ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಲ್ಲು ಅರ್ಜುನ್ ಬರ್ತ್‌ಡೇ ಧಮಾಕಾ: ನಿರ್ದೇಶಕ ಅಟ್ಲಿ ಜೊತೆಗಿನ ಹೊಸ ಚಿತ್ರಕ್ಕೆ 'ರಾಕಾ' ಟೈಟಲ್‌ ಫಿಕ್ಸ್!‌

ಅಲ್ಲು ಅರ್ಜುನ್‌ ಹುಟ್ಟುಹಬ್ಬದ ಸಂಭ್ರಮದಲ್ಲೇ ಅವರ ಹೊಸ ಚಿತ್ರಕ್ಕೆ ರಾಕಾ ಎಂದು ಟೈಟಲ್‌ ಇಡಲಾಗಿದೆ. ನಿರ್ದೇಶಕ ಅಟ್ಲಿ ಮತ್ತು ಅಲ್ಲು ಅರ್ಜುನ್‌ ಕಾಂಬಿನೇಷನ್‌ನ ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿಕೆ ಮಾಡುತ್ತಿದೆ. ಭಯಾನಕ ಕ್ರಿಯೇಚರ್ ಲುಕ್‌ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು, ದೀಪಿಕಾ ಪಡುಕೋಣೆ ಈ ಸಿನಿಮಾದ ನಾಯಕಿಯಾಗಿದ್ದಾರೆ.

ಅಲ್ಲು ಅರ್ಜುನ್ ಹೊಸ ಅವತಾರ;‌ ‌ʻರಾಕಾʼ ಲುಕ್ ನೋಡಿ ಫ್ಯಾನ್ಸ್‌ ಥ್ರಿಲ್‌

-

Avinash GR
Avinash GR Apr 8, 2026 12:33 PM

ʻಐಕಾನ್‌ ಸ್ಟಾರ್‌ʼ ಅಲ್ಲು ಅರ್ಜುನ್ ಅವರು ಇಂದು (ಏ.8) ತಮ್ಮ 44ನೇ ಹುಟ್ಟುಹಬ್ಬವನ್ನು ಗ್ರ್ಯಾಂಡ್‌ ಆಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ಬನ್ನಿ ಅಭಿಮಾನಿಗಳಿಗೆ ವಿಶೇಷ ಸರ್ಪ್ರೈಸ್ ಸಿಕ್ಕಿದೆ. ಅದೇನಪ್ಪ ಅಂದರೆ, ನಿರ್ದೇಶಕ ಅಟ್ಲಿ ಜೊತೆಗಿನ ಅಲ್ಲು ಅರ್ಜುನ್‌ ಅವರ ಬಹುನಿರೀಕ್ಷಿತ AA22 x A6 ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದೆ. ಈ ಚಿತ್ರಕ್ಕೆ ʻರಾಕಾʼ ಎಂದು ಹೆಸರಿಡಲಾಗಿದೆ.

ಹುಟ್ಟುಹಬ್ಬಕ್ಕೆ ರಿಲೀಸ್‌ ಆಯ್ತು ಫಸ್ಟ್‌ ಲುಕ್‌

ಅಲ್ಲು ಅರ್ಜುನ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೀರ್ಷಿಕೆಯ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್‌ಗೆ ಅವರು, "#AA22xA6 ಈಗ ರಾಕಾ. ಮಿತಿಯಿಲ್ಲದ ದರ್ಶನಕ್ಕಾಗಿ ಸಿದ್ಧರಾಗಿ" ಎಂದು ಕ್ಯಾಪ್ಷನ್‌ ನೀಡಿದೆ ಸನ್‌ ಪಿಕ್ಚರ್ಸ್‌. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಇದುವರೆಗೆ ನೋಡಿರದ ವಿಭಿನ್ನ ಮತ್ತು ಸ್ವಲ್ಪಮಟ್ಟಿಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ಪರಿಚಯಿಸಲಾಗಿದೆ.

Allu Sirish Pre Wedding Bash: ಅಲ್ಲು ಅರ್ಜುನ್‌ ತಮ್ಮ ಅಲ್ಲು ಸಿರೀಶ್‌ ಪ್ರೀ-ವೆಡ್ಡಿಂಗ್‌ ಪಾರ್ಟಿ ಬಲು ಜೋರು! ಫೋಟೋಸ್‌ ವೈರಲ್‌

