ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಿಕ್ಕ ಕೆಲ್ಸ ಅಂದಿದಕ್ಕೆ ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ

Rakshitha Shetty: ಈ ವಾರ ಬಿಗ್‌ ಬಾಸ್‌ ರಣರಂಗವಾಗಿದೆ. ನಾಮಿನೇಷನ್‌ ಪ್ರಕ್ರಿಯೆ ಜೋರಾಗಿದೆ. ಅದರಲ್ಲೂ ಗಿಲ್ಲಿ ಅವರನ್ನೇ ರಕ್ಷಿತಾ ಅವರು ನಾಮಿನೇಟ್‌ ಮಾಡಿದ್ದಾರೆ. ಗ್ರೂಪಿಸಮ್‌ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್‌ , ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್‌ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ.

ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 24, 2025 6:15 PM

ಇಷ್ಟು ದಿನಗಳ ಕಾಲ ಗಿಲ್ಲಿ ನಟ (Gilli Nata) ಹಾಗೂ ರಕ್ಷಿತಾ ಶೆಟ್ಟಿ (Rakshitha Shetty) ಒಟ್ಟಿಗೆ ಇರ್ತಾ ಇದ್ದರು. ಇದಕ್ಕಾಗಿ ಸುದೀಪ್‌ ಅವರು ರಕ್ಷಿತಾಗೆ ವಂಶದ ಕುಡಿ ಎನ್ನುವ ಟೈಟಲ್‌ ಬೇರೆ ಕೊಟ್ಟಿದ್ದರು. ಆದರೀಗ ಗಿಲ್ಲಿ ಹಾಗೂ ರಕ್ಷಿತಾ ಮಧ್ಯೆ ವೈಮನಸ್ಸು (Clash) ಮೂಡುತ್ತಿದೆ. ಈಗ ಗಿಲ್ಲಿ ವಿರುದ್ಧವೇ ರಕ್ಷಿತಾ ಶೆಟ್ಟಿ ತಿರುಗಿ ಬಿದ್ದಿದ್ದಾರೆ. ವಿವಿಧ ಕಾರಣಗಳನ್ನು ನೀಡಿ ಗಿಲ್ಲಿ ಅವರನ್ನು ನಾಮಿನೇಟ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಜಾಹ್ನವಿ (Jhanvi) ಸೇರಿದಂತೆ ಅನೇಕರು ಗಿಲ್ಲಿ ನಡೆಗೆ ಧ್ವನಿ ಎತ್ತುತ್ತಿದ್ದಾರೆ.

ಮೊದಲಿಗೆ ಜಾಹ್ನವಿ ಕಾರಣ ಕೊಟ್ಟಿದ್ದು ಹೀಗೆ, ಮೊನ್ನೆ `ಇವರಿಗೆ ನಿರೂಪಣೆ ಮಾಡಬೇಕಂತೆ. ಸವಿರುಚಿ ನಿರೂಪಣೆ ಇವರಿಗೆ ಸಣ್ಣ ಕಾರ್ಯಕ್ರಮವಂತೆ. ಇವನಿಗೆ ಸೀದಾ ಅನುಬಂಧ ಆಂಕರಿಂಗ್‌ ಕೊಡಬೇಕು ಅಂತೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಡಾಗ್‌ ಸತೀಶ್‌ 80 ಸಾವಿರ ರೂಪಾಯಿ ಶರ್ಟ್‌ನ್ನ ಸ್ಪಂದನಾ ಹಾಳು ಮಾಡಿದ್ದು ಹೌದಾ? ಏನಪ್ಪಾ ಮ್ಯಾಟ್ರು ?

