ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಜನಪ್ರಿಯ ಸೆಲೆಬ್ರಿಟಿ ಪಟ್ಟಿಯಲ್ಲಿ ರಿಷಬ್‌ ಶೆಟ್ಟಿಗೆ ಮೊದಲ ಸ್ಥಾನ-ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ?

Rishab Shetty: ಕಾಂತರ ಚಾಪ್ಟರ್-1 ಸಿನಿಮಾ ಭರ್ಜರಿ ಸಕ್ಸಸ್ ಕಾಣುತ್ತಿದೆ..ಅಂತೆಯೇ ನಟ ರಿಷಬ್‌ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಸದ್ಯ ಅನೇಕ ಸ್ಟಾರ್ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಇವರಿಬ್ಬರು ಭಾರತದ ಜನಪ್ರಿಯ ಸೆಲೆಬ್ರಿಟಿ ಪಟ್ಟಿಯಲ್ಲಿ ಸೇರಿದ್ದಾರೆ.

ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲಿ ನಟ , ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಅವರು ತಮ್ಮ ಬಹುಸಂಖ್ಯಾತ ಪ್ರೇಕ್ಷಕ ವರ್ಗವನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಇವರ ಅಭಿನಯದ ಕಾಂತಾರ ಸಿನಿಮಾ 2022ರಲ್ಲಿ ರಿಲೀಸ್ ಆಗಿದ್ದು ಪ್ರೇಕ್ಷಕರ ಮನ ಗೆದ್ದಿತ್ತು. ಬಳಿಕ ಅಭಿಮಾನಿಗಳ ಒತ್ತಾಸೆಯಂತೆ ಮೂರು ವರ್ಷದ ಅನಂತರ ಕಾಂತಾರ ಚಾಪ್ಟರ್ 1 (Kantara: Chapter 1) ಸಿನಿಮಾ ರಿಲೀಸ್ ಆಗಿದೆ. ಜನರ ನಿರೀಕ್ಷೆಯಂತೆ ಸಿನಿಮಾದಲ್ಲಿ ಅನೇಕ ಸಂಗತಿಗಳು ಅದ್ಭುತವಾಗಿ ಮೂಡಿ ಬಂದಿದ್ದು ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಹೊಸ ದಾಖಲೆ ಮಾಡುತ್ತಿದೆ‌. ಈ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದವರನ್ನು ಕೂಡ ಜನರು ಗುರುತಿಸಿ ಮೆಚ್ಚಿಕೊಂಡಿದ್ದಾರೆ. ಅಂತೆಯೇ ನಟ ರಿಷಬ್‌ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ (Rukmini Vasanth) ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಸದ್ಯ ಅನೇಕ ಸ್ಟಾರ್ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಇವರಿಬ್ಬರು ಭಾರತದ ಜನಪ್ರಿಯ ಸೆಲೆಬ್ರಿಟಿ ಪಟ್ಟಿಯಲ್ಲಿ ಸೇರಿದ್ದಾರೆ.

ಪ್ಯಾನ್ ಇಂಡಿಯಾ ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ, ಬಾಲಿವುಡ್‌ ಸೂಪರ್‌ಸ್ಟಾರ್ ನಟ ಹೃತಿಕ್ ರೋಷನ್, ಟಾಲಿವುಡ್‌ನ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಸೇರಿದಂತೆ ಹಲವಾರು ಸ್ಟಾರ್ ಸೆಲೆಬ್ರಿಟಿಗಳ ದಾಖಲೆಯನ್ನು ಹಿಂದಿಕ್ಕಿ ಈ ಜೋಡಿ ಪ್ರತಿಷ್ಠಿತ ಐಎಂಡಿಬಿ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಐಎಂಡಿಬಿಯಲ್ಲಿ ಜನರು ಅತೀ ಹೆಚ್ಚು ಹುಡುಕಾಡಿದ ಸೆಲೆಬ್ರಿಟಿಗಳನ್ನು ಪಾಪ್ಯೂಲರ್ ನಟ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ಅನೇಕ ಸೆಲೆಬ್ರಿಟಿಗಳಿದ್ದು ಭಾರತದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟ ರಿಷಬ್‌ ಶೆಟ್ಟಿ ಕೂಡಾ ಇದ್ದಾರೆ. 'ಕಾಂತಾರ ಚಾಪ್ಟರ್ 1' ಸಿನಿಮಾ ರಿಲೀಸ್ ಆಗುವ ಮೊದಲಿನಿಂದಲೇ ರಿಷಬ್‌ ಶೆಟ್ಟಿಯ ಬಗ್ಗೆ ಐಎಂಡಿಬಿ ಜಾಲತಾಣದಲ್ಲಿ ಹುಡುಕಾಟ ನಡೆಸುವ ಪ್ರಮಾಣ ಹೆಚ್ಚಾಗಿದೆ. ಕಳೆದೆರಡು ವಾರಗಳಲ್ಲಿ ಐಎಂಡಿಬಿಗೆ ಸರ್ಚಿಂಗ್ ಸಂಖ್ಯೆಗಳನ್ನು ಆಧಾರ ವಾಗಿಟ್ಟುಕೊಂಡು ರಿಷಬ್ ಶೆಟ್ಟಿ ಅವರನ್ನು ದೇಶದ ನಂ 1 ಭಾರತದ ಜನಪ್ರಿಯ ತಾರೆ ಎಂದು ಘೋಷಿಸಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

