Actor Upendra: ಉಪ್ಪಿ ಕೊನೆಯ ಬಾರಿ ಅತ್ತಿದ್ದು ಇದೊಂದು ವಿಚಾರಕ್ಕೆ! ಕನ್ನಡಿಯ ಮುಂದೆ ಸತ್ಯ ರಿವೀಲ್
45 Movie: ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಇದೇ ವರ್ಷದ ಮಧ್ಯ ಭಾಗದಲ್ಲಿಯೇ ಬಿಡುಗಡೆ ಆಗಬೇಕಿತ್ತು. ಮೇ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು ಆದರೆ ನಾನಾ ಕಾರಣಗಳಿಗಾಗಿ ಸಿನಿಮಾ ತಡವಾಗುತ್ತಲೇ ಬಂತು. ರಿಯಲ್ ಸ್ಟಾರ್ ಉಪೇಂದ್ರ ಅವರು '45' ಸಿನಿಮಾ ಪ್ರಚಾರದ ವೇಳೆ, ತಾವು ಮೊದಲ ಬಾರಿಗೆ ಕಣ್ಣೀರು ಹಾಕಿದ ಕ್ಷಣವನ್ನು ಬಹಿರಂಗಪಡಿಸಿದ್ದಾರೆ.
ನಟ ಉಪೇಂದ್ರ -
ನಟ ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿ ಅರ್ಜುನ್ ಜನ್ಯ (Arjun Janya) ನಿರ್ದೇಶನ ಮಾಡಿರುವ ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಇದೇ ವರ್ಷದ ಮಧ್ಯ ಭಾಗದಲ್ಲಿಯೇ ಬಿಡುಗಡೆ ಆಗಬೇಕಿತ್ತು. ಮೇ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು ಆದರೆ ನಾನಾ ಕಾರಣಗಳಿಗಾಗಿ ಸಿನಿಮಾ ತಡವಾಗುತ್ತಲೇ ಬಂತು. ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು '45' ಸಿನಿಮಾ ಪ್ರಚಾರದ ವೇಳೆ, ತಾವು ಮೊದಲ ಬಾರಿಗೆ ಕಣ್ಣೀರು ಹಾಕಿದ ಕ್ಷಣವನ್ನು ಬಹಿರಂಗಪಡಿಸಿದ್ದಾರೆ.
ಜೀ ಕನ್ನಡ ವಾಹಿನಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದು ಉಪೇಂದ್ರ. ಅನುಶ್ರೀ , ಕನ್ನಡಿಯನ್ನು ಉಪೇಂದ್ರ ಮುಂದೆ ಇರಿಸುತ್ತಾರೆ. ಈ ಕನ್ನಡಿಯೊಳಗಿನ ಉಪೇಂದ್ರ ಯಾವತ್ತಾದ್ರೂ ಅತ್ತಿದ್ದಾರೆ ಎಂದು ಕೇಳುತ್ತಾರೆ.
ತುಂಬಾ ನೋವಾಗಿ ಅತ್ತಿದ್ದೆ
ಆಗ ಉಪೇಂದ್ರ ಮಾತನಾಡಿ ಈಗ ತುಂಬಾ ಹತ್ತಿರದ ದಿನಗಳಲ್ಲಿ ಅತ್ತಿದ್ದು ಪ್ರಜಾಕೀಯ ಪಕ್ಷದ ವಿಚಾರವಾಗಿ. ನೀವು ಹೇಳಿದ್ದೆ ಕರೆಕ್ಟ್, ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಂಡು ಹೋಗಿ ಎಂದು ಹೇಳಿದರು.ಇನ್ನೇನು ಎಲ್ಲ ಪ್ರಚಾರ ಮಾಡಿ, ಎಲೆಕ್ಷನ್ ಹೋಗಬೇಕು ಅನ್ನೋಷ್ಟರಲ್ಲಿ ನಿಮಗೆ ಇದು ಸರಿಯಲ್ಲ.
