ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮದ್ಯಪಾನ ಮಾಡಿ ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್; ಯಾವ್ಯಾವ ಸೆಕ್ಷನ್‌ಗಳಡಿ FIR ದಾಖಲು?

ಸ್ಯಾಂಡಲ್‌ವುಡ್‌ ನಟ ಮಯೂರ್‌ ಪಟೇಲ್‌ ಅವರು ಬುಧವಾರ (ಜ.28) ರಾತ್ರಿ 10 ಗಂಟೆ ಸುಮಾರಿಗೆ ಮದ್ಯದ ಅಮಲಿನಲ್ಲಿ ಫಾರ್ಚೂನರ್ ಕಾರು ಚಲಾಯಿಸಿ ನಾಲ್ಕು ವಾಹನಗಳಿಗೆ ಸರಣಿ ಅಪಘಾತ ಎಸಗಿದ್ದಾರೆ. ಬೆಂಗಳೂರಿನ ದೊಮ್ಮಲೂರಿನ ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ನಟ ಮಯೂರ್ ಪಟೇಲ್ ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಸ್ಯಾಂಡಲ್‌ವುಡ್‌ ನಟ ಮಯೂರ್‌ ಪಟೇಲ್‌ ಮೇಲೆ ಕೇಸ್‌ ದಾಖಲಾಗಿದೆ. ಮದ್ಯಪಾನ ಮಾಡಿ, ಸರಣಿ ಅಪಘಾತ ಎಸಗಿದ ಆರೋಪ ಅವರ ಮೇಲಿದೆ. ಬುಧವಾರ (ಜ.28) ರಾತ್ರಿ 10 ಗಂಟೆ ಸುಮಾರಿಗೆ ಮಯೂರ್‌ ಪಟೇಲ್‌ ಚಲಾಯಿಸುತ್ತಿದ್ದ ಫಾರ್ಚೂನರ್‌ ಕಾರು ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಸರಣಿ ಅಪಘಾತ ಎಸಗಿದೆ. ಒಟ್ಟು ನಾಲ್ಕು ಕಾರುಗಳು ಜಖಂಗೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಕಣ್ಣೀರಿಟ್ಟ ಕ್ಯಾಬ್‌ ಚಾಲಕ

ಅಪಘಾತಕ್ಕೀಡಾದ ಕಾರುಗಳಲ್ಲಿ ಕ್ಯಾಬ್‌ ಕೂಡ ಇದ್ದು, ಅದರ ಚಾಲಕ ಶ್ರೀನಿವಾಸ್‌ ಪ್ರತಿಕ್ರಿಯೆ ನೀಡಿದ್ದಾರೆ. "ಸಿಗ್ನಲ್​ನಲ್ಲಿ ನಿಂತಿದ್ದ ನಮ್ಮ ಕಾರಿಗೆ ನಟ ಮಯೂರ್ ಪಟೇಲ್​ ಅವರ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮಯೂರ್ ಪಟೇಲ್​ ಅವರೇ ಕಾರು ಡ್ರೈವ್ ಮಾಡ್ತಿದ್ದರು. ಮೊದಲು ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ಒಟ್ಟು 4 ಕಾರುಗಳಿಗೆ ಹಾನಿಯಾಗಿದೆ. ಅವರೇ ನಮ್ಮ ಬಳಿ ಬಂದು ಬೆಳಗ್ಗೆ ಸರಿ ಮಾಡಿ ಕೊಡ್ತೀನಿ ಎಂದರು. ಆದರೆ ನಮಗೆ ಈಗಲೇ ಸೆಟಲ್​ಮೆಂಟ್​ ಮಾಡಿ ಎಂದು ನಾವೆಲ್ಲಾ ಕೇಳಿದೆವು. ಕೊನೆಗೆ ಅವರು ಅವರು ನಾನು ‌ಸಿನಿಮಾ ನಟ ಮಯೂರ್ ಪಟೇಲ್ ಎಂದರು" ಅಂತ ಶ್ರೀನಿವಾಸ್‌ ಕಣ್ಣೀರಿಡುತ್ತಾ ಹೇಳಿದ್ದಾರೆ.

