಗೃಹ ಇದ್ದರೆ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆ ಸ್ಥಳದಲ್ಲಿ ಕೆಂಪು ಬಣ್ಣದ ಬಲ್ಬ್‌ನ್ನು 24 ಗಂಟೆಗಳೂ ಉರಿಯುವಂತೆ ಇಡುವುದು ಪರಿಹಾರವಾಗಿದೆ.

ಇನ್ನು ಸ್ಟೋರ್ ಅನ್ನು ನೈರುತ್ಯ ದಿಕ್ಕಿನಲ್ಲಿ ಮಾಡಬೇಕು. ಫ್ರಿಡ್ಜ್ ನೀರಿನ ಅಂಶಕ್ಕೆ ಸಂಬಂಧಿಸಿದುದರಿಂದ ಉತ್ತರ ದಿಕ್ಕಿನಲ್ಲಿ ಇಡುವುದು ಒಳಿತು. ದವಸ ಧಾನ್ಯದಲ್ಲಿ ತೊಂದರೆಗಳಿದ್ದರೆ ಶುಕ್ರವಾರ ಅಗ್ನಿದೇವನಿಗೆ ತುಪ್ಪ ನೈವೇದ್ಯ ಮಾಡಿ ಈಶಾನ್ಯ ವಲಯದಲ್ಲಿ ಇಡುವುದರಿಂದ ದಾರಿದ್ರ್ಯ ನಿವಾರಣೆ ಮತ್ತು ಮನೆ ಅಭಿವೃದ್ಧಿ ಕಾಣಬಹುದು ಎಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ.