ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robo Shankar: ತಮಿಳಿನ ಖ್ಯಾತ ಹಾಸ್ಯನಟ ಇನ್ನಿಲ್ಲ! ಮಗಳನ್ನೇ ಚುಂಬಿಸಿ ವಿವಾದಕ್ಕೀಡಾಗಿದ್ದ ರೋಬೋ ಶಂಕರ್

Actor Robo Shankar: ನಟ ರೋಬೋ ಶಂಕರ್ ಅವರು ಈ ಹಿಂದೆ ತಮ್ಮ ಮಗಳ ಮದುವೆಯ ನಿಶ್ಚಿತಾರ್ಥ ಸಂದರ್ಭದಲ್ಲಿ ಕೆಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದರು. ತಮ್ಮ ಮಗಳು ಇಂದ್ರಜಾ ನಿಶ್ಚಿತಾರ್ಥಕ್ಕೆ ತಮಿಳು, ತಮಿಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಕೂಡ ಮಾಡಿದ್ದರು. ನಿಶ್ಚಿತಾರ್ಥದ ವೇಳೆ ತಮ್ಮ ಮಗಳು ಇಂದ್ರಜಾ ಅವರ ತುಟಿಗಳಿಗೆ ಕೂಡ ಚುಂಬಿಸಿದ್ದರು. ಆಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು‌.

ತಮಿಳಿನ ಖ್ಯಾತ ಹಾಸ್ಯನಟ ರೋಬೋ ಶಂಕರ್ ಇನ್ನಿಲ್ಲ

ರೋಬೋ ಶಂಕರ್ -

Profile Pushpa Kumari Sep 19, 2025 5:34 PM

ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲಿ ಸ್ಟ್ಯಾಂಡಪ್ ಕಾಮಿಡಿ ಹಾಗೂ ಹಾಸ್ಯ ನಟನೆಯಿಂದ ಖ್ಯಾತರಾದ ರೋಬೋ ಶಂಕರ್ (Robo Shankar) ಅವರು ತಮ್ಮ ವಿಭಿನ್ನ ಅಭಿನಯದಿಂದಲೇ ಮನೆ ಮಾತಾಗಿದ್ದಾರೆ. ಧರ್ಮ ಚಕ್ರಂ, ಪಡೆಯಪ್ಪ, ಜೂಟ್ , ಆಯಿ, ದೀಪಾವಳಿ, ರೌತಿ ರಾಮ್, ಕಪ್ಪಲ್, ಮಾರಿ, ಸ್ಟ್ರಾಬೆರಿ, ಮಾಯಾ, ಸಾಗಸಂ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಅವರು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಿಗೆ ಹೆಸರು ಮಾಡಿದ್ದಾರೆ. ಇವರು ಹಾಸ್ಯ ನಟನೆಯಲ್ಲಿ ಖ್ಯಾತರಾದ ಕಾರಣ ಸಹಜವಾಗಿಯೇ ಅಪಾರ ಅಭಿಮಾನಿಗಳು ಅವರ ಅಭಿನಯಕ್ಕೆ ಮನಸೋತಿದ್ದಾರೆ. ಬಹುತೇಕ ಸೆಲೆಬ್ರಿಟಿಗಳ ಅಚ್ಚು ಮೆಚ್ಚಿನ ನಟ ಇವರಾಗಿದ್ದಾರೆ. ನಟ ರೋಬೋ ಶಂಕರ್ ಅವರು ಅನಾರೋಗ್ಯದಿಂದ ನಿಧನರಾಗಿ ಇಹಲೋಕ ತ್ಯಜಿಸಿದ್ದು ಅವರ ಅಭಿಮಾನಿಗಳಿಗೆ ಹಾಗೂ ಚಿತ್ರರಂಗದವರಿಗೆ ಆಘಾತವೇ ಆಗಿದೆ.

ಅವರ ಅಗಲುವಿಕೆಯಿಂದಾಗಿ ಅವರ ಕಲಾಸೇವೆ, ಸಹ ನಟರೊಂದಿಗೆ ರೋಬೋ ಶಂಕರ್ ಇರುವ ರೀತಿ ಎಲ್ಲವೂ ನೆನೆದು ಅನೇಕ ಗಣ್ಯರು ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಹಲವರು ಕಣ್ಣೀರಿಟ್ಟಿದ್ದಾರೆ. ಈ ನಡುವೆ ಅವರ ಹಳೆ ವಿವಾದವು ಕೂಡ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ನಟ ರೋಬೋ ಶಂಕರ್ ಅವರು ಈ ಹಿಂದೆ ತಮ್ಮ ಮಗಳ ಮದುವೆಯ ನಿಶ್ಚಿತಾರ್ಥ ಸಂದರ್ಭದಲ್ಲಿ ಕೆಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದರು. ತಮ್ಮ ಮಗಳು ಇಂದ್ರಜಾ ನಿಶ್ಚಿತಾರ್ಥಕ್ಕೆ ತಮಿಳು, ತಮಿಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಕೂಡ ಮಾಡಿದ್ದರು. ನಿಶ್ಚಿತಾರ್ಥದ ವೇಳೆ ತಮ್ಮ ಮಗಳು ಇಂದ್ರಜಾ ಅವರ ತುಟಿಗಳಿಗೆ ಕೂಡ ಚುಂಬಿಸಿದ್ದರು. ಆಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು‌. ನಟನ ನಡೆಯ ಬಗ್ಗೆ ನೆಟ್ಟಿಗರು ಕೂಡ ಕಿಡಿಕಾರಿದ್ದರು.