ಪತ್ನಿಯ ಒಡವೆ ಅಡವಿಟ್ಟು ಕಾರು ಖರೀದಿ

"ನಂತರ ಸ್ಥಳಕ್ಕೆ ಪೊಲೀಸರು ಬಂದು ಎಲ್ಲರನ್ನೂ ಠಾಣೆಗೆ ಕರೆದೊಯ್ದದರು. ನಾನು ಕಾರು ಖರೀದಿಸಿ ಕೇವಲ 15 ದಿನಗಳಾಗಿವೆ. ಈ ಅಪಘಾತದ ವೇಳೆ ಕ್ಯಾಬ್‌ನಲ್ಲಿ ಪ್ಯಾಸೆಂಜರ್ ಕೂಡ ಇದ್ದರು. ನನ್ನ ಹೆಂಡತಿಯ ಒಡವೆಯನ್ನು ಅಡವಿಟ್ಟು ಕಾರು ತೆಗೆದುಕೊಂಡಿದ್ದೆ. ಈಗ ಕಾರು ಜಖಂ ಆಗಿದೆ" ಎಂದು ಚಾಲಕ ಶ್ರೀನಿವಾಸ್ ಕಣ್ಣೀರಿಟ್ಟಿದ್ದಾರೆ.

CPI PV Salimath: ಕಾರು ಅಪಘಾತದಲ್ಲಿ ಸಜೀವ ದಹನಗೊಂಡ ಸಿಪಿಐ ಸಾಲಿಮಠ: ಕಾರು ಅಪಘಾತ ಸಂಭವಿಸಿದ್ದು ಹೇಗೆ?

ಮಯೂರ್ ಪಟೇಲ್‌ ಹೇಳಿದ್ದೇನು?

"ನನ್ನ ಕಾರಿನ ಬ್ರೇಕ್ ಫೇಲ್ಯೂರ್ ಆಗಿತ್ತು. ನಾನು ಟ್ರಿನಿಟಿ ಸರ್ಕಲ್ ಕಡೆಯಿಂದ ದೊಮ್ಮಲೂರಿನಲ್ಲಿರುವ ಮನೆ ಕಡೆಗೆ ಹೋಗುತ್ತಿದ್ದೆ. ನಾನು ಬ್ರೇಕ್ ಒತ್ತಿದರು ಕಾರು ನಿಲ್ಲಲ್ಲಿಲ್ಲ. ನನ್ನ ಕಾರು ಮತ್ತು ಎದುರಿಗೆ ಇದ್ದ ಕಾರಿಗೆ ಡ್ಯಾಮೆಜ್ ಆಗಿದೆ.

ನನ್ನ ಕಾರಿನ ಮುಂದೆ ಮತ್ತೊಂದು ಕಾರು ಇದ್ದಿದ್ದರಿಂದ ಒಳ್ಳೆದಾಯ್ತು. ಹ್ಯಾಂಡ್ ಬ್ರೇಕ್ ಎಲ್ಲಾ ಹಾಕಿ ಟ್ರೈ ಮಾಡಿದ್ದೆ. ಆದರೂ ನಿಂತಿರಲಿಲ್ಲ. ನನ್ನ ಕಾರಿಗೆ ಇನ್ಶುರೆನ್ಸ್ ಇದೆ" ಎಂದು ಮಯೂರ್‌ ಹೇಳಿದ್ದಾರೆ.

BY Raghavendra: ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಕಾರು ಅಪಘಾತ; ಅಪಾಯದಿಂದ ಪಾರು

ದೊಮ್ಮಲೂರಿನ ಕಮಾಂಡೋ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಮಯೂರ್ ಪಟೇಲ್‌ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್​ ಎಂಬುವರ ಕಾರುಗಳು, ಜೊತೆಗೆ ಒಂದು ಸರ್ಕಾರಿ ವಾಹನ ಜಖಂಗೊಂಡಿದೆ ಎನ್ನಲಾಗಿದೆ. ಪೊಲೀಸರು

ಮಯೂರ್​ ಪಟೇಲ್​ರನ್ನ ಠಾಣೆಗೆ ಕರೆದೊಯ್ದು ತಪಾಸಣೆ ಮಾಡಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಸಾಬೀತಾಗಿದೆ. ಕ್ಯಾಬ್‌ ಚಾಲಕ ಶ್ರೀನಿವಾಸ್​ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲು ಮಾಡಲಾಗಿದೆ. ಮಯೂರ್ ಪಟೇಲ್ ಅವರ ಕಾರನ್ನು ಸೀಜ್ ಮಾಡಲಾಗಿದ್ದು, ಕಾರಿಗೆ ಇನ್ಸೂರೆನ್ಸ್ ಇಲ್ಲದಿರುವುದು ಪತ್ತೆ ಆಗಿದೆ.

ಯಾವ್ಯಾವ ಸೆಕ್ಷನ್‌ಗಳಡಿ FIR ದಾಖಲು?

ಬಿಎನ್‌ಎಸ್‌ 285: ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಇತರರ ಜೀವಕ್ಕೆ ಅಪಾಯ ತಂದೊಡ್ಡುವುದು.

ಐಎಂವಿ 185: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು