ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಅಡೆತಡೆಗಳು‌ ಸಾವಿರ ಬಂದರೂ ಮಗಳನ್ನು ಬಿಟ್ಟುಕೊಡದ ಗೌತಮ್‌!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಮನೆಯಲ್ಲಿ ಸಂತಸ ಮೂಡಿದೆ. ಪೂಜೆಗಳು ನೆರವೇರುತ್ತಿದೆ. ಆದರೆ ಕಥೆ ಈಗ ಮಿಂಚು ಮೇಲೆ ಸಾಗಿದಂತಿದೆ. ಅಡೆತಡೆಗಳು‌ ಸಾವಿರ ಬಂದರೂ ಮಗಳು ಮಿಂಚು (Minchu) ಬಿಟ್ಟುಕೊಡುತ್ತಿಲ್ಲ ಗೌತಮ್‌.

Amruthadhaare: ಅಡೆತಡೆಗಳು‌ ಸಾವಿರ ಬಂದರೂ ಮಗಳನ್ನು ಬಿಟ್ಟುಕೊಡದ ಗೌತಮ್‌!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 8, 2026 9:55 AM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್‌ ದಿವಾನ್‌ (Gowtham Diwan) ಮನೆಯಲ್ಲಿ ಸಂತಸ ಮೂಡಿದೆ. ಪೂಜೆಗಳು ನೆರವೇರುತ್ತಿದೆ. ಆದರೆ ಕಥೆ ಈಗ ಮಿಂಚು ಮೇಲೆ ಸಾಗಿದಂತಿದೆ. ಅಡೆತಡೆಗಳು‌ ಸಾವಿರ ಬಂದರೂ ಮಗಳು ಮಿಂಚು (Minchu) ಬಿಟ್ಟುಕೊಡುತ್ತಿಲ್ಲ ಗೌತಮ್‌.

ಸಾಮ್ರಾಜ್ಯಕ್ಕೆ ಮರಳಿದ ಗೌತಮ್‌

ಇತ್ತ ಭೂಮಿ ಹಾಗೂ ಗೌತಮ್‌ ಮತ್ತೆ ಹಳೆ ಮನೆಗೆ ಬಂದಿದ್ದಾರೆ. ಮದುವೆ ಆಗಿ ಬಂದಾಗ, ತುಂಬು ಮನಸ್ಸಿನಿಂದ ನಿಮ್ಮನ್ನು ಒಳಗೆ ಕರೆದುಕೊಂಡಿರಲಿಲ್ಲ. ಈಗ ಹಾಗಲ್ಲ. ನಾನೇ ನಿಮ್ಮನ್ನು ಒಳಗೆ ಕರೆದುಕೊಳ್ಳುವೆ ಅಂತ ಆರತಿ ಎತ್ತಿ ಮನೆಗೆ ತುಂಬಿಸಿಕೊಂಡಿದ್ದಾಳೆ ಶಕುಂತಲಾ.

ಇದನ್ನೂ ಓದಿ: Kannada Serial: ಕಿರುತೆರೆಗೆ ರೀ ಎಂಟ್ರಿ ಕೊಡಲು ಸಜ್ಜಾದ್ರು ಧನುಷ್‌, ಧ್ರುವಂತ್‌!

ಪೂಜೆಗೆ ಭೂಮಿ ಹಾಗೂ ಗೌತಮ್‌ ಕೂತಾಗ, ಪರೋಹಿತರು ಮನೆ ಸಂತಾನ ಅಲ್ಲದೇ ಇರೋರು ಪೂಜೆಗೆ ಕುಳಿತುಕೊಳ್ಳಬಾರದು ಎಂದಿದ್ದಾರೆ. ಅದಕ್ಕೆ ಮಿಂಚು ಎದ್ದು ಹೋಗಿದ್ದಾಳೆ. ಆಗ ಗೌತಮ್‌ ಇದ್ದವನು ಮಿಂಚುಳನ್ನು ಪಕ್ಕಕ್ಕೆ ಕೂರಿಸಿಕೊಂಡು ಮಕ್ಕಳು ದೇವರ ಸಮಾನ ಎಂದಿದ್ದಾನೆ. ಅಷ್ಟೇ ಅಲ್ಲ ಭೂಮಿಕಾ ಕೂಡ ನಮ್ಮ ಭಾವನೆಗಳಿಗೆ ಬೆಲೆ ಕೊಡಿ ಎಂದಿದ್ದಾಳೆ.

ಪ್ರೋಮೋ ನೋಡಿದರೆ ಇನ್ನು ಮುಂದೆ ಮಿಂಚು ಮೇಲೆ ಕಥೆ ಸಾಗುವಂತಿದೆ. ಗೌತಮ್‌ ದಿವಾನ್‌ ಮಗಳೇ ಮಿಂಚು ಅನ್ನೋದು ಮುಂದಿನ ದಿನಗಳಲ್ಲಿ ರಿವೀಲ್‌ ಆಗಲಿದೆಯಾ ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.

ಮತ್ತೊಂದು ಕಡೆ ಈಗಾಗಲೇ ಜಯದೇವ್​​ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಜಯದೇವ್​​ ಈಗ ಆತನು ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಯಾರೋ ಬಳಿ 2 ಕೋಟಿ ರೂ ಹಣ ಸಾಲ ಪಡೆಯಲು ಮುಂದಾಗಿದ್ದ, ಅವರೂ ಕೂಡದೇ ಈಗ ಜೈದೇವ್‌ ಬೀದಿಗೆ ಬಂದಿದ್ದಾನೆ. ಅಷ್ಟೇ ಅಲ್ಲ ಜೈದೇವ್‌ ಸಹಾಯಕ್ಕೆ ಯಾರೂ ಬರ್ತಿಲ್ಲ.

ಜ್ಯೋತಿಷಿಯ ಈ ಮಾತಿನಿಂದ ಇನ್ನೂ ಕೆಲವು ವರ್ಷ ಅಮೃತಧಾರೆ ಮುಂದುವರೆಯುವಂತೆ ಕಾಣುತ್ತಿದೆ. ಇದರ ಅರ್ಥ, ಮಗಳಿಂದ ತೊಂದರೆ ಎಂದರೆ ಅದು ಕಳೆದು ಹೋಗಿರುವ ಮಗಳಿಂದ ಎನ್ನುವುದು ಈಗ ನಿಶ್ಚಿತವಾಗಿದೆ. ಹಾಗಿದ್ದರೆ ಆ ಮಗಳು ಎಲ್ಲಿದ್ದಾಳೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಇದನ್ನೂ ಓದಿ: Amruthadhaare Serial: ದಿವಾನ್ ಮನೆಯಲ್ಲಿ ಗೌತಮ್ - ಭೂಮಿಕಾ ರಾಜ್ಯಭಾರ; ಪೊಲೀಸ್ ಕೈಗೆ ಸಿಕ್ಕಿರೋ ಕೇಡಿ ಕತೆ ಹರೋಹರ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