ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhedyam Movie: ವಿಜಯ ರಾಘವೇಂದ್ರ ಅಭಿನಯದ ʼಅಭೇದ್ಯಂʼ ಚಿತ್ರ ಶೀಘ್ರ ತೆರೆಗೆ

ಸ್ಯಾಂಡಲ್‌ವುಡ್‌ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ, ಸಂದೀಪ್ ಬಾರಾಡಿ ಕಥೆ ಬರೆದು ನಿರ್ದೇಶಿಸಿರುವ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ʼಅಭೇದ್ಯಂʼ ಚಿತ್ರದ ಚಿತ್ರದ ಶೂಟಿಂಗ್‌ ಈಗಾಗಲೇ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.

ವಿಜಯ ರಾಘವೇಂದ್ರ ಅಭಿನಯದ ʼಅಭೇದ್ಯಂʼ ಚಿತ್ರ ಸದ್ಯದಲ್ಲೇ ತೆರೆಗೆ

ವಿಜಯ ರಾಘವೇಂದ್ರ.

Profile Siddalinga Swamy Mar 6, 2025 10:06 PM

ಬೆಂಗಳೂರು: ಕರಾವಳಿ ಕರ್ನಾಟಕದ ಪ್ರಸಿದ್ದ ಕ್ರೀಡೆ ಕಂಬಳದ ಕುರಿತಾಗಿ ಬರುತ್ತಿರುವ ʼವೀರ ಕಂಬಳʼ ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರು ಅವರ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ಸಿದ್ಧವಾಗಿದೆ. ʼಚಿನ್ನಾರಿಮುತ್ತʼ ವಿಜಯ ರಾಘವೇಂದ್ರ (Vijay Raghavendra) ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ʼಅಭೇದ್ಯಂʼ (Abhedyam Movie) ಎಂದು ಹೆಸರಿಡಲಾಗಿದೆ. ಸಂದೀಪ್ ಬಾರಾಡಿ ಕಥೆ ಬರೆದು, ನಿರ್ದೇಶಿಸಿದ್ದಾರೆ. ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಯುವ ಶೆಟ್ಟಿ ಚಿತ್ರಕಥೆ ಬರೆದು ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜತೆಗೆ ಅಭಿನಯಿಸಿದ್ದಾರೆ. ಯುವ ಶೆಟ್ಟಿ ಹಾಗೂ ಡಿಬಿಸಿ ಶೇಖರ್ ಸಂಭಾಷಣೆ ಬರೆದಿದ್ದಾರೆ.

ಭೇದಿಸಲಾಗದ್ದನ್ನು 'ಅಭೇದ್ಯಂ’ ಎನ್ನುತ್ತಾರೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಚಿತ್ರದ ಶೂಟಿಂಗ್‌ ಈಗಾಗಲೇ ಮುಕ್ತಾಯವಾಗಿದೆ.‌ ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದು ನಿರ್ದೇಶಕ ಸಂದೀಪ್ ಬಾರಾಡಿ ತಿಳಿಸಿದ್ದಾರೆ.

ವರುಣ್ ಉಣ್ಣಿ ಕೊಚ್ಚಿನ್, ಕಿಶೋರ್, ಕುಮಾರ್ ಶೆಟ್ಟಿ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಮಯೂರ್ ಆರ್. ಶೆಟ್ಟಿ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ,‌ ಮಾಸ ಮಾದ ಸಾಹಸ ನಿರ್ದೇಶನ,‌ ಮಹೇಶ್ ಎಣ್ಮೂರ್ ಅವರ ಕಲಾ ನಿರ್ದೇಶನ ಹಾಗೂ ಸೂರಜ್ (ಕಾಮಿಡಿ ಕಿಲಾಡಿಗಳು), ತರುಣ್ ರಾಜ್ ನೃತ್ಯ ನಿರ್ದೇಶನವಿದೆ. ಪ್ರಜ್ನೇಶ್ ಶೆಟ್ಟಿ ಅವರ ನಿರ್ಮಾಣ ನಿರ್ವಹಣೆಯಿರುವ ʼಅಭೇದ್ಯಂʼ ಚಿತ್ರದ ಕಾರ್ಯಕಾರಿ ನಿರ್ಮಾಪಕರು ರಾಜೇಶ್ ಕುಡ್ಲ.

ಈ ಸುದ್ದಿಯನ್ನೂ ಓದಿ | Womens Day Fashion: ಮಹಿಳಾ ದಿನಾಚಾರಣೆ ಸೆಲೆಬ್ರೇಷನ್‌ಗೆ ಬಂತು ಫೆಮಿನೈನ್‌ ಲುಕ್‌ ನೀಡುವ ಡಿಸೈನರ್‌ವೇರ್ಸ್

ವಿಜಯ ರಾಘವೇಂದ್ರ ಅವರು ನಾಯಕರಾಗಿ ನಟಿಸಿರುವ ʼಅಭೇದ್ಯಂʼ ಚಿತ್ರದ ತಾರಾಬಳಗದಲ್ಲಿ ರೋಶನ್ ವೇಗಸ್, ಸಿಂಚನ ಪಿ. ರಾವ್, ಸುಂದರ್ ವೀಣ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ಮೋಹನ್ ಶೇಣಿ, ಯುವಾ ಶೆಟ್ಟಿ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ, ಪ್ರವೀಣ್ ಜೈನ್, ಸೂರಜ್ ಪಾಂಡೇಶ್ವರ್, ಸೂರ್ಯ ಕುಂದಾಪುರ, ರಾದೇಶ್ ಶೆಣೈ ಮುಂತಾದವರಿದ್ದಾರೆ.