ರಕ್ಷಿತಾ ಗರಂ

ರಕ್ಷಿತಾ ಅವರು ಗಿಲ್ಲಿ ಬಗ್ಗೆ ದೂರಿದ್ದು ಹೀಗೆ, `ಯುಟ್ಯೂಬ್‌ ವ್ಲಾಗರ್ ಕೆಲಸ ಮಾಡಿಯೇ ಬಿಗ್‌ಬಾಸ್ ಮನೆಗೆ ಬಂದಿದ್ದೇವೆ. ನಮ್ಮ ಕೆಲಸವೇ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಯಾವುದೇ ಕೆಲಸದಲ್ಲಿ ದೊಡ್ಡ ಕೆಲಸ, ಚಿಕ್ಕ ಕೆಲಸ ಅನ್ನೋದು ಇಲ್ವೇ ಇಲ್ಲ. ಪ್ರೋಫೆಷನಲ್‌ ಬಗ್ಗೆನೇ ಕೀಳಾಗಿ ಮಾತನಾಡಿದರೆ, ನಿಮ್ಮ ಬಗ್ಗೆ ನಂಬುವುದು ಹೇಗೆ? ' ಎಂದಿದ್ದಾರೆ.

ಕಲರ್ಸ್‌ ಕನ್ನಡ ಪ್ರೋಮೋ

ಪ್ರೋಮೋ ನೋಡಿ ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. ಒಂದು ವೇಳೆ ಸ್ಪರ್ಧಿಗಳ ವೃತ್ತಿ ಬಗ್ಗೆ ಕೇವಲವಾಗಿ ಗಿಲ್ಲಿ ನಟ ಮಾತನಾಡಿದ್ರೆ ಖಂಡಿತ ತಪ್ಪಾಗುತ್ತದೆ. ಹಾಗಾಗಿ ಗಿಲ್ಲಿ ಹೇಳಿದ್ದೇನು ಎಂಬುದನ್ನು ನೋಡಲು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ಕೆಲವರು, ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕ ನಂತರ ಅಹಂಕಾರ ಬಂದಿದೆ ಎಂದು ಕಮೆಂಟ್‌ ಮಾಡಿದ್ದಾರೆ.

ಅಶ್ವಿನಿಯನ್ನ ನೇರವಾಗಿ ಟಾರ್ಗೆಟ್‌ ಮಾಡಿದ ಧ್ರುವಂತ್‌

ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್‌ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ. ಧ್ರುವಂತ್‌ ಕೂಡ ಅಶ್ವಿನಿ ಅವರ ಹೆಸರನ್ನು ಸೂಚಿಸಿ, ʻಫೇಕ್‌ ಮುಖವಾಡ ಹಾಕಿಕೊಂಡಿರೋದು ಅಶ್ವಿನಿ ಗೌಡ ಅವರು. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್‌ ಲೀಡ್‌ ಮಾಡಿರೋದು ಯಾರೂ ಇಲ್ಲʼ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನನ್ನನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂದ ಕಾವು! ಬೆಸ್ಟ್‌ ಫ್ರೆಂಡ್‌ ಬಗ್ಗೆ ಕಾವ್ಯಾ ತಪ್ಪು ತಿಳಿದುಕೊಂಡಿದ್ದಾರಾ?

ಇದರಿಂದ ಕೋಪಗೊಂಡ ಅಶ್ವಿನಿ, ʻಧ್ರುವಂತ್‌ ಅವರೇ ಫೇಕ್‌. ನನ್ನ ಜಾಹ್ನವಿ ಅವರನ್ನು ಅವರ ತೆಕ್ಕೆಗೆ ತೆಗೆದುಕೊಳ್ಳಲು ನೋಡಿದರು ಆದರೆ ಅದು ಆಗಿಲ್ಲ. ಮಲ್ಲಮ್ಮ ಥರ ಅಲ್ಲ ನಾವು ನಿಮ್ಮ ತೆಕ್ಕೆಗೆ ಬೀಳೋಕೆʼ ಎಂದು ಅಬ್ಬರಿಸಿದ್ದಾರೆ.ʻಫೇಕ್‌ ಅಲ್ಲಿ ಮಾತಾಡೋ ನಿಮಗೆ ಇಷ್ಟು ಇರಬೇಕಾದರೆ, ತಾಕತ್‌ ತೋರಿಸೋ ನನಗೆ ಎಷ್ಟು ಇರಬೇಡʼ ಎಂದು ಕೂಗಾಡಿದ್ದಾರೆ ಅಶ್ವಿನಿ.