Actor Darshan: ಕಾಮಿಡಿ ಮಾಡಿದ್ರೂ ರಿಯಾಕ್ಟ್ ಮಾಡ್ತಾ ಇರಲಿಲ್ಲ, ಸೈಲೆಂಟ್ ಆಗಿದ್ರು ದರ್ಶನ್! ವಿಜಯಲಕ್ಷ್ಮಿ ಮಾತಿಗೆ ಫ್ಯಾನ್ಸ್ ಭಾವುಕ
Vijayalakshmi : ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಅವರು ‘ದಿ ಡೆವಿಲ್’ ಸಿನಿಮಾ (The Devil Movie) ರಿಲೀಸ್ ಆಗಿದೆ. ದರ್ಶನ್ ಜೈಲಿನಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಸಂದರ್ಶನ ನೀಡಿದ್ದಾರೆ.
ನಟ ದರ್ಶನ್ -
ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ‘ದಿ ಡೆವಿಲ್’ ಸಿನಿಮಾ (The Devil Movie) ರಿಲೀಸ್ ಆಗಿದೆ. ದರ್ಶನ್ ಜೈಲಿನಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಸಂದರ್ಶನ (Interview) ನೀಡಿದ್ದಾರೆ. ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಅವರು ಇಲ್ಲದೇ ಇದ್ದರೂ, ಅವರ ಫ್ಯಾನ್ಸ್, ಅವರ ಸಿನಿಮಾವನ್ನ, ಅವರನ್ನ ತಲೆ ಮೇಲೆ ಎತ್ತಿಕೊಂಡು ಮರೆಸುತ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಸುಮ್ಮನೆ ಕುಳಿತುಕೊಂಡು ಬಿಡೋರು
ದರ್ಶನ್ ಅವರಿಗೆ ಬೇಲ್ ಕ್ಯಾನ್ಸಲ್ ಅನ್ನೋ ವಿಚಾರ ಗೊತ್ತಾದಾಗ, ದರ್ಶನ್ ಹೇಗೆ ರಿಯಾಕ್ಟ್ ಮಾಡಿದ್ರು? ಅಂತ ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ. ದರ್ಶನ್ ಸುಮ್ಮನೆ ಆಗಿ ಬಿಡೋರು, ಸುಮ್ಮನೆ ಕುಳಿತುಕೊಂಡು ಬಿಡೋರು. ಮಾತು ತುಂಬಾ ಕಡಿಮೆ ಮಾಡಿದ್ರು. ಮನೆಯಲ್ಲಿ ಕೂಡ ಅಷ್ಟೇ ಒಬ್ಬರೇ ಕುಳಿತುಕೊಂಡು ಬಿಡೋರು. ನಾವು ಕಾಮಿಡಿ ಮಾಡಿದ್ರೂ ಏನೇ ಮಾಡಿದ್ರೂ ರಿಯಾಕ್ಟ್ ಮಾಡ್ತಾ ಇರಲಿಲ್ಲ. ಸುಮಾರು ದಿನಗಳಿಂದ ಸೈಲೆಂಟ್ ಇದ್ದಿದ್ದರು. ಬೇಲ್ ಕ್ಯಾನ್ಸಲ್ ಆದಾಗ, ಬೇರೆ ಯಾರಾದರೂ ಅವರಿಗೆ ಕಾಲ್ ಮಾಡಿ ಹೇಳೊಕ್ಕಿಂತ ನಾನೆ ಕಾಲ್ ಮಾಡಿ ತಿಳಿಸಿದೆ. ಬೇಲ್ ಕ್ಯಾನ್ಸಲ್ ಆಗಿದೆ ಅಂತ.
ಇದನ್ನೂ ಓದಿ: Actor Darshan: ದರ್ಶನ್ ಬೆನ್ನು ನೋವಿನ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಪತ್ನಿ ವಿಜಯಲಕ್ಷ್ಮಿ
ಜೈಲ್‌ಗೂ ಹೋಗೋ ಮುನ್ನ ಹೇಳಿದ್ದೇನು?
ಬೇಲ್ ಕ್ಯಾನ್ಸಲ್ ಆಯ್ತು ಅಂತ ಅಂದೆ. ಕೇಳಿದ ಕೂಡಲೆ ಅವರು ತುಂಬಾ ಸೈಲೆಂಟ್ ಆದರು ಒಂದು ಪದ ಅವರ ಬಾಯಲ್ಲಿ ಬಂದಿಲ್ಲ. ರೆಡಿ ಮಾಡು ಬ್ಯಾಗ್‌ನ ಬರ್ತಾ ಇದ್ದೀನಿ ಅಂತ ಅಷ್ಟೇ ಹೇಳಿದ್ದರು ಎಂದಿದ್ದಾರೆ. ಸ್ಟ್ರಾಂಗ್ ಆಗಿರು, ವಿನೀಶ್ ನೋಡಿಕೊ, ಅಳಕೊಂಡು ಕೂತಿರಬೇಡ. ಮನೆದಲ್ಲ ಏನೇನು ಇದೆ ನೋಡಿಕೊ ಅಂತ ಹೇಳಿದ್ದರು.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದೆ. ದರ್ಶನ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಶನದಲ್ಲಿ ದರ್ಶನ್ ಅವರ ಆರೋಗ್ಯದ ವಿಚಾರವಾಗಿಯೂ ಹೇಳಿಕೊಂಡರು. ಇನ್ನು ನನ್ನ ಬಗ್ಗೆ, ನನ್ನ ಮಗನ ಬಗ್ಗೆಮಾತಾಡಿದ್ರೆ ನಮಗೆ ಎಫೆಕ್ಟ್ ಏನೂ ಆಗಲ್ಲ. ನನಗೆ 90 ಪರ್ಸೆಂಟ್ ಜನ ಪ್ರೀತಿ ತೋರಿಸ್ತಾರೆ. ಅದು ನನಗೆ ಮ್ಯಾಟರ್ ಆಗತ್ತೆ. ನೆಗೆಟಿವ್ ಕಮೆಂಟ್ ನಾನು ಓದೋದು ಇಲ್ಲ. ಇನ್ನು ದರ್ಶನ್ ಫ್ಯಾನ್ಸ್‌ಗೆ ಮಹಿಳೆಯರಿಗೆ ಗೌರವ ಕೊಡೋದು ಗೊತ್ತು.
ನಮ್ಮ ಸೆಲೆಬ್ರಿಟಿಸ್ ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ ಅಂತ ಹೇಳೋಣ’ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.