Winter Denim Crop Top Fashion: ವಿಂಟರ್‌ನಲ್ಲಿ ಹೀಗಿರಲಿ ಬಿಂದಾಸ್ ಡೆನಿಮ್ ಕ್ರಾಪ್ ಟಾಪ್ ಸ್ಟೈಲಿಂಗ್!
Winter Denim Crop Top Fashion: ಬಿಂದಾಸ್ ಲುಕ್ ನೀಡುವ ಡೆನಿಮ್ ಕ್ರಾಪ್ ಟಾಪ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯ ಟಾಪ್‌ಗಳು ಯುವತಿಯರನ್ನು ಸೆಳೆದಿವೆ? ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಇಲ್ಲಿದೆ ಡಿಟೇಲ್ಸ್.
| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್ ಕ್ರಾಪ್ ಟಾಪ್‌ಗಳು (Winter Denim Crop Top Fashion) ಈ ಮಿಡ್ ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಬಿಂದಾಸ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇನ್ನು, ಕೇವಲ ಪ್ಯಾಂಟ್, ಜಾಕೆಟ್ ಹಾಗೂ ಫ್ರಾಕ್‌ಗೆ ಸೀಮಿತವಾಗಿದ್ದ, ಈ ಡೆನಿಮ್ ಫ್ಯಾಬ್ರಿಕ್ ಇದೀಗ ಕ್ರಾಪ್ ಟಾಪ್ ಆಗಿ ಹಿಟ್ ಲಿಸ್ಟ್ ಸೇರಿದೆ.
ಅಟ್ರಾಕ್ಟಿವ್ ಲುಕ್‌ಗಾಗಿ ಡೆನಿಮ್ ಕ್ರಾಪ್ ಟಾಪ್
ಸ್ಟೈಲಿಸ್ಟ್ ಜೆನ್ ಪ್ರಕಾರ, ಜೀನ್ಸ್, ಸ್ಕರ್ಟ್, ಕ್ಯುಲ್ಲೋಟ್ಸ್, ಶಾಟ್ರ್ಸ್, ಕೇಪ್ರೀಸ್, ಶಾರ್ಟ್ಸ್ ಹೀಗೆ ನಾನಾ ಬಗೆಯ ಉಡುಪುಗಳೊಂದಿಗೆ ಮಿಕ್ಸ್ ಮ್ಯಾಚ್ ಮಾಡಬಹುದಾದ ಈ ಡೆನಿಮ್ ಕ್ರಾಪ್ ಟಾಪ್‌ಗಳು, ಬಿಂದಾಸ್ ಲುಕ್ ನೀಡುವುದರೊಂದಿಗೆ ಆಕರ್ಷಕವಾಗಿ ಕಾಣಿಸುತ್ತವೆ.
ಟ್ರೆಂಡಿಯಾಗಿರುವ ಡೆನಿಮ್ ಕ್ರಾಪ್ ಟಾಪ್ಸ್
ಇದೀಗ ಸ್ಟ್ರಾಪ್ ಇರುವಂತಹ ಸ್ಪೆಗೆಟಿ ಶೈಲಿಯ ಕ್ರಾಪ್ ಟಾಪ್ ಅತಿ ಹೆಚ್ಚು ಜನಪ್ರಿಯಗೊಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಲೈಟ್‌ವೇಟ್‌ನಲ್ಲಿ ಇವು ಬಿಡುಗಡೆಗೊಂಡಿರುವುದು ಹುಡುಗಿಯರನ್ನು ಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಹರ್ಷ್.
ಸ್ಲಿಮ್ ಹುಡುಗಿಯರ ಫೆವರೇಟ್ ಲಿಸ್ಟ್‌ನಲ್ಲಿ ಡೆನಿಮ್ ಕ್ರಾಪ್ ಟಾಪ್
ಡೆನಿಮ್ ಕ್ರಾಪ್ ಟಾಪ್‌ಗಳು, ಧರಿಸಿದಾಗ ಬೆಲ್ಲಿಯ ಮೇಲ್ಭಾಗದಲ್ಲಿ ನಿಲ್ಲುತ್ತವೆ. ಇದರಿಂದಾಗಿ ಧರಿಸಿದವರ ಗ್ಲಾಮರಸ್ ಲುಕ್ ಹೆಚ್ಚುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಕ್ಷಾ. ಅವರ ಪ್ರಕಾರ, ಟೀನೇಜ್ ಹುಡುಗಿಯರ ಫೇವರೇಟ್ ಲಿಸ್ಟ್‌ನಲ್ಲಿ ಇವು ಸೇರಿಕೊಂಡಿವೆ ಎನ್ನುತ್ತಾರೆ.
ಲೇಯರ್ ಲುಕ್ ಸ್ಟೈಲಿಂಗ್
ಡೆನಿಮ್ ಕ್ರಾಪ್ ಟಾಪ್‌ಗೂ ಲೇಯರ್ ಲುಕ್ ! ಎಂದರೇ ಅಚ್ಚರಿಯಾಗಬಹುದು! ಆದರೆ, ಅದರ ಮೇಲೆ ಜಾಕೆಟ್, ಟ್ರೆಂಚ್‌ಕೋಟ್, ಹೂಡಿ ಕೋಟ್, ಬ್ಲೇಝರ್ ಕೂಡ ಧರಿಸಿ ಲೇಯರ್ ಲುಕ್ ನೀಡಬಹುದು. ಸರಿಯಾಗಿ ಸ್ಟೈಲಿಂಗ್ ಮಾಡಬೇಕಷ್ಟೇ! ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಈ ಸುದ್ದಿಯನ್ನೂ ಓದಿ | Winter Partywear Fashion 2025: ವಿಂಟರ್ ಪಾರ್ಟಿವೇರ್ಸ್‌ಗೂ ಸಿಕ್ತು ಲೇಯರ್ಡ್ ಲುಕ್!
ಡೆನಿಮ್ ಕ್ರಾಪ್ ಟಾಪ್ ಸ್ಟೈಲಿಂಗ್ ಟಿಪ್ಸ್
* ಸ್ಲಿವ್ಲೆಸ್, ಬಾಡಿಕಾನ್, ಹಾಲ್ಟರ್ ನೆಕ್, ಬಾರ್ಡಟ್ ಸ್ಟೈಲ್‌ನವು ಗ್ಲಾಮರಸ್ ಲುಕ್ ನೀಡುತ್ತವೆ.
* ಡೆನಿಮ್ ಧರಿಸಿದಾಗ ಹೆಚ್ಚೆಚ್ಚು ಜ್ಯುವೆಲರಿ ಧರಿಸುವುದು ಬೇಡ!
* ಡಿಸೆಂಟ್ ಲುಕ್‌ಗಾಗಿ ಲೇಯರ್ ಲುಕ್ ನೀಡಬಹುದು.
* ಸ್ಯಾಂಡಲ್ಸ್ ಬದಲು ಸ್ನೀಕರ್ಸ್ ಅಥವಾ ಶೂ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)