ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ದಿ ಡೆವಿಲ್ (The Devil Movie) ಚಿತ್ರ ಡಿಸೆಂಬರ್ 11 ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಕೊಲೆ ಆರೋಪದ ಮೇಲೆ ನಟ ದರ್ಶನ್ ಜೈಲು ಸೇರಿದ್ದಾರೆ. ಬೇಲ್ ಮೇಲೆ ಹೊರ ಬಂದು ಡೆವಿಲ್ ಸಿನಿಮಾ ಕಂಪ್ಲೀಟ್ ಮಾಡಿದ್ದ ನಟ ದರ್ಶನ್. ಜಾಮೀನು ರದ್ದಾದ ಬಳಿಕ ಮತ್ತೆ ಜೈಲು ಪಾಲಾದರು. ಇದೀಗ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗೆ ಬರ್ತಿದೆ. ಇಂದು (ನ.24) ಅಂಬರೀಷ್ ಅವರ ಪುಣ್ಯಸ್ಮರಣೆ. ಈ ವೇಳೆ ಮಾಧ್ಯಮಗಳ ಜೊತೆ ಸುಮಲತಾ ಅಂಬರೀಶ್ ಮಾತನಾಡಿದರು.
ಮಾಧ್ಯಮದ ಜೊತೆಗೆ ಮಾತನಾಡಿದ ಸುಮಲತಾ, ಆಗಿ ಹೋಗಿರುವ ವಿಷಯದ ಬಗ್ಗೆ ಮಾತನಾಡಿದರೆ ಈಗ ಏನೂ ಪ್ರಯೋಜನ ಇಲ್ಲ. ಮುಂದೆ ಒಳ್ಳೆದಾಗಲಿ ಎಂದು ಹಾರೈಸೋಣ.
ಡೆವಿಲ್ ಸಿನಿಮಾ ತಂಡದವರು ಪ್ರಚಾರ ಸರಿಯಾಗಿಯೇ ಮಾಡುತ್ತಿದ್ದಾರೆ ಎನಿಸುತ್ತದೆ. ಯಾವತ್ತೂ ನಾನು ಸಿನಿಮಾ ಪ್ರಚಾರಕ್ಕೆ ನೇರವಾಗಿ ಪಾಲ್ಗೊಂಡಿರಲ್ಲ. ಸತ್ಯ ಎನ್ನೋದು ಶಾಶ್ವತವಾಗಿ ಮುಚ್ಚಿಡಲು ಆಗಲ್ಲ. ಚಿತ್ರ ಕೂಡ ಗೆಲ್ಲಲಿ. ಅಭಿಮಾನಿಗಳು ಸಿನಿಮಾ ನೋಡೋಕೆ ಕಾತುರದಿಂದ ಕಾಯುತ್ತಿದ್ದಾರೆ. ಆ ಸಿನಿಮಾ ಖಂಡಿತವಾಗಿಯೂ ಯಶಸ್ವಿ ಆಗಬೇಕು ಎಂಬುದು ನನ್ನ ಹಾರೈಕೆ’ ಎಂದರು.
ಪ್ರತಾಪ್ ಸಿಂಹ ಸಾಥ್
ದರ್ಶನ್ ಅಭಿನಯದ ಡೆವಿಲ್ ಚಿತ್ರದ ಪೋಸ್ಟರ್ ಪ್ರತಾಪ್ ಸಿಂಹ ಕೂಡ ಬಿಡುಗಡೆ ಮಾಡಿದ್ದಾರೆ. ಕನ್ನಡದಲ್ಲಿ ಸಾಕಷ್ಟು ನಟರು ಸ್ಟಾರ್ ಗಳಾಗಿ ಹೊರಹೊಮ್ಮಿದ್ದಾರೆ. ಆದ್ರೆ ಅತೀ ಹೆಚ್ಚು ಫ್ಯಾನ್ಸ್ ಇರೋದು ಒನ್ ಅಂಡ್ ಓನ್ಲಿ ದರ್ಶನ್‌ಗೆ ಮಾತ್ರ. ನಾನು ಮೆಜೆಸ್ಟಿಕ್, ಕರಿಯ ಸಿನಿಮಾಗಳ ಕಾಲದಿಂದಲೂ ಅವರ ಸಿನಿಮಾಗಳನ್ನ ನೋಡುತ್ತಾ ಬಂದಿದ್ದೇನೆ ಎಂದದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡು ಈಗಾಗಲೇ ದರ್ಶನ್ ಅವರ ಅಭಿಮಾನಿಗಳ ಜೊತೆಗೆ ಸಭೆ ಮಾಡಿದ್ದಾರೆ. "ನನ್ನ ಅಭಿಮಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ.. ನನ್ನ ಉಳಿದ ಸಿನಿಮಾಗಳಿಗೆ ಅಪಾರ ಪ್ರೀತಿ ನೀಡಿದ್ದೀರಿ. ಆದರೆ, ಡೆವಿಲ್‌ಗೆ ಹೆಚ್ಚು ಪ್ರೀತಿ ಕೊಡಿ ಅಂತ ಅಭಿಮಾನಿಗಳಲ್ಲಿ ದರ್ಶನ್ ಕೇಳಿಕೊಂಡಿದ್ದಾರೆ" ಎಂದು ವಿಜಯಲಕ್ಷ್ಮಿ ಹೇಳಿದ್ದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಿಕ್ಕ ಕೆಲ್ಸ ಅಂದಿದಕ್ಕೆ ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ
ದರ್ಶನ್ ತೂಗುದೀಪ ಅವರಿಗೆ ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದು, ಮಹೇಶ್ ಮಾಂಜ್ರೇಕರ್, ಅಚ್ಯುತ್ ಕುಮಾರ್, ಶೋಭರಾಜ್, ಗಿಲ್ಲಿ ನಟ, ಹುಲಿ ಕಾರ್ತಿಕ್, ಶರ್ಮಿಳಾ ಮಾಂಡ್ರೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.