Womens Day Fashion: ಮಹಿಳಾ ದಿನಾಚಾರಣೆ ಸೆಲೆಬ್ರೇಷನ್‌ಗೆ ಬಂತು ಫೆಮಿನೈನ್ ಲುಕ್ ನೀಡುವ ಡಿಸೈನರ್‌ವೇರ್ಸ್
Womens Day Fashion: ಮಹಿಳಾ ದಿನಾಚಾರಣೆ ಸೆಲೆಬ್ರೇಷನ್‌ಗೆ ಈಗಾಗಲೇ ನಾನಾ ಬಗೆಯ ಫೆಮಿನೈನ್ ಲುಕ್ ನೀಡುವ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವುಗಳಲ್ಲಿ, ಡಿಫರೆಂಟ್ ಲುಕ್ ನೀಡುವ ಥೀಮ್ ಬ್ಲೌಸ್ ಸೀರೆ, ಲಾಂಗ್ ಕಾಲರ್ ಸೆಲ್ವಾರ್, ಟಾಮ್‌ಬಾಯ್ ಇಮೇಜ್ ನೀಡುವ ಬಗೆಬಗೆಯ ವೆರೈಟಿ ಔಟ್‌ಫಿಟ್ಸ್ ಟ್ರೆಂಡಿಯಾಗಿವೆ. ಮಾನಿನಿಯರನ್ನು ಆಕರ್ಷಿಸುತ್ತಿವೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ವರದಿ.

ಚಿತ್ರಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಹಿಳಾ ದಿನದ ಸೆಲೆಬ್ರೇಷನ್‌ಗೆ ಈಗಾಗಲೇ ನಾನಾ ಬಗೆಯ ಔಟ್‌ಫಿಟ್ಸ್, ಬೋಲ್ಡ್ ಡಿಸೈನರ್‌ವೇರ್‌ಗಳು ಹಾಗೂ ವೆರೈಟಿ ಸೀರೆಗಳು ಫ್ಯಾಷನ್‌ಲೋಕಕ್ಕೆ (Womens Day Fashion) ಕಾಲಿಟ್ಟಿವೆ. ಹೌದು, ಮೊದಲಿನಂತೆ ಈಗೆಲ್ಲಾ ದೊಡ್ಡ ಬಿಂದಿ, ಕಾಟನ್ ಸೀರೆ ವುಮೆನ್ಸ್ ಡೇ ಡ್ರೆಸ್‌ಕೋಡ್ ಆಗಿ ಉಳಿದಿಲ್ಲ, ಬದಲಿಗೆ ಫೆಮಿನೈನ್ ಲುಕ್ ಹಾಗೂ ಟಾಮ್ ಬಾಯ್ ಇಮೇಜ್ ನೀಡುವಂತಹ ನಾನಾ ಬಗೆಯ ಡಿಸೈನರ್‌ವೇರ್‌ಗಳು ಉಡುಗೆಗಳು ಟ್ರೆಂಡಿಯಾಗಿವೆ.
ಮಾಡರ್ನ್ ವುಮೆನ್ ಅಥವಾ ದಿಟ್ಟ ಮಹಿಳೆ ಕಾನ್ಸೆಪ್ಟ್‌ಗೆ ಹೊಂದುವಂತಹ ಹಾಗೂ ಈ ಲುಕ್‌ಗೆ ಸಾಥ್ ನೀಡುವಂತಹ ಔಟ್‌ಫಿಟ್‌ಗಳು ಹಾಗೂ ಡ್ರೆಸ್‌ಕೋಡ್‌ಗಳು ಈ ಸೀಸನ್‌ನಲ್ಲಿ ಬಂದಿವೆ. ಇವುಗಳಲ್ಲಿ ಸೀರೆಯ ಪಾತ್ರ ಮಾತ್ರ ಇಂದಿಗೂ ಸೈಡಿಗೆ ಸರಿದಿಲ್ಲ. ಬದಲಿಗೆ ಸಾಕಷ್ಟು ಬದಲಾವಣೆ ಕಂಡಿದೆ. ಫ್ಯಾಬ್ರಿಕ್‌ನಿಂದಿಡಿದು ಧರಿಸುವ ರೀತಿ-ನೀತಿ ಹಾಗೂ ಡಿಸೈನ್ ಎಲ್ಲವಲ್ಲೂ ಸಾಕಷ್ಟು ಬದಲಾವಣೆಗೊಂಡಿದೆ. ಇನ್ನುಳಿದಂತೆ, ಟಾಮ್ ಬಾಯ್ ಇಮೇಜ್‌ಗೆ ಹೊಂದುವಂತಹ ಬಗೆಬಗೆಯ ಕ್ಯಾಶುವಲ್‌ವೇರ್ ಹಾಗೂ ಸೆಲ್ವಾರ್‌ಗಳು ಹೊಸ ರೂಪದಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಮಾಲ್‌ನಲ್ಲಿರುವ ಶಾಪ್‌ವೊಂದರ ಡಿಸೈನರ್ಸ್.

ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನಲ್ಲಿ ಮಾಡರ್ನ್ ಲುಕ್ ನೀಡುವ ಸೀರೆಗಳು
ಕಾಟನ್, ಲೆನಿನ್, ಹ್ಯಾಂಡ್‌ಲೂಮ್ ಸೀರೆಗಳನ್ನು ಧರಿಸಿ ಕಾಣಿಸಿಕೊಳ್ಳುವುದು ಇಂದಿನ ವುಮೆನ್ಸ್ ಡೇ ಡ್ರೆಸ್‌ಕೋಡ್ ಎನ್ನುವ ಕಾಲ ಈಗಿಲ್ಲ! ಬದಲಿಗೆ ಕಾಟನ್, ಲೆನಿನ್ ಹಾಗೂ ಹ್ಯಾಂಡ್‌ಲೂಮ್‌ನಂತಹ ಸೀರೆಗೆ ಥೀಮ್ ಬ್ಲೌಸ್‌ಗಳನ್ನು ಧರಿಸಿ, ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಲುಕ್ ಹಾಗೂ ಸೀರೆ ಇಮೇಜ್ ಬದಲಿಸುವ ಫ್ಯಾಷನ್ ಬಂದಿದೆ. ಆಯಾ ಮಹಿಳೆಯ ವ್ಯಕ್ತಿತ್ವ ಹಾಗೂ ಪರ್ಸನಾಲಿಟಿಗೆ ಅನುಗುಣವಾಗಿ ಸೀರೆಗಳನ್ನು ಇಲ್ಲವೇ ಡಿಸೈನರ್ ಥೀಮ್ ಬ್ಲೌಸ್‌ಗಳನ್ನು ಧರಿಸಿ, ಸ್ಟೈಲಿಂಗ್ ಮಾಡುವುದು ಹೆಚ್ಚಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಉದಾಹರಣೆಗೆ, ಹ್ಯಾಂಡ್‌ಲೂಮ್ ಸೀರೆಗೆ ಕ್ಯಾಶುವಲ್ ಕ್ರಾಪ್ ಟಾಪ್, ವೆಸ್ಟರ್ನ್ ಟೀ ಶರ್ಟ್ ಟಾಪ್ ಹಾಗೂ ರಫಲ್ಸ್ ಸೀರೆ. ಲೆನಿನ್ ಸೀರೆಯೊಂದಿಗೆ ಲಾಂಗ್ ಬ್ಲೌಸ್.

