Aase Serial: ರೋಹಿಣಿ ಪಾತ್ರಕ್ಕೆ ನಟಿ ಅಭಿಜ್ಞಾ ಭಟ್ ತಯಾರಾಗಿದ್ದು ಹೇಗೆ? ಭಾವುಕ ಪೋಸ್ಟ್ ವೈರಲ್
Aase Serial: ಇಂದಿಗೂ ಆಸೆ ಸೀರಿಯಲ್ ಯಶಸ್ವಿಯಾಗಿಯೇ ಮುನ್ನುಗ್ಗುತ್ತಿದೆ. ಇದರಲ್ಲಿ ತಾಯಿ ಮಗನ ಸನ್ನಿವೇಶ, ಮೀನಾ -ಸೂರ್ಯ ಮನೆಗೆ ತ್ಯಾಗ ಮಾಡೋ ಹಠ, ತಂದೆ ಮಗನ ಭಾಂದವ್ಯ ಹೀಗೆ ಎಲ್ಲದರ ಮಿಶ್ರಣ ಇದೆ. ಸದ್ಯಕ್ಕೆ ರೋಹಿಣಿ ಪಾತ್ರ ಅಭಿಜ್ಞಾ ಭಟ್ ನಿರ್ವಹಿಸುತ್ತಿದ್ದಾರೆ. ಇದೀಗ ತಮ್ಮ ಪಾತ್ರದ ಬಗ್ಗೆ ನಟಿ ಹೇಳಿದ್ದೇನು? ಪೋಸ್ಟ್ ಅಲ್ಲಿ ಏನಿದೆ?
ಆಸೆ ಧಾರಾವಾಹಿ -
ಕನ್ನಡ ಕಿರುತೆರೆ ಲೋಕದಲ್ಲಿ ಸಖತ್ ಟ್ರೆಂಡ್ ಇರೋ ಧಾರಾವಾಹಿ ಅಂದ್ರೆ ಅದುವೇ ಆಸೆ ಸೀರಿಯಲ್ (Aase Serial). ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇಂದಿಗೂ ಸೀರಿಯಲ್ ಯಶಸ್ವಿಯಾಗಿಯೇ ಮುನ್ನುಗ್ಗುತ್ತಿದೆ. ಇದರಲ್ಲಿ ತಾಯಿ ಮಗನ ಸನ್ನಿವೇಶ, ಮೀನಾ (Meena) -ಸೂರ್ಯ ಮನೆಗೆ ತ್ಯಾಗ ಮಾಡೋ ಹಠ, ತಂದೆ ಮಗನ ಭಾಂದವ್ಯ ಹೀಗೆ ಎಲ್ಲದರ ಮಿಶ್ರಣ ಇದೆ. ಸದ್ಯಕ್ಕೆ ರೋಹಿಣಿ (Rohini) ಕಥೆ ಹೈಲೈಟ್. ನಟಿ ಅಮೃತಾ ರಾಮಮೂರ್ತಿ ಅವರು ಪಾತ್ರವನ್ನ ತೊರೆದರು. ಸದ್ಯ ಈ ಪಾತ್ರವನ್ನ ಅಭಿಜ್ಞಾ ಭಟ್ (Abhijna Bhat) ಅವರು ನಿರ್ವಹಿಸುತ್ತಿದ್ದಾರೆ.
ಅತಿರೇಕದ ಭಾವನೆಗಳನ್ನ ಹೊಂದಿರುವ ಪಾತ್ರ
ಇದೀಗ ನಟಿಯ ನಟನೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಸ್ವತಃ ನಟಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Amruthadhaare Serial: ಅಡೆತಡೆಗಳು ಸಾವಿರ ಬಂದರೂ ಮಗಳನ್ನು ಬಿಟ್ಟುಕೊಡದ ಗೌತಮ್!
ಕಳೆದ ಕೆಲವು ದಿನಗಳಿಂದ ಆಸೆ ಧಾರಾವಾಹಿಯಲ್ಲಿ ನನ್ನ ಅಭಿನಯವನ್ನು ಮೆಚ್ಚಿ ಬಹಳಷ್ಟು ಸಂದೇಶಗಳು ಬರುತ್ತಿವೆ.. ನಾನು ಹೇಳುವುದೇನೆಂದರೆ, ಪ್ರೋಮೋ ಇನ್‌ಸ್ಟಾಗ್ರಾಮ್‌ನಲ್ಲಿ 14 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.. ಇದು ದ್ವೇಷ ಮತ್ತು ಪ್ರೀತಿ ರೀತಿಯ ಪಾತ್ರ. ಆದರೆ, ನನಗೆ ತುಂಬಾ ಪ್ರೀತಿ ಸಿಕ್ಕಿದೆ. ನಾನು ರೋಹಿಣಿಯಂತಹ ಪಾತ್ರಕ್ಕೆ ಹೊಂದುತ್ತೇನಾ? ಇದು ನನ್ನಿಂದ ಸಾದ್ಯನಾ? ಎಂದು ಯೋಚಿಸುತ್ತಿದ್ದೆ. ಹತಾಶ, ಮುರಿದ, ಶೀತ, ಅತಿರೇಕದ, ಬಹಿಷ್ಕೃತ, ಮತ್ತು ತಾಯ್ತನ. ಎಲ್ಲಾ ರೀತಿಯ ಅತಿರೇಕದ ಭಾವನೆಗಳನ್ನ ಹೊಂದಿರುವ ಪಾತ್ರವಿದು.
