ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs OMN: ಒಮಾನ್‌ ವಿರುದ್ದದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯಲಿರುವ ಭಾರತ!

2025ರ ಏಷ್ಯಾ ಕಪ್‌ ಟೂರ್ನಿಯ 12 ನೇ ಪಂದ್ಯದಲ್ಲಿ ಭಾರತ ತಂಡ, ಒಮಾನ್ ವಿರುದ್ಧ ಮೈದಾನಕ್ಕಿಳಿಯುತ್ತಿದ್ದಂತೆ ಮಹತ್ವದ ದಾಖಲೆಯನ್ನು ಬರೆಯಲಿದೆ. ಇದು ಟಿ20ಐ ಇತಿಹಾಸದಲ್ಲಿಯೇ ಟೀಮ್ ಇಂಡಿಯಾದ 250ನೇ ಪಂದ್ಯವಾಗಲಿದೆ. ಆ ಮೂಲಕ ಈ ಸಾಧನೆ ಮಾಡಿದ ಎರಡನೇ ತಂಡ ಎಂಬ ದಾಖಲೆಯನ್ನು ಬರೆಯಲಿದೆ.

ಒಮಾನ್‌ ವಿರುದ್ದ ವಿಶೇಷ ದಾಖಲೆ ಬರೆಯಲಿರುವ ಭಾರತ!

ವಿಶೇಷ ದಾಖಲೆಯ ಸನಿಹದಲ್ಲಿ ಭಾರತ ತಂಡ. -

Profile Ramesh Kote Sep 19, 2025 6:41 PM

ನವದೆಹಲಿ: ಪ್ರಸ್ತುತ 2025ರ ಏಷ್ಯಾಕಪ್‌ ( Asia Cup 2025) ಟೂರ್ನಿಯ 12ನೇ ಪಂದ್ಯ ಭಾರತ ಮತ್ತು ಒಮಾನ್ (IND vs OMN) ನಡುವೆ ಸೆಪ್ಟಂಬರ್‌ 19 ರಂದು ನಡೆಯಲಿದೆ. ಒಮಾನ್ ವಿರುದ್ಧ ಮೈದಾನಕ್ಕಿಳಿದ ಕೂಡಲೇ ಟೀಮ್ ಇಂಡಿಯಾ ಮಹತ್ವದ ದಾಖಲೆಯನ ಬರೆಯಲಿದೆ. ಭಾರತ ತಂಡ (India), ತನ್ನ 250ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದೆ. ಟಿ20ಐ ಇತಿಹಾಸದಲ್ಲಿ ಪಾಕಿಸ್ತಾನ ತಂಡ ಮಾತ್ರ ಈ ಮೈಲುಗಲ್ಲನ್ನು ತಲುಪಿದೆ. ಭಾರತ ತಂಡ ಇದುವರೆಗೆ 249 ಟಿ20ಐ ಪಂದ್ಯಗಳನ್ನು ಆಡಿದ್ದು, 166 ಗೆದ್ದು 71 ಸೋತಿದೆ. ಈ ಅವಧಿಯಲ್ಲಿ ಆರು ಪಂದ್ಯಗಳು ಟೈ ಆಗಿದ್ದವು ಮತ್ತು ಅಷ್ಟೇ ಸಂಖ್ಯೆಯ ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯವಾಗಿದೆ.

ಇದರ ನಡುವೆ ಪಾಕಿಸ್ತಾನ 2006ರಿಂದ ಒಟ್ಟು 275 ಟಿ20 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಪಾಕಿಸ್ತಾನ 157 ಪಂದ್ಯಗಳನ್ನು ಗೆದ್ದು 107 ಪಂದ್ಯಗಳಲ್ಲಿ ಸೋತಿದೆ. ತನ್ನ ನಾಲ್ಕು ಪಂದ್ಯಗಳು ಟೈ ಆಗಿದ್ದರೆ, ಏಳು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ನ್ಯೂಜಿಲೆಂಡ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ, ಇದುವರೆಗೆ 235 ಟಿ20ೈ ಪಂದ್ಯಗಳನ್ನು ಆಡಿದೆ, ವೆಸ್ಟ್ ಇಂಡೀಸ್ 228 ಪಂದ್ಯಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಶ್ರೀಲಂಕಾ 212 ಪಂದ್ಯಗಳೊಂದಿಗೆ ಐದನೇ ಸ್ಥಾನದಲ್ಲಿದೆ.

Asia Cup Super 4s Schedule: ಸೂಪರ್‌-4 ಪಂದ್ಯಗಳ ವೇಳಾಪಟ್ಟಿ ಪ್ರಕಟ

ಭಾರತ ಮತ್ತು ಒಮಾನ್ ತಂಡಗಳು ಮೊದಲ ಬಾರಿ ಮುಖಾಮುಖಿಯಾಗಲಿವೆ. ಶುಕ್ರವಾರ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಭಾರತ ತಂಡವು ದುರ್ಬಲ ಒಮಾನ್ ತಂಡವನ್ನು ಎದುರಿಸಲಿದೆ. ಟಿ20ಐ ಇತಿಹಾಸದಲ್ಲಿ ಎರಡೂ ತಂಡಗಳು ಎಂದಿಗೂ ಮುಖಾಮುಖಿಯಾಗಿಲ್ಲದಿದ್ದರೂ, ಅಂಕಿಅಂಶಗಳು ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ ಎಂದು ಸೂಚಿಸುತ್ತವೆ. ಈ ಏಷ್ಯಾ ಕಪ್‌ ಟೂರ್ನಿಯಲ್ಲಿ ಅಭಿಮಾನಿಗಳು ಭಾರತ ತಂಡದ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2025ರ ಏಷ್ಯಾ ಕಪ್‌ ಟೂರ್ನಿಯ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತ, ಅದ್ಭುತ ಗೆಲುವುಗಳನ್ನು ದಾಖಲಿಸಿದೆ.

ಯುಎಇ ವಿರುದ್ಧದ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ 9 ವಿಕೆಟ್‌ಗಳಿಂದ ಗೆದ್ದರೆ, ನಂತರ ಪಾಕಿಸ್ತಾನ ವಿರುದ್ಧ ಎರಡನೇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಗ್ರೂಪ್ ಎ ಪಾಯಿಂಟ್ಸ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪ್ರಸ್ತುತ ಅಗ್ರಸ್ಥಾನದಲ್ಲಿದೆ. ಭಾರತದೊಂದಿಗೆ ಪಾಕಿಸ್ತಾನ ಕೂಡ ಈ ಗುಂಪಿನಿಂದ ಸೂಪರ್ ಫೋರ್‌ಗೆ ಅರ್ಹತೆ ಪಡೆದಿದೆ. ಆದ್ದರಿಂದ, ಸೆಪ್ಟೆಂಬರ್ 21 ರಂದು ಎರಡೂ ದೇಶಗಳ ನಡುವೆ ಹೈ-ವೋಲ್ಟೇಜ್ ಪಂದ್ಯವನ್ನು ನಿಗದಿಪಡಿಸಲಾಗಿದೆ.

Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್‌ ಟ್ರಾಟ್!

ಭಾರತ ತಂಡ: ಅಭಿಷೇಕ್‌ ಶರ್ಮಾ, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌ (ವಿ.ಕೀ), ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಜಿತೇಶ್‌ ಶರ್ಮಾ, ರಿಂಕು ಸಿಂಗ್‌, ಅರ್ಷದೀಪ್‌ ಸಿಂಗ್‌, ಹರ್ಷಿತ್‌ ರಾಣಾ