ಅಪ್ಪ ಮಗಳು ಪರಸ್ಪರ ಚುಂಬಿಸಿಕೊಳ್ಳುವ ವಿಡಿಯೋ ಹಾಗೂ ಫೋಟೊ ಸೋಶಿಯಲ್ ಮಿಡಿ ಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಟೀಕೆಗಳು ಕೂಡ ವ್ಯಕ್ತವಾಗಲ್ಪಟ್ಟಿತ್ತು. ಆದರೆ ಆಗ ನಟ ರೋಬೋ ಶಂಕರ್ ಅವರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಎಲ್ಲವನ್ನು ಕೂಲ್ ಆಗಿ ಹ್ಯಾಂಡಲ್ ಮಾಡಿದ್ದರು. ನಟ ರೋಬೋ ಶಂಕರ್ ಈ ಬಗ್ಗೆ ಮೌನ ವಹಿಸಿದ್ದರೂ ಅವರ ಮಗಳು ಇಂದ್ರಜಾ ಮಾತ್ರ ತಂದೆಯನ್ನು ಬಿಟ್ಟು ಕೊಡದೆ ಟೀಕೆ ಮಾಡಿದ್ದವರ ವಿರುದ್ಧ ಕಿಡಿಕಾರಿದ್ದಾರೆ.

ನಟ ರೋಬೋ ಶಂಕರ್ ಅವರ ಪುತ್ರಿ ಇಂದ್ರಜಾ ಅವರು ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ತನ್ನ ತಂದೆ ವಿರುದ್ಧ ಹರಡಿದ್ದ ಸುಳ್ಳು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಅವರು, ಇಂದು ನನ್ನ ತಂದೆ ಎಷ್ಟೇ ದೊಡ್ಡ ನಟರಾಗಿದ್ದರು ನನ್ನ ಪಾಲಿಗೆ ಅವರು ದೇವರೆ ಆಗಿದ್ದಾರೆ. ನಾನು ಚಿಕ್ಕಂದಿನಿಂದಲೂ ನನ್ನ ತಂದೆಗೆ ಹೀಗೆ ಮುತ್ತುಕೊಡುತ್ತಿದ್ದೆ‌ ಅವರು ನನ್ನ ತಂದೆ, ಅವರನ್ನು ಹೀಗೆ ಚುಂಬಿಸುವುದರಲ್ಲಿ ತಪ್ಪೇನು ಇಲ್ಲ. ನಮ್ಮಿಬ್ಬರ ಸಂಬಂಧ ಎಷ್ಟು ಪವಿತ್ರವಾಗಿದ್ದು ಎಂಬ ಬಗ್ಗೆ ನಮಗೆ ಗೊತ್ತಿದೆ ಎಂದು ಹೇಳುವ ಮೂಲಕ ಟೀಕೆ ಮಾಡಿ ವದಂತಿ ಹಬ್ಬಿಸಿದ್ದವರ ವಿರುದ್ಧ ಕಿಡಿಕಾರಿದ್ದಾರೆ. ಅವರ ಈ ಹೇಳಿಕೆಯ ಬಳಿಕ ಟೀಕೆ ಮಾಡುವವರು ಸೈಲೆಂಟ್ ಆಗಿದ್ದರು. ಇನ್ನು ಕೆಲವು ನೆಟ್ಟಿಗರು ಇವರನ್ನು ಬೆಂಬಲಿಸಿ ಪೋಸ್ಟ್ ಕೂಡಹಾಕಿದ್ದರು.

ಇದನ್ನೂ ಓದಿ:Vrusshabha Movie: ರಾಜನಾಗಿ ಖಡಕ್ ಎಂಟ್ರಿ ಕೊಟ್ಟ ಮೋಹನ್ ಲಾಲ್: ವೃಷಭ ಚಿತ್ರದ ಟೀಸರ್ ರಿಲೀಸ್

ಇಂದ್ರಜಾ ಅವರ ಮದುವೆ ಬಳಿಕ ನಡೆದ ಆರತಕ್ಷತೆಯಲ್ಲಿ ಅವರ ಪತಿ ಕಾರ್ತಿಕ್ ಅವರು ತಮ್ಮ ಅತ್ತೆ ಅಂದರೆ ರೋಬೋ ಶಂಕರ್ ಪತ್ನಿ ಪ್ರಿಯಾಂಕಾ ಅವರಿಗೆ ಮುತ್ತಿಟ್ಟಿದ್ದರು. ಈ ವಿಡಿಯೋ ಕೂಡ ವೈರಲ್ ಆಗುತ್ತಿದ್ದಂತೆ ಮತ್ತೆ ನೆಟ್ಟಿಗರು ಕಿಡಿಕಾರಿದ್ದರು. ಬಳಿಕ ಅವರನ್ನು ಮಗನಂತೆ ಕಂಡಿರುವುದಾಗಿ ಪ್ರಿಯಾಂಕ ಸ್ಪಷ್ಟನೆ ಕೂಡ ನೀಡಿದ್ದರು.‌ ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ನಟ ರೋಬೋ ಶಂಕರ್ ಅವರು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ರೋಬೋ ಶಂಕರ್‌ಗೆ ಅವರ ಅಗಲುವಿಕೆ ಅವರ ಆಪ್ತರಿಗೆ ಮತ್ತು ಕುಟುಂಬದವರಿಗೆ ದೊಡ್ಡ ಆಘಾತವೇ ತಂದಂತಾಗಿದೆ.