ಹುಡುಗಿಯರ ಟಾಮ್‌ಬಾಯ್ ಇಮೇಜ್‌ಗೆ ಸಿಕ್ತು ಗ್ಲಾಮರ್ ಟಚ್
ನನಗೆ ಸೀರೆ-ಸಲ್ವಾರ್ ಇಷ್ಟವಿಲ್ಲ ಎನ್ನುವವರಿಗೆ ರಗಡ್ ಲುಕ್ ನೀಡುವ ಟಾಮ್ ಬಾಯ್ ಇಮೇಜ್ ನೀಡುವ ನಾನಾ ಬಗೆಯ ಔಟ್‌ಫಿಟ್‌ಗಳು ಆಗಮಿಸಿವೆ. ಪ್ಲೈಡ್, ಕೆಪ್ರೀಸ್, ಶಾರ್ಟ್ ಪ್ಯಾಂಟ್ ಸೇರಿದಂತೆ ಕಲರ್‌ಫುಲ್ ಸ್ಟೇಟ್‌ಮೆಂಟ್ ಪ್ಯಾಂಟ್‌ಗಳು ಬಂದಿವೆ. ಇನ್ನು ಸಖತ್ ಫಿಟ್ಟಿಂಗ್ ಇರುವ ಟಾಪ್‌ಗಳ ಬದಲು, ಕ್ರಾಪ್ ಟಾಪ್‌ಗಳಂತೆ ಕಾಣುವ ಟೀ ಶರ್ಟ್‌ಗಳು ಕಾಣಿಸಿಕೊಂಡಿವೆ. ಸ್ಲೀವ್‌ಗಳು ಅಷ್ಟೇ, ಫ್ಲೀಟ್ಸ್, ಬಲೂನ್ ಹಾಗೂ ಫ್ಲಾಟೆರಿಂಗ್ ಸ್ಲೀವ್‌ಗಳು ಎಂಟ್ರಿ ನೀಡಿವೆ.

ವುಮೆನ್ಸ್ ಡೇ ಸೆಲೆಬ್ರೇಷನ್‌ಗೆ ಬಂತು ವೆರೈಟಿ ಸಲ್ವಾರ್
ಲಾಂಗ್ ಆಗಿ ಇರುವಂತಹ, ಮಂಡಿಯಿಂದ ಕೆಳಗೆ ನಿಲ್ಲುವ ಸಲ್ವಾರ್ ಕುರ್ತಾಗಳು, ಶರ್ಟ್ ಕಾಲರ್‌ನ ಕುರ್ತಾಗಳು ಸಲ್ವಾರ್ ರೂಪದಲ್ಲಿ ಆಗಮಿಸಿವೆ. ಇವಕ್ಕೆ ಆ್ಯಂಕೆಲ್ ಲೆಂಥ್ ಅಥವಾ ಟೈಟ್ ಲೆಗ್ಗಿಂಗ್ಸ್ ಮ್ಯಾಚ್ ಮಾಡಿರುವಂತವು ಟ್ರೆಂಡಿಯಾಗಿವೆ. ಇವೆರೆಡರ ಜತೆಗೆ ಮಾರುದ್ದದ ದುಪಟ್ಟಾ ಹಾಗೂ ಶಾಲ್‌ಗಳು ಸಾಥ್ ನೀಡುತ್ತಿವೆ.
ಈ ಸುದ್ದಿಯನ್ನೂ ಓದಿ | Womens day Special: ಮಹಿಳಾ ಸಬಲೀಕರಣಕ್ಕೆ ವೇದಿಕೆ ಕಲ್ಪಿಸುತ್ತಿರುವ ಫ್ಯಾಷನ್ ಲೋಕ
ವುಮೆನ್ಸ್ ಡೇ ಸ್ಪೆಷಲ್ ಲುಕ್‌ಗಾಗಿ ಇಲ್ಲಿದೆ ಸಿಂಪಲ್ ಟಿಪ್ಸ್
- ಫೆಮಿನೈನ್ ಇಮೇಜ್‌ಗಾಗಿ ಸಾಕಷ್ಟು ಅಪ್ಷನ್ ಲಭ್ಯ.
- ಆಕರ್ಷಕವಾಗಿರುವ ಕಾಲರ್ ನೆಕ್‌ನ ಇಂಡೋ-ವೆಸ್ಟರ್ನ್ ಟಾಪ್‌ಗಳನ್ನು ಸೀರೆ ಜತೆಗೆ ಧರಿಸಬಹುದು.
- ಎಲಿಗೆಂಟ್ ಹಾಗೂ ಡಿಸೆಂಟ್ ಲುಕ್‌ಗಾಗಿ ಹೈ ಪೋನಿ ಇಲ್ಲವೇ ಬನ್ ಹೇರ್‌ಸ್ಟೈಲ್ ಟ್ರೈ ಮಾಡಬಹುದು.
- ರೆಟ್ರೊ ಸ್ಟೈಲ್‌ನ ಡ್ರೆಸ್‌ಕೋಡ್ ಕೂಡ ಪ್ರಯೋಗಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)