Chikkaballapur News: ಬಡವರ ಬದುಕಿಗೆ ಆಸರೆಯಾಗಲು 501 ಜೋಡಿ ಸಾಮೂಹಿಕ ವಿವಾಹ ಆಯೋಜನೆ
ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮೇಲಿನ ಮದುವೆ ವೆಚ್ಚದ ಹೊರೆಯನ್ನು ಕಡಿಮೆ ಮಾಡಿ, ಅವರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಏಡುಕೊಂಡಲ ಬ್ಯುಲ್ಸ್ ಮತ್ತು ಸಮತಾ ಸೈನಿಕ ದಳದ ಸಹಯೋಗದಲ್ಲಿ 501 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಾಗೂ ತಿರುಪತಿ ಯಿಂದ ಮೂಲವಿಗ್ರಹಗಳನ್ನು ತರಿಸಿ ಶ್ರೀನಿವಾಸ್ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ
-
ಚಿಕ್ಕಬಳ್ಳಾಪುರ: ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮೇಲಿನ ಮದುವೆ ವೆಚ್ಚದ ಹೊರೆಯನ್ನು ಕಡಿಮೆ ಮಾಡಿ, ಅವರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಏಡುಕೊಂಡಲ ಬ್ಯುಲ್ಸ್ ಮತ್ತು ಸಮತಾ ಸೈನಿಕ ದಳದ ಸಹಯೋಗದಲ್ಲಿ 501 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಾಗೂ ತಿರುಪತಿಯಿಂದ ಮೂಲವಿಗ್ರಹಗಳನ್ನು ತರಿಸಿ ಶ್ರೀನಿವಾಸ್ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಏಡುಕೊಂಡಲ ಶ್ರೀನಿವಾಸಪ್ಪ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಸಂಬಂಧ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮಹರ್ಷಿ ಆನಂದ ಗುರೂಜಿ ಅವರ ನೇತೃತ್ವದಲ್ಲಿ ಶ್ರೀಕ್ಷೇತ್ರವಾದ ರಂಗಸ್ಥಳದ ರಂಗನಾಥನ ಸನ್ನಿಧಿಯಲ್ಲಿ ಮಾ.24 ಮತ್ತು 25ರಂದು 501 ಜೋಡಿಗಳ ಸಾಮೂಹಿಕ ವಿವಾಹ ಏರ್ಪಡಿಸಲು ತೀರ್ಮಾನಿಸಲಾಗಿದೆ.ಇಂತಹ ಪುಣ್ಯದ ಕಾರ್ಯಕ್ರಮಕ್ಕೆ ಪಕ್ಷಭೇದ ಮರೆತು ಎಲ್ಲರೂ ಕೈಜೋಡಿಸ ಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು: ಸದಾಶಿವ ಆರಾಧ್ಯ
ಕನ್ಯಾದಾನ ಶ್ರೇಷ್ಟ!!
ದಾನಗಳಲ್ಲಿ ಕನ್ಯಾದಾನಕ್ಕೆ ಹೆಚ್ಚಿನ ಮಹತ್ವವಿದೆ. ಬೆಲೆಯೇರಿಕೆಯ ಇಂದಿನ ದಿನಗಳಲ್ಲಿ ಅದ್ದೂರಿ ಮದುವೆಗಳನ್ನು ಮಾಡುವ ಮೂಲಕ ಅನೇಕ ಬಡ ಕುಟುಂಬಗಳು ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿವೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಿ, ಕನ್ಯಾದಾನದ ಮೂಲಕ ಬಡ ಕುಟುಂಬಗಳ ಬದುಕಿಗೆ ನೆರವಾಗಬೇಕು ಎಂಬ ಸಂಕಲ್ಪದಿAದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದರು.
501 ಜೋಡಿಗೂ ಅವಕಾಶ!!
