ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gilli Nata: ಗಿಲ್ಲಿ ನಟನಿಂದ ಇಂದು ಫ್ಯಾನ್ಸ್‌ಗೆ ಸರ್‌ಪ್ರೈಸ್‌! ಏನದು?

Gilli Nata: ಗಿಲ್ಲಿ ಯಾವ ಮಾಹಿತಿ ಕೊಡಲು ಹೊರಟ್ಟಿದ್ದಾರೆ. ಏನಿದು "ವಿಶೇಷ ಘೋಷಣೆ" ಎನ್ನುವ ಚರ್ಚೆ ಸಹ ಆರಂಭವಾಗಿದೆ. ಗಿಲ್ಲಿ ನಟ ಕಾರಣಕ್ಕೆ ಕಳೆದ ಸೀಸನ್ ವೀಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ದಾಖಲೆ ಪ್ರಮಾಣದಲ್ಲಿ ಗಿಲ್ಲಿ ಮತಗಳನ್ನು ಪಡೆದು ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದು ಗೊತ್ತೇಯಿದೆ. ಬಿಗ್ ಬಾಸ್ ಸೀಸನ್-12 ರ ವಿನ್ನರ್ ಗಿಲ್ಲಿ ನಟ ಇಂದೇ ಹೊಸ ಸುದ್ದಿ ಕೊಡ್ತಿದ್ದಾರೆ.

ಗಿಲ್ಲಿ ನಟನಿಂದ ಇಂದು ಫ್ಯಾನ್ಸ್‌ಗೆ ಸರ್‌ಪ್ರೈಸ್‌! ಏನದು?

ಗಿಲ್ಲಿ ನಟ -

Yashaswi Devadiga
Yashaswi Devadiga Jun 16, 2026 8:14 AM

ಬಿಗ್‌ಬಾಸ್ ಕನ್ನಡ ಸೀಸನ್ 13 (Bigg Boss Kannada 13) ಶೀಘ್ರದಲ್ಲೇ ಶುರುವಾಗಲಿದೆ. ಆದರೂ ಸೀಸನ್‌ 12ರನ್ನು ಮಾತ್ರ ವೀಕ್ಷಕರು ಮರೆತ್ತಿಲ್ಲ. ಗಿಲ್ಲಿ ನಟ ಕಾರಣಕ್ಕೆ ಕಳೆದ ಸೀಸನ್ ವೀಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ದಾಖಲೆ ಪ್ರಮಾಣದಲ್ಲಿ ಗಿಲ್ಲಿ ಮತಗಳನ್ನು ಪಡೆದು ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದು ಗೊತ್ತೇಯಿದೆ. ಬಿಗ್ ಬಾಸ್ ಸೀಸನ್-12 ರ (Bigg Boss Kannada 12) ವಿನ್ನರ್ ಗಿಲ್ಲಿ ನಟ (Gilli Nata) ಇಂದೇ ಹೊಸ ಸುದ್ದಿ ಕೊಡ್ತಿದ್ದಾರೆ.

ಪೋಸ್ಟ್‌ ಏನು?

"ಒಂದು ವಿಶೇಷ ಘೋಷಣೆ" ಅಂತಲೂ ಹೇಳಿದ್ದಾರೆ. ಮ್ಮ ಪ್ರೀತಿಯ ಗಿಲ್ಲಿ (Gilli) ಅನ್ನೋದನ್ನು ಕೊನೆಯಲ್ಲಿ ಬರೆದಿದ್ದಾರೆ. "ಒಂದು ವಿಶೇಷ ಘೋಷಣೆ, 16 ಜೂನ್ 2026, ಸಂಜೆ 6.15ಕ್ಕೆ.. ಇಂತಿ ನಿಮ್ಮ ಪ್ರೀತಿಯ ಗಿಲ್ಲಿ" ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಏನಪ್ಪಾ ಇದು "ವಿಶೇಷ ಘೋಷಣೆ" ಎಂದು ಅಭಿಮಾನಿಗಳು ಕಾಯುವಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಗಿಲ್ಲಿ ಅಷ್ಟೇನು ಆಕ್ಟೀವ್ ಆಗಿ ಇರಲಿಲ್ಲ. ಇದ್ದಕ್ಕಿಂತೆ ಪೋಸ್ಟ್ ಮಾಡಿದ್ದು ಫ್ಯಾನ್ಸ್‌ಗೆ ಶಾಕ್‌ ಕೊಟ್ಟಿದೆ.