ಕಾಂತಾರ ಚಾಪ್ಟರ್ 1 ರಿಲೀಸ್ ಆದ ಬಳಿಕ ನಟಿ ರುಕ್ಮಿಣಿ ವಸಂತ್ ಅವರ ಬೇಡಿಕೆ ಕೂಡ ಹೆಚ್ಚಾಗಿದೆ. ಸಪ್ತ ಸಾಗರದಾಚೆ ಎಲ್ಲೊ ಹಾಗೂ ಪರಭಾಷೆಯಲ್ಲಿಯೂ ಕೂಡ ನಟಿಸಿದ್ದರು ಆದರೆ ಆ ಸಿನಿಮಾ ಅವರಿಗೆ ಅಷ್ಟು ಖ್ಯಾತಿ ಕೊಟ್ಟಿರಲಿಲ್ಲ. ಯಾವಾಗ ಇವರು ಕಾಂತಾರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿಯಿತೋ ಆಗ ಜನರು ಅವರ ಬಗ್ಗೆ ಐಎಂಡಿಬಿಯಲ್ಲಿ ಅನೇಕ ವಿಚಾರವನ್ನು ಸರ್ಚ್ ಮಾಡಿದ್ದಾರೆ. ಹೀಗಾಗಿ ನಟಿ ರುಕ್ಮಿಣಿ ವಸಂತ್ ಅವರು ಭಾರತದ ಎರಡನೇ ಜನಪ್ರಿಯ ಸೆಲೆಬ್ರಿಟಿ ಎಂದು ಖ್ಯಾತಿ ಪಡೆದಿದ್ದಾರೆ.

ಇದನ್ನು ಓದಿ:Coolie Movie: ಕಿರುತೆರೆಗೆ ಎಂಟ್ರಿ ಕೊಟ್ಟ ʼಕೂಲಿʼ; ಎಲ್ಲಿ ಯಾವಾಗ ನೋಡಬಹುದು ರಜನಿಕಾಂತ್ ಚಿತ್ರ?

ಈ ಪಟ್ಟಿಯಲ್ಲಿ ಟಾಪ್ ಸೆಲೆಬ್ರಿಟಿಗಳಿದ್ದು ಅವರೆಲ್ಲರನ್ನು ಕನ್ನಡದ ಇಬ್ಬರು ತಾರೆಯರು ಕೂಡ ಹಿಂದಿಕ್ಕಿದ್ದಾರೆ. ಐಎಂಡಿಬಿಯ ಪಾಪ್ಯುಲರ್ ಸೆಲೆಬ್ರಿಟಿ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಮೋನಾ ಸಿಂಗ್, 11ನೇ ಸ್ಥಾನದಲ್ಲಿ ಹೃತಿಕ್ ರೋಷನ್, 15ನೇ ಸ್ಥಾನದಲ್ಲಿ ಶ್ರದ್ಧಾ ದಾಸ್, 23ನೇ ಸ್ಥಾನದಲ್ಲಿ ಜಾಹ್ನವಿ ಕಪೂರ್, 24ನೇ ಸ್ಥಾನದಲ್ಲಿ ಕಿಯಾರಾ ಅಡ್ವಾಣಿ, 25ನೇ ಸ್ಥಾನದಲ್ಲಿ ರಕ್ಷಿತ್ ಶೆಟ್ಟಿ, 31ನೇ ಸ್ಥಾನದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ 32ನೇ ಸ್ಥಾನದಲ್ಲಿ ಎಸ್‌.ಎಸ್‌. ರಾಜಮೌಳಿ ಇದ್ದಾರೆ. ಈ ಮೂಲಕ ಇವರೆಲ್ಲರ ಸ್ಟಾರ್ ಗಿರಿಯನ್ನು ನಟ ರಿಷಭ್ ಹಾಗೂ ನಟಿ ರುಕ್ಮಿಣಿ ಅವರು ಹಿಂದಿಕ್ಕಿ ಪಾಪ್ಯುಲರ್ ಆಗಿದ್ದಾರೆ