ಇದನ್ನೂ ಓದಿ: Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
ನಿಮ್ಮ ಯೋಚನೆ ವರ್ಕೌಟ್ ಆಗಲ್ಲ. ನಮ್ಮ ದಾರಿಯಲ್ಲಿಯೇ ಹೋಗಬೇಕು ಎಂದು ಹೇಳಿದ್ದರು. ನನ್ನ ಜೊತೆ ಆಗಲೇ 200 ಜನ ಬಂದು ಬಿಟ್ಟಿದ್ದರು. ಇವರನ್ನು ಬಿಡುವ ಹಾಗಿಲ್ಲ, ಹಿಡಿದುಕೊಳ್ಳುವ ಹಾಗಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಅವರೆಲ್ಲರನ್ನೂ ಬಿಟ್ರೆ ಮೋಸ ಮಾಡಿದಂತಾಗುತ್ತಿತ್ತು. ಹೋದ್ರೆ ನನ್ನ ವಿಚಾರಧಾರೆಗಳಿಗೆ ದ್ರೋಹ ಮಾಡಿದಂತಾಗುತ್ತಿತ್ತು. ಆ ಸಮಯದಲ್ಲಿ ತುಂಬಾ ನೋವಾಗಿ ಅತ್ತಿದ್ದೆ ಮತ್ತು ಅದೇ ಕೊನೆ. ಆದ್ರೆ ಈ ಆ ಕಣ್ಣೀರು ಬತ್ತಿದೆ ಎಂದು ಉಪೇಂದ್ರ ತಿಳಿಸಿದರು.
ಡಿಸೆಂಬರ್ 25 ಕ್ಕೆ ದೇಶಾದ್ಯಂತ ರಿಲೀಸ್
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼ45ʼ.ಡಿಸೆಂಬರ್ 25 ಕ್ಕೆ ದೇಶಾದ್ಯಂತ, ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ.
13 ದಿನ ಮುನ್ನ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಜೊತೆಗೆ ಚಿತ್ರದ ಕಾಲಾವಧಿ ಎಷ್ಟು ಎನ್ನುವುದು ರಿವೀಲ್ ಆಗಿದೆ.ಲೇ '45' ಚಿತ್ರದ ಟೀಸರ್ ಹಾಗೂ ಪ್ರಮೋಷನಲ್ ಸಾಂಗ್ ಈಗಾಗಲೇ ಹಿಟ್ ಆಗಿದೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಎದುರು ಈ ಮಲ್ಟಿಸ್ಟಾರರ್ ಸಿನಿಮಾ ಕೂಡ ಬರ್ತಿದೆ. ಬಹಳ ವರ್ಷಗಳ ಬಳಿಕ ಮತ್ತೆ ಶಿವಣ್ಣ, ಉಪೇಂದ್ರ ಒಟ್ಟಿಗೆ ನಟಿಸಿದ್ದಾರೆ.
ಇದನ್ನೂ ಓದಿ: Raktha Kashmira Movie: ಉಪೇಂದ್ರ-ರಮ್ಯಾ ಕಾಂಬಿನೇಷನ್ನಲ್ಲಿ ಶೀಘ್ರವೇ ತೆರೆಗೆ ಬರಲಿದೆ ‘ರಕ್ತ ಕಾಶ್ಮೀರ’
ಸೆನ್ಸಾರ್ ವಿಚಾರಕ್ಕೆ ಬಂದರೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. '45' ಚಿತ್ರದ ಕಾಲಾವಧಿ 2 ಗಂಟೆ 30 ನಿಮಿಷ ಎನ್ನುವುದು ಬಯಲಾಗಿದೆ.ಕೌಸ್ತುಭ ಮಣಿ ಹಾಗೂ ಜಿಶು ಸೆಂಗುಪ್ತ ಚಿತ್ರದ ತಾರಾಗಣದಲ್ಲಿದ್ದಾರೆ.ಸತ್ಯ ಹೆಗಡೆ ಛಾಯಾಗ್ರಹಣ, ಕೆ. ಪ್ರಕಾಶ್ ಸಂಕಲನ '45' ಚಿತ್ರಕ್ಕಿದೆ. ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ '45' ಸಿನಿಮಾ ಬಿಡುಗಡೆ ಆಗಲಿದೆ.