ಕಲಿಯಲು, ಭಾವನಾತ್ಮಕವಾಗಿ ಮತ್ತು ಒಬ್ಬಂಟಿಯಾಗಿರಲು ಚಲನಚಿತ್ರಗಳನ್ನು ನೋಡಿದೆ.. ಕೊನೆಯಲ್ಲಿ ಅವರು ಎಂದಾದರೂ ನನ್ನನ್ನು ಸ್ವೀಕರಿಸುತ್ತಾರೆಯೇ ಎಂದು ನನಗೆ ಅನುಮಾನವಿತ್ತು? ಮತ್ತು ಈಗ ನಾನು ಕೇವಲ ಒಂದು ದೃಶ್ಯಕ್ಕೆ ನನಗೆ ಎಷ್ಟು ಪ್ರೀತಿ ಸಿಕ್ಕಿದೆ ಎಂಬುದರ ಕುರಿತು ಪೋಸ್ಟ್ ಮಾಡುತ್ತಿದ್ದೇನೆ. ರೋಹಿಣಿ ಮತ್ತಷ್ಟು ವೀಕ್ಷಕರಿಗೆ ಹತ್ತಿರವಾಗಲಿದೆ. ಅವಳಿಗೆ ತನ್ನ ಬದುಕಿನ ಕುರಿತು ಹೇಳಲು ಒಂದು ಕಥೆ ಇದೆ. ಜಿವನದ ಸಂಘರ್ಷ, ಹೋರಾಟವಿದೆ. ನಾನು ಅವಳಿಗೆ ಮುಖವಾಗುತ್ತಿದ್ದೇನೆ. ಅದನ್ನು ಅವಳು ಜಗತ್ತಿಗೆ ಸಾರುವ ಕಾಲ ಸನ್ನಿಹಿತದಲ್ಲಿದೆ. ‘ಆಸೆ’ ಅಭಿಮಾನಿಗಳು ಎಂದಿನಂತೆ ಪ್ರೋತ್ಸಾಹಿಸಿ ಎಂದು ನಟಿ ಅಭಿಜ್ಞಾ ಭಟ್ ಅವರು ರೋಹಿಣಿ ಪಾತ್ರದ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
‘ರಾಮಾಚಾರಿ’, ‘ಸ್ನೇಹದ ಕಡಲಲ್ಲಿ’ ಸೇರಿದಂತೆ ಅನೇಕ ಧಾರಾವಾಹಿಗಳಿ ಅಭಿನಯಿಸಿದ್ದಾರೆ. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’, ʻಭರ್ಜರಿ ಬ್ಯಾಚುಲರ್ಸ್’ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು.
ಧಾರಾವಾಹಿ ಕಥೆ ವಿಚಾರಕ್ಕೆ ಬಂದರೆ ರೋಹಿಣಿ ರಹಸ್ಯ ಬಯಲಾಗಿದೆ. ರೋಹಿಣಿಯ ಹಳೆ ರಹಸ್ಯಗಳು ಮನೋಜನಿಗೆ ಗೊತ್ತಿರಲಿಲ್ಲ. ಈ ವಿಚಾರ ಮೊದಲು ಗೊತ್ತಾಗಿದ್ದು ಮೀನಾಗೆ.
ಮೊದಲ ಪತಿಯ ಪಿತೃ ಕಾರ್ಯದಲ್ಲಿ ಅಮ್ಮ ಮತ್ತು ಮಗನ ಜೊತೆ ರೋಹಿಣಿ ಭಾಗಿಯಾಗಿದ್ದಳು. ನದಿಯ ದಡದಲ್ಲಿ ನಡೆಯುತ್ತಿದ್ದ ದೃಶ್ಯ ಮೀನಾ ಕಣ್ಣಿಗೆ ಬಿದ್ದಿತ್ತು. ಕೋಪಗೊಂಡ ಮೀನಾ ರೋಹಿಣಿಯ ಕೆನ್ನೆಗೆ ಬಾರಿಸಿದ್ದಳು.
ಇದನ್ನೂ ಓದಿ: Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!
ಅಷ್ಟೇ ಅಲ್ಲ ಮನೆಯಲ್ಲಿ ಎಲ್ಲ ವಿಚಾರಗಳನ್ನು ತಿಳಿಸಲು ಕೂಡ ಹೇಳಿದ್ದಳು. ಈ ಸತ್ಯನ ನಾನೇ ಮನೆಯವರಿಗೆ ಹೇಳುತ್ತೇನೆ ಎಂದು ಮೀನಾ ಎಷ್ಟೇ ಬಾರಿ ಹೇಳಿದರೂ ಅದು ಅಲ್ಲಿಗೆ ಅಂತ್ಯವಾಗಿತ್ತು. ಸೂರ್ಯನಿಗೆ ಗೊತ್ತಾಗಿ ಈಗ ರೋಹಿಣಿಯನ್ನ ಮನೆಯಿಂದ ಆಚೆ ಹಾಕಿದ್ದಾಳೆ ಶಾಂತಿ.