ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kwatle Kitchen: 6 ಫೈನಲಿಸ್ಟ್‌ ಪೈಕಿ ʼಕ್ವಾಟ್ಲೆ ಕಿಚನ್ʼ ಶೋ ವಿನ್ನರ್‌ ಯಾರಾಗಲಿದ್ದಾರೆ? ಸೆಪ್ಟೆಂಬರ್‌ 27ರ ಗ್ರ್ಯಾಂಡ್‌ ಫಿನಾಲೆಯಲ್ಲಿ ಸಿಗಲಿದೆ ಉತ್ತರ

ಕಲರ್ಸ್ ಕನ್ನಡದ ಜನಪ್ರಿಯ ಕಾರ್ಯಕ್ರಮ ‘ಕ್ವಾಟ್ಲೆ ಕಿಚನ್'ನ ಗ್ರಾಂಡ್ ಫಿನಾಲೆ ಸೆಪ್ಟೆಂಬರ್‌ 27ರ ಸಂಜೆ 6ರಿಂದ ರಾತ್ರಿ 10ರವರೆಗೆ ಪ್ರಸಾರವಾಗಲಿದೆ. ಈ ಕುತೂಹಲಭರಿತ ಕಾಮಿಡಿ ಕುಕ್ಕಿಂಗ್ ಶೋದ ಕೊನೆಯ ಸಂಚಿಕೆಯಲ್ಲಿ ಅತಿಥಿಗಳಾಗಿ ʼಸು ಫ್ರಮ್ ಸೋʼ ಚಿತ್ರ ತಂಡದ ರಾಜ್ ಬಿ. ಶೆಟ್ಟಿ, ರವಿಯಣ್ಣ, ಜೆ.ಪಿ. ತುಮಿನಾಡ್ ಭಾಗವಹಿಸಿದ್ದಾರೆ.

ಸೆಪ್ಟೆಂಬರ್‌ 27ರಂದು ʼಕ್ವಾಟ್ಲೆ ಕಿಚನ್ʼ ಗ್ರ್ಯಾಂಡ್‌ ಫಿನಾಲೆ ಮಹಾ ಸಂಚಿಕೆ

-

ಬೆಂಗಳೂರು: ಪ್ರೇಕ್ಷಕರ ಮನರಂಜನೆಗಾಗಿ ಅತ್ಯಂತ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯವಾಗಿರುವ ಕಲರ್ಸ್ ಕನ್ನಡದಲ್ಲಿ (Colors Kannada) ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ 'ಕ್ವಾಟ್ಲೆ ಕಿಚನ್’ (Quattle Kitchen) ಗ್ರ್ಯಾಂಡ್‌ ಫಿನಾಲೆ (Grand Finale) ಶೋ ಸೆಪ್ಟೆಂಬರ್ 27ರಂದು ಪ್ರಸಾರವಾಗಲಿದೆ. ಸಂಜೆ 6ರಿಂದ ರಾತ್ರಿ 10ರವರೆಗೆ ನಡೆಯಲಿರುವ ಕುಕ್ಕಿಂಗ್ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ʼಸು ಫ್ರಮ್ ಸೋʼ (Su from so) ಚಿತ್ರತಂಡದ ರಾಜ್ ಬಿ. ಶೆಟ್ಟಿ, ರವಿಯಣ್ಣ, ಜೆ.ಪಿ. ತುಮಿನಾಡ್ ಅತಿಥಿಗಳಾಗಿ ಭಾಗವಹಿಸಿದ್ದಾರೆ.

6 ಮಂದಿ ಫೈನಲಿಸ್ಟ್ ಕುಕ್‌ಗಳು, ಎರಡು ರೌಂಡ್‌ನ ಮಹಾ ಪೈಪೋಟಿ ಮೂಲಕ ಒಬ್ಬ ವಿನ್ನರ್ ತೀರ್ಮಾನವಾಗಲಿರುವುದು ಈ ಫಿನಾಲೆಯ ವಿಶೇಷ. ಫೈನಲ್ ಕುಕ್‌ಗಳಾಗಿ ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್.ಕೆ. ಚಂದನ್, ದಿಲೀಪ್ ಶೆಟ್ಟಿ, ಕಾವ್ಯ ಗೌಡ, ಶರ್ಮಿತ ಗೌಡ, ರಾಘವೇಂದ್ರ ಪಾಲ್ಗೊಂಡಿದ್ದು, ಈ ಆರು ಮಂದಿಯಲ್ಲಿ ವಿನ್ನರ್ ಯಾರು, ಟ್ರೋಫಿ ಮತ್ತು ಐದು ಲಕ್ಷ ಗೆಲ್ಲುವ ಅದೃಷ್ಟ ಯಾರದ್ದು ಎಂಬ ಜನರ ಪ್ರಶ್ನೆಗಳಿಗೆ ಉತ್ತರ ಶನಿವಾರ ಸಿಗಲಿದೆ.

ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶ್ರುತಿ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟೆಲಿವಿಶನ್ ನ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಶೆಫ್ ಕೌಶಿಕ್ ಪಾಲ್ಗೊಂಡಿದ್ದು, ಇದು 'ಕ್ವಾಟ್ಲೆ ಕಿಚನ್'ಗೆ ಹೊಸ ಕಳೆಯನ್ನು ತಂದಿದೆ.

ಇದನ್ನೂ ಓದಿ: Pawan Kalyan Movie: ಪವನ್‌ ಕಲ್ಯಾಣ್‌ ನಟನೆಯ 'ಒಜಿ'ಗೆ ಸಖತ್ ರೆಸ್ಪಾನ್ಸ್- ಸಿನಿಮಾ ನೋಡಿ ಪ್ರಶಾಂತ್ ನೀಲ್ ಫುಲ್‌ ಖುಷ್‌!

ಕಿಚನ್‌ ಸ್ಟಾರ್‌ಗಳು ಮತ್ತು ಕ್ಯಾಟ್ಲೆಗಳ ಮೋಜು ಮಸ್ತಿಯ ಈ ಜಗಳಬಂದಿ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್‌ ನಡೆಸಿಕೊಡಲಿದ್ದಾರೆ. ಅಡುಗೆಯ ಔತಣ ಮತ್ತು ನಗುವಿನ ರಸದೌತಣಗಳನ್ನು ಒಟ್ಟೊಟ್ಟಿಗೇ ಬಡಿಸುವ 'ಕ್ವಾಟ್ಲೆ ಕಿಚನ್', ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವುದಂತೂ ಗ್ಯಾರಂಟಿ.