ಜಿಲ್ಲೆಯ ಎಂಟು ತಾಲ್ಲೂಕುಗಳ ಆಸಕ್ತರು ಈ ಕಾರ್ಯಕ್ರಮದ ಪ್ರಯೋಜನ ಪಡೆಯ ಬಹುದು. ಹೊರಗಿನವರು ಬಂದರೂ ಕೂಡ ಅವಕಾಶ ಮಾಡಿಕೊಡಲಾಗುವುದು. ವಧುವರರಿಗೆ ಬೀರು, ಹಾಸಿಗೆ, ತಾಳಿ ಹಾಗೂ ಕಾಲುಂಗುರ ಮಧುವೆ ವಸ್ತ್ರಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿ ಸುವ ವ್ಯವಸ್ಥೆ ಮಾಡಲಾಗುವುದು. ಯಾವುದೇ ಜಾತಿ, ಧರ್ಮ ಅಥವಾ ಜನಾಂಗದ ಭೇದವಿಲ್ಲದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ವಯಸ್ಸಿನ ದೃಢೀಕರಣ ಕಡ್ಡಾಯ!!
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಜೋಡಿಗಳು ಭಾರತಸರಕಾರ ನಿಗದಿಪಡಿಸಿರುವ ವಯಸ್ಸಿನ ದೃಢೀಕರಣ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ವಿಚ್ಛೇದಿತರಿಗೆ ಮರು ಮದುವೆಗೆ ಅವಕಾಶವಿಲ್ಲ. ಆದರೆ, ಎರಡೂ ಕಡೆಯವರ ಒಪ್ಪಿಗೆ ಇದ್ದಲ್ಲಿ ಅಂತರ್ಜಾತಿ ವಿವಾಹಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಾರದರ್ಶಕತೆಗೆ ಒತ್ತು!!
ಬಲಗೈ ಜಾತಿಗಳ ಒಕ್ಕೂಟವೆಂಬ ಸಂಘಟನೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆಗೆ ಆದ್ಯತೆ ನೀಡ ಲಾಗಿದ್ದು, ರೋಲ್ ಕಾಲ್ ಮಾಡುವವರನ್ನು ಸಂಘಟನೆಯಿAದ ಹೊರಗಿಡಲಾಗಿದೆ. ಸಂಘಟನೆ ಯೊಂದಿಗೆ ಗುರುತಿಸಿಕೊಂಡಿರುವ ಹಲವರಿಗೆ ನಾವು ಮಾತುಕೊಟ್ಟಂತೆ ಆರ್ಥಿಕವಾಗಿ ಸಬಲೀಕರಣ ಕ್ಕೆ ಒತ್ತು ನೀಡಲಾಗಿದೆ. 8 ತಾಲೂಕುಗಳ ಅಧ್ಯಕ್ಷರಿಗೆ ಈಗಾಗಲೇ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಚೈತನ್ಯ ತುಂಬಿವೆ!!
ಸಮುದಾಯಕ್ಕೆ ಆರ್ಥಿಕ ಚೈತನ್ಯ ತುಂಬುವ ನನ್ನ ಸಂಕಲ್ಪದಲ್ಲಿ ಯಾವುದೇ ಬದಲಾವಣೆ ಇಲ್ಲ.ಕಾನೂನು ಬದ್ಧವಾಗಿ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ. ಸಮುದಾಯವನ್ನು ಹಿಂದೆ ಮುನ್ನಡೆಸಿದವರು ಏನೇನು ಸಹಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನಮ್ಮ ಸಂಘಟನೆಯಿAದ ಹೊರಗೆ ಹೋದವರು ನಮ್ಮ ಬಗ್ಗೆ ಆರೋಪ ಮಾಡುವುದು ಸಹಜ.ಅದಕ್ಕೆ ಪ್ರತಿಕ್ರಯಿಸುವ ಅಗತ್ಯವಿಲ್ಲ. ಸಮುದಾಯದ ಕಾರ್ಯಕ್ರಮಗಳನ್ನು ಮಾಡಲು ರೋಲ್ಕಾಲ್ ಮಾಡುತ್ತಿರುವವರನ್ನು ನಾವೇ ದೂರ ಇಟ್ಟಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಿಳ್ಳಾಂಜಿನಪ್ಪ, ವೆಂಕಟ್, ಊಲವಾಡಿ ವೆಂಕಟರೋಣಪ್ಪ, ತಾಲ್ಲೂಕು ಅಧ್ಯಕ್ಷೆ ಮಮತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.