Winter Woolen Accessories 2025: ಚಳಿಗಾಲದಲ್ಲಿ ಯುವತಿಯರನ್ನು ಸಿಂಗರಿಸುತ್ತಿರುವ 3 ಶೈಲಿಯ ವುಲ್ಲನ್ ಆಕ್ಸೆಸರೀಸ್
Winter Woolen Accessories 2025: ಚಳಿಗಾಲದಲ್ಲಿ ಕಲಾತ್ಮಕವಾಗಿ ಸಿದ್ಧಪಡಿಸಿರುವ ವುಲ್ಲನ್ ಆಕ್ಸೆಸರೀಸ್‌ಗಳು ಯುವತಿಯರನ್ನು ಸಿಂಗರಿಸುತ್ತಿವೆ. ನೋಡಲು ಕಲರ್‌ಫುಲ್ ಆಗಿ ಕಾಣಿಸುವ ಇವು, ಕೈಗಳಿಗೆ ಬೆಚ್ಚನೆಯ ಅನುಭವ ನೀಡುವುದರ ಜತೆಗೆ ಕಲಾತ್ಮಕ ಲುಕ್ ನೀಡುತ್ತಿವೆ. ದೇಸಿ ಫ್ಯಾಷನ್ ಆಕ್ಸೆಸರೀಸ್ ಪ್ರಿಯರಿಗೆ ಇವು ಪ್ರಿಯವಾಗುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿಚಾ. ಅವು ಯಾವುವು? ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ ವುಲ್ಲನ್ ಆಕ್ಸೆಸರೀಸ್‌ಗಳು (Winter Woolen Accessories 2025) ಯುವತಿಯರನ್ನು ಅಲಂಕರಿಸುತ್ತಿವೆ. ಅವುಗಳಲ್ಲಿ, ಹ್ಯಾಂಡ್‌ಮೇಡ್ ವುಲ್ಲನ್ ಬ್ಯಾಂಗಲ್ಸ್, ಕೈ ಉಂಗುರಗಳು ಹಾಗೂ ಕಿವಿಯೊಲೆಗಳು ಹೆಚ್ಚು ಟ್ರೆಂಡಿಯಾಗಿವೆ. ನೋಡಲು ಕಲರ್‌ಫುಲ್ ಆಗಿ ಕಾಣಿಸುವ ಇವು, ಕೈಗಳಿಗೆ ಬೆಚ್ಚನೆಯ ಅನುಭವ ನೀಡುವುದರ ಜತೆಗೆ ಕಲಾತ್ಮಕ ಲುಕ್ ನೀಡುತ್ತಿವೆ. ದೇಸಿ ಫ್ಯಾಷನ್ ಆಕ್ಸೆಸರೀಸ್ ಪ್ರಿಯರಿಗೆ ಇವು ಪ್ರಿಯವಾಗುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿಚಾ.
ಬಣ್ಣ ಬಣ್ಣದ ವುಲ್ಲನ್ ಬಳೆಗಳು
ನಾನಾ ವರ್ಣದ ವುಲ್ಲನ್ ದಾರದಿಂದ ನಿಟ್ಟಿಂಗ್ ಮಾಡಿರುವ ಹ್ಯಾಂಡ್‌ಮೇಡ್ ಬ್ಯಾಂಗಲ್ಸ್ ದೇಸಿ ಫ್ಯಾಷನ್ ಆಕ್ಸೆಸರೀಸ್ ಲಿಸ್ಟ್‌ನಲ್ಲಿ ಸೇರಿವೆ. ನೋಡಲು ಆಕರ್ಷಕವಾದ ಡಿಸೈನ್‌ಗಳಲ್ಲಿವೆ. ಸಿಂಗಲ್ ಕಲರ್, ಡಬಲ್ ಕಲರ್, ಮಲ್ಟಿಕಲರ್, ರೇನ್ ಬೋ ಕಲರ್ ವುಲ್ಲನ್ ದಾರಗಳನ್ನು ಬಳಸಿ ಕಲಾತ್ಮಕವಾಗಿ ಹಾಗೂ ಕ್ರಿಯಾತ್ಮಕವಾಗಿ ಸಿದ್ಧಪಡಿಸಲಾಗಿರುತ್ತದೆ.
