Actor Darshan: ದರ್ಶನ್ ಬೆನ್ನು ನೋವಿನ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಪತ್ನಿ ವಿಜಯಲಕ್ಷ್ಮಿ
darshan: ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ವೇಳೆ, ಬೆನ್ನು ನೋವಿನಿಂದ ಪರದಾಡಿದ್ದರು. ಕೆಲವರು ಈ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿದ್ದೂ ಇದೆ. ಆದರೆ ಈಗ ಮೊದಲ ಬಾರಿಗೆ ಸಂದರ್ಶನ ನೀಡಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಸಂದರ್ಶನ ನೀಡಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ -
ದರ್ಶನ್ ಡೆವಿಲ್ ಸಿನಿಮಾ (Devil Movie) ಶೂಟಿಂಗ್ ವೇಳೆ, ಬೆನ್ನು ನೋವಿನಿಂದ ಪರದಾಡಿದ್ದರು. ಕೆಲವರು ಈ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿದ್ದೂ ಇದೆ. ಆದರೆ ಈಗ ಮೊದಲ ಬಾರಿಗೆ ಸಂದರ್ಶನ (Interview) ನೀಡಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಸಂದರ್ಶನ ನೀಡಿದ್ದಾರೆ.
ದರ್ಶನ್ ಬೆನ್ನು ನೋವಿದೆ
ದರ್ಶನ್ ಅವರಿಗೆ ಬೆನ್ನು ನೋವಿದೆ. ಬೇಲ್‌ಗೋಸ್ಕರ ಹಾಗೆ ಮಾಡಿದ್ರೂ ಅಂತಾರೆ. ಡಾಕ್ಟರ್ ಸರ್ಜರಿ ಮಾಡಲು ಹೇಳಿದ್ದರು. ಒಂದು ವರ್ಷದ ವರೆಗೆ ಬೆಡ್ ರೆಸ್ಟ್ ಮಾಡಬೇಕು ಅಂದಿದ್ದರು. ಇನ್ನು ಅವರ ಕೆಲಸದಲ್ಲಿ ಕುಳಿತುಕೊಂಡೇ ಕೆಲಸ ಮಾಡಲು ಸಾಧ್ಯವಿಲ್ಲ. ಆಗಾಗ ರೆಸ್ಟ್ ಮಾಡಿಕೊಂಡು ಮಾಡೋಕೆ ಅಸಾಧ್ಯ. ಸಿಕ್ಕಾಪಟ್ಟೆ ಮೂವಿಂಗ್ ಇರತ್ತೆ.
ಇದನ್ನೂ ಓದಿ: Actor Zaid Khan: ನಟ ದರ್ಶನ್‌ಗೆ ಜನವರಿಯಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ: ನಟ ಝೈದ್ ಖಾನ್
ಪ್ರಕಾಶ್ ಅವರ ಕಮಿಟ್ ಆಗಿದೆ . ಹಾಗಾಗಿ ಸಿನಿಮಾ ಮುಗಿಸೋಣ ಎಂದರು. ಲೇಸರ್ ಸರ್ಜರಿ ಮಾತನಾಡಿದ್ದೆ. ಸಿನಿಮಾ ಮುಗಿಸಬೇಕು ಎಂದು ದರ್ಶನ್ ಆಸೆ ಆಗಿತ್ತು. ಒಬ್ಬರ ದುಡ್ಡ ತೆಗೆದುಕೊಂಡಾಗ, ಸರಿಯಾದ ನ್ಯಾಯ ಕೊಡಬೇಕು. ಹೈ ಡೋಜ್ ತೆಗೆದುಕೊಳ್ಳುತ್ತಿದ್ದರು. ಈಗಲೂ ಮೆಡಿಸನ್ ತೆಗೊತ್ತಾರೆ. ಬ್ಯಾಡ್ ಕಮೆಂಟ್ ಬಗ್ಗೆ ಮಾತನಾಡೋರು ಮಾಡ್ತಾರೆ ಎಂದಿದ್ದಾರೆ ವಿಜಯಲಕ್ಷ್ಮೀ.
ದರ್ಶನ್ ಬಗ್ಗೆ ಹಲವು ವಿಚಾರ ಶೇರ್ ಮಾಡಿದ್ದಾರೆ ವಿಜಯಲಕ್ಷ್ಮೀ. ಡೆವಿಲ್ ಸಿನಿಮಾ ಬಗ್ಗೆ ಖುಷಿ ಆಗ್ತಿದೆ. ದರ್ಶನ್ ಅವರು ಇಲ್ಲದೇ ಇದ್ದರೂ, ಅವರ ಫ್ಯಾನ್ಸ್, ಅವರ ಸಿನಿಮಾವನ್ನ, ಅವರನ್ನ ತಲೆ ಮೇಲೆ ಎತ್ತಿಕೊಂಡು ಮರೆಸುತ್ತಾ ಇದ್ದಾರೆ. ಅದಕ್ಕೆ ಇದೆ ಉದಾಹರಣೆ.
ಹೇಗಿದೆ ಸಿನಿಮಾ?
ದರ್ಶನ್ ಅವರು ತಮ್ಮ ಪ್ರೊಫೆಶನ್‌ನನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಇದರ ಋಣ ತೀರಿಸಲು ಪದೇ ಪದೇ ಹುಟ್ಟು ಬರಬೇಕಾಗುತ್ತೆ ಅಂತ ಇರ್ತಾರೆ. ಇನ್ನು ಸಿನಿಮಾ ರಿಲೀಸ್ ಆದ ಬಳಿಕ ಕಾಲ್ ಮಾಡಿ ಕೇಳಿದ್ದು, ಹೇಗಿದೆ ಸಿನಿಮಾ? ಜನ ಚೆನ್ನಾಗಿ ಮಜಾ ಮಾಡ್ತಾ ಇದ್ದಾರಾ? ನಿರ್ಮಾಪಕರು ಖುಷಿ ಆಗಿದ್ದಾರಾ? ಅಂತ ಕೇಳಿದ್ರು ಎಂದಿದ್ದಾರೆ.
ಇನ್ನು ನನ್ನ ಬಗ್ಗೆ, ನನ್ನ ಮಗನ ಬಗ್ಗೆಮಾತಾಡಿದ್ರೆ ನಮಗೆ ಎಫೆಕ್ಟ್ ಏನೂ ಆಗಲ್ಲ. ನನಗೆ 90 ಪರ್ಸೆಂಟ್ ಜನ ಪ್ರೀತಿ ತೋರಿಸ್ತಾರೆ. ಅದು ನನಗೆ ಮ್ಯಾಟರ್ ಆಗತ್ತೆ. ನೆಗೆಟಿವ್ ಕಮೆಂಟ್ ನಾನು ಓದೋದು ಇಲ್ಲ. ಇನ್ನು ದರ್ಶನ್ ಫ್ಯಾನ್ಸ್‌ಗೆ ಮಹಿಳೆಯರಿಗೆ ಗೌರವ ಕೊಡೋದು ಗೊತ್ತು.
ನಮ್ಮ ಸೆಲೆಬ್ರಿಟಿಸ್ ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ ಅಂತ ಹೇಳೋಣ’ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.