ಮುಖದ ಬಹುಭಾಗವು ನೆರಳು ಮತ್ತು ಕೂದಲಿನಿಂದ ಮುಚ್ಚಲ್ಪಟ್ಟಿದ್ದು, ಕೇವಲ ಒಂದು ಕಣ್ಣು ಮಾತ್ರ ಕಾಣಿಸುತ್ತದೆ. ಅಲ್ಲು ಅರ್ಜುನ್ ಈ ಹಿಂದೆಂದೂ ಕಾಣಿಸಿಕೊಳ್ಳದ ಅತ್ಯಂತ ಭಯಾನಕ ಮತ್ತು ವಿಭಿನ್ನವಾದ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೋಳದ ಕಾಲುಗಳಂತಹ ಕೈಗಳು ಮತ್ತು ಉದ್ದನೆಯ ಉಗುರುಗಳಿರುವ ಈ 'ಕ್ರಿಯೇಚರ್ ಸ್ಟೈಲ್' ಲುಕ್ ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಅಲ್ಲು ಅರ್ಜುನ್‌ ಅವರ ಲುಕ್‌ ಅನ್ನು ಗಮನಿಸಿದರೆ, ಇದು ವೃತ್ತಿಜೀವನದಲ್ಲೇ ಅತ್ಯಂತ ವಿಭಿನ್ನ ಪ್ರಯೋಗ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದೊಂದು ಸೈನ್ಸ್ ಫಿಕ್ಷನ್ ಅಥವಾ ಫ್ಯಾಂಟಸಿ ಥ್ರಿಲ್ಲರ್ ಇರಬಹುದು ಎಂಬದು ಸಿನಿಪ್ರಿಯರ ಊಹೆ ಆಗಿದೆ.

"ರಾಕಾ ಕೇವಲ ಒಂದು ಸಿನಿಮಾವಲ್ಲ.. ಇದು ನಾನು ವರ್ಷಗಳಿಂದ ನನ್ನೊಳಗೆ ಹೊತ್ತು ಸಾಗುತ್ತಿರುವ ನನ್ನದೇ ಒಂದು ಭಾಗ. 18 ವರ್ಷಗಳ ಕಾಲ, ಒಂದು ಆಲೋಚನೆಯನ್ನು ಅದು ಎಂದಿಗೂ ಮಾಸದಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದೆ. ಅದು ನನ್ನನ್ನು ಪರೀಕ್ಷಿಸಿತು, ನನ್ನ ವ್ಯಕ್ತಿತ್ವವನ್ನು ರೂಪಿಸಿತು ಮತ್ತು ಪ್ರತಿಯೊಂದು ಹಂತದಲ್ಲೂ ನನ್ನ ಜೊತೆಗೇ ಇತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ… ಇದು ಕೇವಲ ಆರಂಭವಷ್ಟೇ" ಎಂದು ನಿರ್ದೇಶಕ ಅಟ್ಲಿ ಹೇಳಿದ್ದಾರೆ.

Allu Arjun Birthday: ಲುಕ್ ಗಾಗಿ ಟ್ರೋಲ್ ಆಗಿದ್ದ ನಟ ಇಂದು ಸೂಪರ್ ಸ್ಟಾರ್! ಅಲ್ಲು ಅರ್ಜುನ್ ಸಿನಿ ಜರ್ನಿ ಹೇಗಿತ್ತು?

ಬಿಗ್‌ ಬಜೆಟ್‌ ಸಿನಿಮಾ

ರಾಕಾ ಸಿನಿಮಾವು ತಮಿಳು, ಕನ್ನಡ, ತೆಲುಗು ಸೇರಿ ಸುಮಾರು 10ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸನ್‌ ಪಿಕ್ಚರ್ಸ್‌ ಈ ಸಿನಿಮಾದ ಮೇಲೆ ಬರೋಬ್ಬರಿ 800 ಕೋಟಿ ರೂ. ಹಣವನ್ನು ಹೂಡಿಕೆ ಮಾಡುತ್ತಿರುವುದು ವಿಶೇಷ. ಈ ಚಿತ್ರವು ಹಾಲಿವುಡ್ ಮಟ್ಟದ ದೃಶ್ಯ ವೈಭವ ಇರುವಂತಹ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಅವರಿಗೆ ಇಲ್ಲಿ ಮೂರು ವಿಭಿನ್ನ ಲುಕ್‌ ಇರಲಿವೆಯಂತೆ. ಇನ್ನು, ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲು ಅರ್ಜುನ್‌ ಹೊಸ ಸಿನಿಮಾ ʻರಾಕಾʼ



ಅಲ್ಲು ಅರ್ಜುನ್‌, ದೀಪಿಕಾ ಜೊತೆಗೆ ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್, ಮೃಣಾಲ್ ಠಾಕೂರ್ ಮತ್ತು ಭಾಗ್ಯಶ್ರೀ ಬೋರ್ಸೆ ಅವರಂತಹ ಸ್ಟಾರ್ ನಟಿಯರು ಕೂಡ ಈ ಚಿತ್ರದ ಭಾಗವಾಗಿರಲಿದ್ದಾರೆ ಎಂಬ ಟಾಕ್‌ ಕೂಡ ಇದೆ. 2027ರ ಆರಂಭದಲ್ಲೇ ಈ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್‌ ಚಿತ್ರತಂಡಕ್ಕಿದೆ.