ಕಿವಿಯೊಲೆಗಳು
ನೋಡಲು ಕಲರ್‌ಫುಲ್ ಆಗಿರುವ ಕಿವಿಯೊಲೆಗಳು, ಬ್ಯಾಂಗಲ್‌ಗಳಿಗೆ ಮ್ಯಾಚ್ ಮಾಡಿ ಧರಿಸಬಹುದು. ಸ್ಟಡ್ಸ್ ಸೇರಿದಂತೆ ಹ್ಯಾಂಗಿಂಗ್ಸ್ ಶೈಲಿಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ಫಿಂಗರ್ ರಿಂಗ್ ಡಿಸೈನ್ಸ್
ಇನ್ನು, ವುಲ್ಲನ್ ಫಿಂಗರ್ ರಿಂಗ್‌ಗಳಲ್ಲಿ ಇದೀಗ ಹೂವು, ಹಣ್ಣು, ರಂಗೋಲಿ ಡಿಸೈನ್, ಪೋಂ ಪೋಂ ಡಿಸೈನ್, ಸ್ಟಾರ್, ಮೂನ್ ಹೀಗೆ ಕ್ರಿಯಾತ್ಮಕವಾಗಿ ವುಲ್ಲನ್‌ನಲ್ಲಿ ವಿನ್ಯಾಸಗೊಳಿಸಿರುವ ಸಾಫ್ಟ್ ಫಿಂಗರ್ ರಿಂಗ್‌ಗಳು ಸಾಮಾನ್ಯವಾಗಿವೆ.
ಹ್ಯಾಂಡ್‌ಮೇಡ್ ಆಕ್ಸೆಸರೀಸ್
ಆನ್‌ಲೈನ್‌ನಲ್ಲಿ ಈ ಕುರಿತ ಟ್ಯೂಷನ್ ನೀಡುವ ಯೂಟ್ಯೂಬ್ ಚಾನೆಲ್‌ಗಳಿವೆ. ಅವುಗಳನ್ನು ನೋಡಿ ನೀವು ಸಿದ್ಧಪಡಿಸಬಹುದು. ವುಲ್ಲನ್ ಆಕ್ಸೆಸರೀಸ್‌ಗಳನ್ನು ನಿಟ್ಟಿಂಗ್‌ನಲ್ಲಿ ಹೇಗೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬಹುದು. ಈ ಕುರಿತ ಸಾಕಷ್ಟು ವಿಡಿಯೋಗಳು ಯ್ಯೂಟೂಬ್‌ನಲ್ಲಿ ಲಭ್ಯವಿದೆ ಎನ್ನುತ್ತಾರೆ ವುಲ್ಲನ್ ಹ್ಯಾಂಡ್‌ಮೇಡ್ ಆಕ್ಸೆಸರೀಸ್ ಕಲಾವಿದೆ ಸಾನ್ವಿ ಹಾಗೂ ದಿಶಾ.
ಈ ಸುದ್ದಿಯನ್ನೂ ಓದಿ | Winter Denim Crop Top Fashion: ವಿಂಟರ್‌ನಲ್ಲಿ ಹೀಗಿರಲಿ ಬಿಂದಾಸ್ ಡೆನಿಮ್ ಕ್ರಾಪ್ ಟಾಪ್ ಸ್ಟೈಲಿಂಗ್!
ವುಲ್ಲನ್ ಆಕ್ಸೆಸರೀಸ್ ಪ್ರಿಯರೇ ಗಮನಿಸಿ
- ಮಲ್ಟಿ ಕಲರ್‌ನವು ಎಲ್ಲಾ ಔಟ್‌ಫಿಟ್‌ಗಳಿಗೆ ಮ್ಯಾಚ್ ಆಗುತ್ತವೆ.
- ವಿಂಟರ್ ಸೀಸನ್‌ನಲ್ಲಿ ಇವು ನಿಟ್ಟೆಡ್ವೇರ್ ಜತೆಗೆ ಆಕರ್ಷಕವಾಗಿ ಕಾಣಿಸುತ್ತವೆ.
- ಯಾವುದೇ ಕಾರಣಕ್ಕೂ ನೀರು ತಾಗಿಸಕೂಡದು. ಬಣ್ಣ ಮಾಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)