Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
Ashwini Gowda: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್‌ಗೆ ಸ್ಪರ್ಧಿಗಳು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕಾವ್ಯ ಹಾಗೂ ಅಶ್ವಿನಿ ಅವರ ಸರದಿ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಏಕವಚನ ಬಳಕೆ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರಲ್ಲೂ ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್‌ಗೆ ಸ್ಪರ್ಧಿಗಳು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕಾವ್ಯ ಹಾಗೂ ಅಶ್ವಿನಿ (Kavya Ashwini) ಅವರ ಸರದಿ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಏಕವಚನ (Singular) ಬಳಕೆ ಮಾಡಿದ್ದಾರೆ.
ಕಾವ್ಯ VS ಅಶ್ವಿನಿ
ಟಾಸ್ಕ್ ಆದಮೇಲೆಯೂ ಕಾವ್ಯ ಅವರ ಮೇಲೆ ಕುಳಿತುಕೊಂಡು ಬಿಟ್ಟಿದ್ದರು ಅಶ್ವಿನಿ. ಸೈರನ್ದ್ ಆದರೂ ಎದ್ದಿರಲಿಲ್ಲ. ಇದು ಕಾವ್ಯಗೆ ಕೋಪ ತರಿಸಿದೆ. ಕಾವ್ಯ ಮಾತನಾಡಿ, ಅಶ್ವಿನಿ ಅವರಿಗೆ ಎಷ್ಟು ಕೆಟ್ಟ ಬುದ್ದಿ ಅಂದ್ರೆ ಸೈರನ್ ಆದ ಮೇಲೆ ಏಳಬೇಕು ಅಲ್ವಾ? ಅಂತ ರಾಶಿಕಾ ಬಳಿ ಹೇಳಿದ್ದಾರೆ.
ಇದು ಅಶ್ವಿನಿ ಕಿವಿಗೆ ಬಿದ್ದು, ನೀನು ಪದಗಳನ್ನ ಸರಿಯಾಗಿ ಬಳಕೆ ಮಾಡು ಎಂದಿದ್ದಾರೆ. ಅದಕ್ಕೆ ಕಾವ್ಯ ಹೋಗಮ್ಮ ಅಂತ ಅಶ್ವಿನಿಗೆ ಹೇಳಿದರು. ನಿನ್ನ ಅಮ್ಮಗೆ ಹೋಗಿ ಹೇಳು ಇದೆಲ್ಲ ಅಂತ ಅಶ್ವಿನಿ ಕೂಗಾಡಿದ್ದಾರೆ. ಕಾವ್ಯ ಮಾತನಾಡಿ, ನೀವು ಚೇಂಜ್ ಆಗೋ ವ್ಯಕ್ತಿನೇ ಅಲ್ಲ. ನಾಯಿ ಬಾಲ ಡೊಂಕೆ ಎಂದಿದ್ದಾರೆ ಕಾವ್ಯ. ಅಶ್ವಿನಿ ಗೌಡ ಮೋಸ ಅಂತಾಳೆ, ಇವಳು ದೊಡ್ಡ ಸಾಚಾನ ಅಂತ ಅಶ್ವಿನಿ ಕೂಗಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಸೀಕ್ರೆಟ್ ರೂಮ್ ಬಗ್ಗೆ ರಘುಗೆ ಸಿಕ್ತಾ ಸುಳಿವು? ಗಿಲ್ಲಿ ಬಳಿ ಹೇಳಿದ್ದೇನು?
ವೈರಲ್ ವಿಡಿಯೋ
Siren aadmele people will sit just to be doubly sure. Looks like AG fully overpowered Kavya here. Sore looser talking. What's anyaya there? Should wait for the episode #bbk12 https://t.co/W0P5P0CVC3
— Honest to myself (@Praj19942606) December 17, 2025
ಚೈತ್ರಾ ಮತ್ತು ಅಶ್ವಿನಿ ಗೌಡ ನಡುವೆ ಜಗಳ
ನಿನ್ನೆ ಕೂಡ ಚೈತ್ರಾ ಮತ್ತು ಅಶ್ವಿನಿ ಗೌಡ ನಡುವೆ ಯಾವ ಲೆವೆಲ್‌ಗೆ ಪೈಪೋಟಿ ಇತ್ತು ಎಂದರೆ, ಅಶ್ವಿನಿಗೆ ಪರಚಿ, ಗಿಲ್ಲಿ, ಉಗಿದು ರಂಪಾ ಮಾಡಿದರೆ, ಚೈತ್ರಾ ಅವರ ಕೈಗೆ ಅಶ್ವಿನಿ ಪಟಪಟ ಅಂತ ಹೊಡೆದೇ ಬಿಟ್ಟಿದ್ದಾರೆ! ತಮ್ಮ ಬಟ್ಟೆಯನ್ನು ಅಶ್ವಿನಿ ಎಳೆದರು ಅಂತ ಚೈತ್ರಾ ಕೂಗಾಡಿದರೆ, ಚೈತ್ರಾ ಕುಂದಾಪುರ ನನ್ನ ಕಾಲನ್ನು ಉಗುರಿನಿಂದ ಪರಚಿದ್ರು ಎಂದು ಅಶ್ವಿನಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ, ಪರಚಿದ ಕೈಗೆ ಅಶ್ವಿನಿ ಹೊಡೆದಿದ್ದೂ ಆಗಿದೆ.
ಕೊನೆಗೆ ಚೈತ್ರಾ ಅವರನ್ನು ರಾಶಿಕಾ ನಾಮಿನೇಟ್ ಮಾಡಿದ್ದರು. ಇದರಿಂದ ಕ್ರೋಧಗೊಂಡ ಚೈತ್ರಾ, ರಾಶಿಕಾಗೆ ಹಿಡಿಶಾಪ ಹಾಕಿದ್ದರು. "ಆಟ ಬದಲಾಯಿಸೋ ಅಧಿಕಾರ ಉಸ್ತುವಾರಿಗೆ ಇಲ್ಲ.
ಇದನ್ನೂ ಓದಿ: Bigg Boss Kannada 12: ವೀಕೆಂಡ್‌ನಲ್ಲಿ ಕೆಲವರಿಗೆ ಮಾತ್ರ ಸುದೀಪ್ ಬೈಯೋದ್ಯಾಕೆ? ಕೊಟ್ಟರು ಕಾರಣ
ನೀನು ಯಾವ ಉಸ್ತುವಾರಿ ಹೆಸರಿನಲ್ಲಿ ನನ್ನನ್ನ ನಾಮಿನೇಟ್ ಮಾಡಿದಿಯೋ, ಅದೇ ನಿನಗೆ ಕರ್ಮ ರಿಟರ್ನ್ಸ್ ಅನ್ನುವಂತೆ ನಿನಗೆ ಹೊಡೆಯತ್ತೆ" ಎಂದು ರಾಶಿಕಾಗೆ ಚೈತ್ರಾ ಕುಂದಾಪುರ ಶಾಪ ಹಾಕಿದ್ದರು.