ಇದನ್ನೂ ಓದಿ; Mithun Chakraborty: ಎಂಗೇಜ್‌ ಆದ್ರು ಮಿಥುನ್ ಚಕ್ರವರ್ತಿ ದತ್ತು ಪುತ್ರಿ! ಹುಡುಗ ಯಾರು?

ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದ ಪ್ರೋಮೊ ಮಿಲಿಯನ್ ವೀವ್ಸ್ ಗಿಟ್ಟಿಸಿತ್ತು. ಆದರೆ "ವಿಶೇಷ ಘೋಷಣೆ" ಎಂದು ಗಿಲ್ಲಿ ಹಾಕಿರುವ ಪೋಸ್ಟ್‌ಗೆ ಅಷ್ಟಾಗಿ ರೀಚ್ ಸಿಕ್ಕಿಲ್ಲ. ಹಾಗಾಗಿ ಗಿಲ್ಲಿ ಹವಾ ಬಗ್ಗೆ ಚರ್ಚೆ ಕೂಡ ಶುರುವಾಗಿದೆ.

ದೊಡ್ಮನೆಯಿಂದ ಬಂದ್ಮೇಲೆ ಗಿಲ್ಲಿ ನಟ ತಮ್ಮ ಆಸಕ್ತಿಯ ಬಗ್ಗೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಡೈರೆಕ್ಷನ್ ಬಗ್ಗೆ ಆಸಕ್ತಿನೂ ಇದೆ ನಾಯಕರಾಗಿಯೇ ಬರ್ತಾರೆ ಅನ್ನುವ ಸುದ್ದಿ ಕೇಳಿ ಬಂದಿತ್ತು. ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಗಿಲ್ಲಿ ನಟ ಅಭಿನಯಿಸಿರೋ ಸೂಪರ್ ಹಿಟ್ ಚಿತ್ರ ಬಂತು.

ವಿ.ನಾಗೇಂದ್ರ ಪ್ರಸಾದ್ ಸಹೋದರ್ ವಿಜಯಾನಂದ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಹೀಗಾಗಿ ಸಿನಿಮಾ ಕುರಿತು ಅಪ್‌ಡೇಟ್‌ ನೀಡಬಹುದು ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆಇರಬಹುದು ಎಂದು ಫ್ಯಾನ್ಸ್‌ ಊಹಿಸುತ್ತಿದ್ದಾರೆ.

ಇದನ್ನೂ ಓದಿ: Shura Khan: ಗಂಡ ಮುದುಕ ಎಂದು ಗೇಲಿ ಮಾಡಿದವರಿಗೆ ಅರ್ಬಾಜ್ ಖಾನ್ ಪತ್ನಿ ಖಡಕ್ ತಿರುಗೇಟು

ಗಿಲ್ಲಿ ಯಾವ ಮಾಹಿತಿ ಕೊಡಲು ಹೊರಟ್ಟಿದ್ದಾರೆ. ಏನಿದು "ವಿಶೇಷ ಘೋಷಣೆ" ಎನ್ನುವ ಚರ್ಚೆ ಸಹ ಆರಂಭವಾಗಿದೆ. ಗಿಲ್ಲಿ ಹೀರೊ ಆಗಿ ಹೊಸ ಸಿನಿಮಾ ಘೋಷಣೆ ಆಗುತ್ತಾ? ಹೊಸ ರಿಯಾಲಿಟಿ ಶೋ ಬರುತ್ತಾ? ಎನ್ನುವ ಚರ್ಚೆ ಜೋರಾಗಿದೆ. ಇಂದೇ ಎಲ್ಲದಕ್ಕೂ ಉತ್ತರ ಸಿಗಲಿದೆ.