Arjun Janya: 45 Vs ಮಾರ್ಕ್ ; ಎರಡೂ ಚಿತ್ರ ಒಂದೇ ದಿನ ರಿಲೀಸ್! ಸುದೀಪ್ ಜೊತೆ ಕಾಂಪಿಟೇಟ್ ಮಾಡ್ತಾರಾ ಅರ್ಜುನ್ ಜನ್ಯ!
ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ ಜನ್ಯ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ. ‘45’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ.

-

ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ ಜನ್ಯ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ. ‘45’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಡಿಸೆಂಬರ್ ತಿಂಗಳಿನಲ್ಲಿ ಕನ್ನಡ ಸಿನಿಮಾಗಳ ಆರ್ಭಟ ಜೋರಾಗಿಯೇ ಇದೆ. ಡಿ. 12 ಕ್ಕೆ ದರ್ಶನ್ ಅಭಿನಯದ ಡೆವಿಲ್ ಚಿತ್ರ ಬಿಡುಗಡೆ ಕಾಣಲಿದ್ದು, ಇನ್ನು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮಾರ್ಕ್ ಕೂಡ ಡಿ 25 ರಂದು ತೆರೆ ಕಾಣುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಿಗೆ ಸಿನಿಮಾ ರಿಲೀಸ್ ಆದ್ರೆ ಸಿನಿ ಪ್ರೇಕ್ಷಕರಿಗೆ ಭಾರೀ ನಿರಾಸೆಯಂತೂ ಮೂಡುತ್ತದೆ. ಸಿನಿಮಾಗಳ ಕ್ಲಾಶ್ ಕುರಿತು 45 ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಇದೀಗ ಮಾತನಾಡಿದ್ದಾರೆ.
ಒಟ್ಟಿಗೆ ಸಿನಿಮಾ ಬಿಡುಗಡೆಯಾಗುವ ಕುರಿತು ವಿಶ್ವವಾಣಿ ಜೊತೆ ಮಾತನಾಡಿದ ಅರ್ಜುನ್ ಜನ್ಯಾ ಸುದೀಪ್ ಸರ್ ಇಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಅವರು ನನ್ನ ಗಾಡ್ ಫಾದರ್ ಇದ್ದಂತೆ, ನಾನು ಚಿತ್ರರಂಗದಲ್ಲಿ ಇಂದು ಹೆಸರು ಮಾಡಲು ಅವರೂ ಸಹ ಕಾರಣ. ನನ್ನ ಬಳಿ ಏನು ಇಲ್ದೆ ಇರುವಾಗ ನನ್ನನ್ನು ಕೈಹಿಡಿದು ಎತ್ತಿ ಬೆಳೆಸಿದ್ದಾರೆ. ಅಂತವರ ಮೇಲೆ ನಾನು ಕಾಂಪಿಟೇಷನ್ ಮಾಡಿದ್ರೆ ದೇವರೂ ನನ್ನನ್ನು ಮೆಚ್ಚುವುದಿಲ್ಲ ಎಂದು ಹೇಳಿದ್ದಾರೆ.
ಮುಂದುವರಿದು, ಮೊದಲು ನಾವು ಆಗಸ್ಟ್ 15 ರಂದು ಸಿನಿಮಾ ಬಿಡುಗಡೆ ಮಾಡಬೇಕೆಂದಿದ್ದೆವು. ಕಾರಣಾಂತರಗಳಿಂದ ಅದು ಮುಂದೂಡಿಕೆ ಆಯಿತು. ಹೀಗಾಗಿ ಡಿ. 25 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆವು. ಬಳಿಕ ಮಾರ್ಕ್ ಕೂಡ ಅದೇ ದಿನ ರಿಲೀಸ್ ಆಗುತ್ತೆ ಎಂದು ತಿಳಿದು ಬಂತು. ಈ ವಿಷಯ ನಮಗೆ ಮೊದಲೇ ತಿಳಿದಿದ್ದರೆ ನಾವು ಸಜ್ಜಾಗುತ್ತಿರಲಿಲ್ಲ ಎಂದು ಜನ್ಯಾ ಹೇಳಿದ್ದಾರೆ. ಸುದೀಪ್ ಸರ್ ಜೊತೆ ನಾನು ಮಾತನಾಡಿದ್ದೇನೆ. ಅವರು ಹಾರೈಸಿದ್ದಾರೆ. ಗುರುಗಳಿಂದಲೇ ಆಶೀರ್ವಾದ ಸಿಕ್ಕರೆ ಇನ್ನೇನು ಬೇಕು ಎಂದು ಅವರು ಹೇಳಿದರು.
