ನವದೆಹಲಿ: ಈಗಂತೂ ಎಲ್ಲಿ ಕೇಳಿದರೂ ಕಾಂತಾರ ಚಾಪ್ಟರ್ 1 (Kantara chapter 1) ಸಿನಿಮಾದ್ದೆ ಮಾತು. ಅಕ್ಟೋಬರ್ 2ರಂದು ರಿಷಬ್ ಶೆಟ್ಟಿ (Rishabh Shetty) ನಟಿಸಿ ನಿರ್ದೇಶಿಸಿದ್ದ ಕಾಂತಾರ ಸಿನಿಮಾ ಅದ್ಧೂರಿಯಾಗಿ ತೆರೆ ಮೇಲೆ ಬಂದಿದ್ದು ಸಿನಿಮಾ ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಪ್ಯಾನ್ ಇಂಡಿಯಾ ಮಾತ್ರವಲ್ಲದೇ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಹೆಸರು ಮಾಡುತ್ತಿರುವ ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾ ಯಶಸ್ವಿಯಾದ ಬಳಿಕ ಅದರ ಪಾರ್ಟ್ 2 ಬರಬೇಕು ಜನರು ಬಯಸಿದ್ದರು.
ಹೀಗಾಗಿ ಪ್ರಿಕ್ವೆಲ್ ಭಾಗವನ್ನು ತೆರೆ ಮೇಲೆ ತರಲಾಗಿದ್ದು ಇದುವರೆಗೆ 334 ಕೋಟಿ ರೂ. ಗೂ ಮಿಕ್ಕಿ ಗಳಿಕೆ ಮಾಡಿದೆ. ಒಂದು ಕಡೆ ಸಿನಿಮಾ ಇಷ್ಟು ದೊಡ್ಡ ಮಟ್ಟಿಗೆ ಯಶಸ್ಸು ಪಡೆಯುತ್ತಿದ್ದರೆ ಇನ್ನೊಂದೆಡೆ ನಟ ರಿಷಬ್ ಶೆಟ್ಟಿ ಅವರು ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಅಕ್ಟೋಬರ್ 10ರಂದು ಮುಂಬೈನ ಸಿದ್ಧಿವಿನಾಯಕ ದೇವ ಸ್ಥಾನಕ್ಕೆ ಇವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ಅವರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ತೆರೆ ಮೇಲೆ ಬರುತ್ತಿದ್ದಂತೆ ಎಲ್ಲ ಕಡೆ ಹೌಸ್ ಫುಲ್ ಆಗಿದೆ. ಒಂದೆಡೆ ಟಿಕೆಟ್ ಬೆಲೆ ಜಾಸ್ತಿ ಎಂಬ ದೂರು ಅಭಿಮಾನಿಗಳದ್ದಾದರೆ, ಬೆಲೆ ಎಷ್ಟೇ ಆದರೂ ಸಿನಿಮಾ ನೋಡುತ್ತೇವೆ ಎನ್ನುವ ಪ್ರೇಕ್ಷಕ ಬಳಗ ಇನ್ನೊಂದೆಡೆ, ಈ ಸಿನಿಮಾ ಹಾಕಿದ್ದ ಬಂಡವಾಳ ವಾಪಾಸಾಗಿದ್ದು ಚಿತ್ರದ ಯಶಸ್ಸನ್ನು ಆಚರಿಸಲು ನಟ ರಿಷಬ್ ಶೆಟ್ಟಿ ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ತೆರಳಿದ್ದು ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಟ ರಿಷಬ್ ಶೆಟ್ಟಿ ಅವರು ಬಿಳಿ ಬಣ್ಣದ ಶರ್ಟ್ ಜೊತೆಗೆ ಲುಂಗಿ ಧರಿಸಿ ಅದರ ಮೇಲೆ ಕೆಂಪು ಶಾಲು ಧರಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ನಟ ರಿಷಭ್ ಶೆಟ್ಟಿ
ಸದ್ಯ ನಟ ರಿಷಬ್ ಶೆಟ್ಟಿ ಅವರ ವಿಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ಅವರು ದೇಗುಲಕ್ಕೆ ದರ್ಶನ ನೀಡಿ ವಾಪಾಸ್ಸಾಗುತ್ತಿರುವುದನ್ನು ಕಾಣಬಹುದು. ಮುಂಬೈನಲ್ಲಿಯೂ ನಟ ರಿಷಬ್ ಶೆಟ್ಟಿ ಅವರನ್ನು ಅಭಿಮಾನಿಗಳು ಗುರುತಿಸಿದ್ದು ಅವರು ಸಾರ್ವಜನಿಕವಾಗಿ ಕಂಡು ಬರುತ್ತಿದ್ದಂತೆ ಬಹುತೇಕರು ಸೆಲ್ಫಿ ತೆಗೆಸಿಕೊಂಡಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ರಿಷಬ್ ಶೆಟ್ಟಿ ಕೋಪಗೊಳ್ಳದೇ ನಗು ನಗುತ್ತಲೆ ಎಲ್ಲರನ್ನು ಮಾತನಾಡಿಸಿದ್ದಾರೆ.
ಕಾಂತಾರ ಚಾಪ್ಟರ್ 1 ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಯಶಸ್ವಿಯಾಗಿದ್ದು ಬಾಕ್ಸ್ ಆಫೀಸ್ ದಾಖಲೆ ಮುಂದುವರಿಯುತ್ತಲೇ ಇದೆ. ರಿಲೀಸ್ ಆಗಿ ಏಳು ದಿನ ಗಳಲ್ಲಿಯೇ ಹಿಂದಿ ಆವೃತ್ತಿಯಲ್ಲಿ ಸುಮಾರು 102 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ, ಕನ್ನಡ ಆವೃತ್ತಿಯಲ್ಲಿ 98.85 ಕೋಟಿ ರೂಪಾಯಿ, ತೆಲುಗು ಡಬ್ಬಿಂಗ್ ಆವೃತ್ತಿಯಲ್ಲಿ 60.9 ಕೋಟಿ ರೂ. ಗಳಿಸಿದೆ. ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಕ್ರಮವಾಗಿ 29.4 ಕೋಟಿ ಮತ್ತು 24.85 ಕೋಟಿ ಸಂಗ್ರಹಿಸಿವೆ. ಈ ಮೂಲಕ ವಾರಾಂತ್ಯ ದಲ್ಲಿ ಭರ್ಜರಿ ಕಲೆಕ್ಷನ್ ಆಗಲಿದ್ದು, 1000 ಕೋಟಿ ಒಟ್ಟು ಕಲೆಕ್ಷನ್ ಆಗುವ ಸಾಧ್ಯತೆ ಇದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಮುಂಚೆ ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದರು. ಮುಂಬೈ ಅಲ್ಲಿ ಕಾರ್ ಡ್ರೈವರ್ ಆಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಸಿನಿಮಾದಲ್ಲಿ ಸಣ್ಣ ಪಾತ್ರ ನಟಿಸಲು ಅವಕಾಶ ಸಿಕ್ಕಿತ್ತು. ಅದಾದ ಬಳಿಕ ನಿರ್ದೇಶನ, ನಟನೆ, ಹೀರೋ ಹೀಗೆ ಹಂತ ಹಂತವಾಗಿ ಕಷ್ಟಗಳನ್ನು ಎದುರಿಸಿ ಯಶಸ್ವಿ ನಟರಾಗಿ ಕೂಡ ಸಾಧನೆ ಮಾಡಿದ್ದಾರೆ.