ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

ಫೋಟೊ, ಹೆಸರು, ಧ್ವನಿ ಇತ್ಯಾದಿಗಳನ್ನು ಅನುಮತಿ ಇಲ್ಲದೆ ಬೇರೆ ಬೇರೆ ಕಾರಣಕ್ಕಾಗಿ ಬಳಸಲಾ ಗುತ್ತಿದ್ದು ಅಂತವರ ವಿರುದ್ಧ ಶಿಸ್ತು ಬದ್ಧ ಕ್ರಮ ಕೈಗೊಳ್ಳುವಂತೆ ನಟ ಸಲ್ಮಾನ್ ಖಾನ್ ಅವರು ದೆಹಲಿಯ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಚಾರಕ್ಕಾಗಿ ತನ್ನ ಹೆಸರು ಬಳಸಿ ತಮ್ಮ ಉದ್ದೇಶ ಸಾಧಿಸಿಕೊಳ್ಳುವ ಕೆಲವು ವ್ಯಕ್ತಿಗಳನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಮತ್ತು ಇನ್ನು ಮುಂದೆ ಇಂತಹ ನಡೆ ಯಾರು ತೋರದಂತೆ ಕ್ರಮ ಜರಗಿಸಬೇಕೆಂದು ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ -

Profile
Pushpa Kumari Dec 11, 2025 6:12 PM

ನವದೆಹಲಿ, ಡಿ.10: ಬಾಲಿವುಡ್ ಮೋಸ್ಟ್ ಎಲಿಜಬೆತ್ ಬ್ಯಾಚುಲರ್ ಎಂದೇ ಖ್ಯಾತರಾದ ನಟ ಸಲ್ಮಾನ್ ಖಾನ್ (Salman Khan) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಯಲ್ಲಿರುತ್ತಾರೆ. ಕಿಕ್ , ದಬಾಂಗ್, ವಾಂಟೆಡ್, ಮುಜ್ ಸೆ ಶಾದಿ ಕರೋಗಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ‌. ಇವರ ಅಭಿನಯದ ಸಿಕಂದರ್ ಸಿನಿಮಾ ಅಂದು ಕೊಂಡ ಮಟ್ಟಕ್ಕೆ ಯಶಸ್ವಿಯಾಗಿರಲಿಲ್ಲ. ಹಾಗಿದ್ದರೂ ಬಾಲಿವುಡ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಅಂತೆಯೇ ಅವರ ಫೋಟೊ, ಹೆಸರು, ಧ್ವನಿ ಇತ್ಯಾದಿಗಳನ್ನು ಅನುಮತಿ ಇಲ್ಲದೆ ಬೇರೆ ಬೇರೆ ಕಾರಣಕ್ಕಾಗಿ ಬಳಸ ಲಾಗುತ್ತಿದ್ದು ಅಂತವರ ವಿರುದ್ಧ ಶಿಸ್ತು ಬದ್ಧ ಕ್ರಮ ಕೈಗೊಳ್ಳುವಂತೆ ನಟ ಸಲ್ಮಾನ್ ಖಾನ್ ಅವರು ದೆಹಲಿಯ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಚಾರಕ್ಕಾಗಿ ತನ್ನ ಹೆಸರು ಬಳಸಿ ತಮ್ಮ ಉದ್ದೇಶ ಸಾಧಿಸಿಕೊಳ್ಳುವ ಕೆಲವು ವ್ಯಕ್ತಿಗಳನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಮತ್ತು ಇನ್ನು ಮುಂದೆ ಇಂತಹ ನಡೆ ಯಾರು ತೋರದಂತೆ ಕ್ರಮ ಜರಗಿಸಬೇಕೆಂದು ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಕೆಲವು ವ್ಯಕ್ತಿಗಳು, ಸಂಘ -ಸಂಸ್ಥೆಗಳು ತಮ್ಮ ಹೆಸರು, ಭಾವಚಿತ್ರಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿದ್ದು ಕೃತಕ ಬುದ್ಧಿಮತ್ತೆಯಿಂದ ಅನೇಕ ಕಂಟೆಂಟ್‌ಗಳನ್ನು ಕೂಡ ಬಳಸಿದ್ದಾರೆ. ಇನ್ನು ಮುಂದೆ ತನ್ನ ಹೆಸರು, ಫೋಟೊ ಬಳಸದಂತೆ ನಿರ್ದೇಶನ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ದೆಹಲಿ ಹೈಕೋರ್ಟ್ ಗುರುವಾರದಂದು ಅವರ ಅರ್ಜಿಯ ವಿಚಾರಣೆ ನಡೆಸಿದೆ. ತಮ್ಮ ಐಡೆಂಟಿಟಿಯನ್ನು ಅನಧಿಕೃತವಾಗಿ ಬಳಸುವುದರ ವಿರುದ್ಧ ಸಂಪೂರ್ಣ ಕಾನೂ ನಾತ್ಮಕ ರಕ್ಷಣೆ ಒದಗಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಈ ತರನಾದ ಬಳಕೆ ಮಾಡುವ ಪ್ರಮಾಣ ಹೆಚ್ಚಾಗಿದೆ. ಹೀಗೆ ಫೋಟೊ ಧ್ವನಿ, ಹೆಸರನ್ನು ಬಳಸುವವರು ಬಳಿಕ ಅದನ್ನು ಎಐ ನಿಂದ ಎಡಿಟ್ ಮಾಡಿ ಮಾರ್ಪಾಡು ಮಾಡುತ್ತಿದ್ದಾರೆ. ಇದರಿಂದ ತಮ್ಮ ಹೆಸರಿಗೆ ಕಳಂಕ ಬರುವ ಸಾಧ್ಯತೆ ಇದೆ ಜೊತೆಗೆ ಸೈಬರ್ ಕ್ರೈಂ ವಂಚನೆ ಕೂಡ ಆಗಬಹುದು. ಇದು ಜನರನ್ನು ದಾರಿ ತಪ್ಪಿಸಬಹುದು, ಹೀಗಾಗಿ ತಮ್ಮ ಗುರುತಿನ ದುರುಪಯೋಗವನ್ನು ತಡೆಯಲು ಕ್ರಮವನ್ನು ಶೀಘ್ರವೇ ಕೈಗೊಳ್ಳುವಂತೆ ಅವರ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Salman Khan: ಫ್ಯಾಷನ್ ಶೋ ಇವೆಂಟ್‌ನಲ್ಲಿ ಯಂಗ್ ಲುಕ್‌ನಲ್ಲಿ ಮಿಂಚಿದ ನಟ ಸಲ್ಮಾನ್ ಖಾನ್!

ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ತಮ್ಮ ಫೋಟೋಗಳನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ಹಿಂದೆಯೇ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan), ಅವರ ಪತ್ನಿ ನಟಿ ಜಯಾ ಬಚ್ಚನ್ (Jaya Bachchan), ನಟ ಹೃತಿಕ್ ರೋಷನ್ , ನಟ ಅಜಯ್ ದೇವಗನ್ ನಟಿ ಐಶ್ವರ್ಯಾ ರೈ ಬಚ್ಚನ್, ಜಾಕಿ ಶ್ರಾಫ್, ಕರಣ್ ಜೋಹರ್, ನಟ ಅಭಿಷೇಕ್ ಬಚ್ಚನ್, ನಟ ನಾಗಾರ್ಜುನ, ಅನಿಲ್ ಕಪೂರ್, ಶ್ರೀ ರವಿ ಶಂಕರ್, ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ಅನೇಕರು ಕೋರ್ಟ್‌ ಮೆಟ್ಟಿಲೇರಿದ್ದರು.

ನಟ ಸಲ್ಮಾನ್ ಖಾನ್ ಅವರ ಅರ್ಜಿಯನ್ನು ಗುರುವಾರ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ವಿಚಾರಣೆ ನಡೆಸಿದ್ದು, ನಕಲಿ ಡಿಜಿಟಲ್ ವಿಷಯಗಳಂತಹ ಹೊಸ ಸಮಸ್ಯೆ ಗಳನ್ನು ನ್ಯಾಯಾಲಯವು ಪರಿಶೀಲಿಸಿದೆ. ಈ ಬಗ್ಗೆ ಏನೆಲ್ಲ ಉಲ್ಲೇಖಿಸಿದ್ದಾರೆ ಎಂದು ಇನ್ನಷ್ಟೆ ತಿಳಿದು ಬರಬೇಕಿದೆ. ಯಾವುದೇ ವ್ಯಕ್ತಿಯ ಗುರುತನ್ನು ಅಂದರೆ ಆತನ ಚಿತ್ರ, ಹೋಲಿಕೆ, ಧ್ವನಿ, ಸಹಿ, ಹೆಸರು ಇತರೆಗಳನ್ನು ಅನಧಿಕೃತವಾಗಿ ಅನುಮತಿ ಇಲ್ಲದೆ ವಾಣಿಜ್ಯ, ವ್ಯಾಪಾರ ಇತರೆ ಉದ್ದೇಶಕ್ಕೆ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅದರಲ್ಲೂ ಇತ್ತೀಚೆಗೆ ಎಐ , ಡೀಪ್ ಫೇಕ್ ಬಳಸಿ ನೈಜವೆಂಬಂತೆ ಬಿಂಬಿಸಲಾಗುತ್ತಿದೆ.