ಆಗಸ್ಟ್ 15ಕ್ಕೆ ಬಿಡುಗಡೆ ಆಗಬೇಕಿದ್ದ ಈ ಸಿನಿಮಾದ ಬಿಡುಗಡೆ ತಡವಾಗಲು ವಿಎಫ್ಎಕ್ಸ್ ಕಾರಣವಂತೆ. ಅನೇಕ ಬ್ಲಾಕ್ ಬಸ್ಟರ್, ಆಸ್ಕರ್ ವಿಜೇತ ಹಾಲಿವುಡ್ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿರುವ ಮಾರ್ಜ್ ಸಂಸ್ಥೆ ‘45’ ಸಿನಿಮಾಕ್ಕೂ ವಿಎಫ್ಎಕ್ಸ್ ಮಾಡುತ್ತಿದ್ದು, ಸಿನಿಮಾನಲ್ಲಿ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಪ್ರಮುಖವಾಗಿದ್ದು ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ಆಗಸ್ಟ್ 15 ರಂದು ಆಗಲಿಲ್ಲವಂತೆ. ಮಾರ್ಜ್ ಸಂಸ್ಥೆ ಕೆನಡಾ ಮೂಲದ್ದಾಗಿದ್ದು ಈ ಸಂಸ್ಥೆಯ ಮುಖ್ಯ ತಂತ್ರಜ್ಞ ಯಶ್ ಗೌಡ ಸಹ ಈ ಬಗ್ಗೆ ಮಾತನಾಡಿದ್ದು, ‘45’ ನಮ್ಮ ಸಂಸ್ಥೆ ವಿಎಫ್ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಆಗಿದೆ.
ಈ ಸುದ್ದಿಯನ್ನೂ ಓದಿ: Mark Movie: 'ಮಾರ್ಕ್' ಚಿತ್ರದ ಫಸ್ಟ್ ಸಾಂಗ್ ಬಿಡುಗಡೆಗೆ ದಿನಗಣನೆ; ಮಹತ್ವದ ಅಪ್‌ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್
ಕತೆಯಲ್ಲಿ ವಿಎಫ್ಎಕ್ಸ್ಗೆ ಮಹತ್ವದ ಪಾತ್ರ ಇರುವ ಕಾರಣದಿಂದಾಗಿ ಹೆಚ್ಚಿನ ಜಾಗೃತೆಯಿಂದ ಕೆಲಸ ನಡೆಯುತ್ತಿದೆ. ಸೆಪ್ಟೆಂಬರ್ 16ರ ಒಳಗೆ ಸಿನಿಮಾದ ಎಲ್ಲ ವಿಎಫ್ಎಕ್ಸ್ ಕಾರ್ಯ ಪೂರ್ಣಗೊಳ್ಳಲಿದೆ, ಅದಾದ ಒಂದು ತಿಂಗಳಲ್ಲಿ ಇನ್ನೊಂದಿಷ್ಟು ಕೆಲಸಗಳು ಇರಲಿವೆ. ಸಿನಿಮಾದ ಬಿಡುಗಡೆ ತಡವಾದರೂ ಸಿನಿಮಾದ ಗುಣಮಟ್ಟ ಅತ್ಯದ್ಭುತವಾಗಿರಲಿದೆ’ಎಂದು ಅವರು ಹೇಳಿದರು.