ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pranitha Subhash: ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ನಟಿ ಪ್ರಣಿತಾ ಗ್ಲ್ಯಾಮರ್‌ ಮಿಂಚು

Pranitha Subhash: ಬಹುಭಾಷಾ ನಟಿ, ಸ್ಯಾಂಡಲ್‌ವುಡ್‌ ಮೂಲದ ಪ್ರಣಿತಾ ಸುಭಾಷ್‌ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಗತ್ತಿನ ಪ್ರತಿಷ್ಠಿತ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿ ಬೋಲ್ಡಾಗಿ ಪೋಸ್‌ ಕೊಟ್ಟಿದ್ದಾರೆ. ಈ ಪ್ರತಿಷ್ಠಿತ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ ಕನ್ನಡದ ಮೊದಲ ನಟಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ನಟಿ ಪ್ರಣಿತಾ ಹಾಟ್‌ ಲುಕ್‌

ಪ್ರಣಿತಾ ಸುಭಾಷ್‌.

Profile Ramesh B Mar 12, 2025 10:17 PM

ಪ್ಯಾರಿಸ್‌: ಸಂತೂರ್‌ ಮಮ್ಮಿ ಖ್ಯಾತಿಯ ಬಹುಭಾಷಾ ನಟಿ, ಸ್ಯಾಂಡಲ್‌ವುಡ್‌ ಮೂಲದ ಪ್ರಣಿತಾ ಸುಭಾಷ್‌ (Pranitha Subhash) ತಮ್ಮ ಗ್ಲ್ಯಾಮರ್‌, ಫ್ಯಾಷನ್‌ ಸೆನ್ಸ್‌ನಿಂದಲೇ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ 2ನೇ ಮಗುವಿಗೆ ಜನ್ಮ ನೀಡಿದ ಅವರು ಗ್ಲ್ಯಾಮರ್‌ ಹೆಚ್ಚಿಸಿಕೊಂಡು ಮಿಂಚುತ್ತಿದ್ದಾರೆ. ಮತ್ತಷ್ಟು ಬೋಲ್ಡಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಗತ್ತಿನ ಪ್ರತಿಷ್ಠಿತ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ (Paris fashion week 2025) ಭಾಗಿಯಾಗಿದ್ದಾರೆ. ಈ ಪ್ರತಿಷ್ಠಿತ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ ಕನ್ನಡದ ಮೊದಲ ನಟಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿರುವ ಅವರು ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಗ್ಲ್ಯಾಮರ್‌ ಉಡುಗೆ ತೊಟ್ಟು ಪ್ಯಾರಿಸ್ ಸ್ಟ್ರೀಟ್‌ನಲ್ಲಿ ಪ್ರಣಿತಾ ಕ್ಯಾಮೆರಾಕ್ಕೆ ಪೋಸ್‌ ಕೊಟ್ಟಿದ್ದಾರೆ. ಜತೆಗೆ ರ‍್ಯಾಂಪ್‌ ವಾಕ್‌ ಮಾಡಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದರೂ ಯಾವುದೇ ಮಾಡೆಲ್‌ಗೆ ಕಡಿಮೆ ಇಲ್ಲದಂತೆ ಬೋಲ್ಡಾಗಿ ಕಾಣಿಸಿಕೊಂಡು ನೋಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ. ಪ್ರಣಿತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಫೋಟೊ ಮತ್ತು ವಿಡಿಯೊ ಸದ್ಯ ವೈರಲ್‌ ಆಗಿದೆ. ಅವರ ಗ್ಲ್ಯಾಮರಸ್‌ ಅವತಾರ ನೋಡಿ ಫ್ಯಾನ್ಸ್‌ ಕಳೆದೇ ಹೋಗಿದ್ದು, 2 ಮಕ್ಕಳ ತಾಯಿ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಹಲವರು ಹಾರ್ಟ್‌ ಎಮೋಜಿ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ʼʼಚೆನ್ನಾಗಿದೆʼʼ ಎಂದು ಕಾಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ತಾವು ಸಂತೂರ್‌ ಮಮ್ಮಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಪಂಚಭಾಷಾ ತಾರೆ

2010ರಲ್ಲಿ ತೆರೆಕಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ʼಪೊರ್ಕಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಣಿತಾ ಇದೀಗ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿ ಪಂಚಭಾಷಾ ನಟಿ ಎನಿಸಿಕೊಂಡಿದ್ದಾರೆ. 2010ರಲ್ಲಿ ʼಎಮ್‌ ಪಿಲ್ಲೊ ಎಮ್‌ ಪಿಲ್ಲಾಡೊʼ ಸಿನಿಮಾ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಪ್ರಣಿತಾ ಮರುವರ್ಷ ʼಉದಯನ್‌ʼ ಚಿತ್ರದ ಮೂಲಕ ಕಾಲಿವುಡ್‌ಗೆ ಪ್ರವೇಶಿಸಿದರು.

ಈ ಸುದ್ದಿಯನ್ನೂ ಓದಿ: Megha Shetty: ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ; ಸ್ಯಾಂಡಲ್‌ವುಡ್‌ ಜೊತೆ ಜೊತೆಯಲಿ ಕಾಲಿವುಡ್‌ನಲ್ಲೂ ಅಭಿನಯ

2013ರಲ್ಲಿ ತೆರೆಕಂಡ ಪವನ್‌ ಕಲ್ಯಾಣ್‌ ನಟನೆಯ ʼಅತ್ತಾರಿಂಟಿಕಿ ದಾರೆದಿʼ ಸಿನಿಮಾ ಪ್ರಣಿತಾಗೆ ಬಹು ಜನಪ್ರಿಯತೆ ತಂದುಕೊಟ್ಟಿತು. 2021ರಲ್ಲಿ ಬಿಡುಗಡೆಯಾದ ʼಹಂಗಾಮಾ 2' ಪ್ರಣಿತಾ ನಟನೆಯ ಮೊದಲ ಹಿಂದಿ ಚಿತ್ರ. ಅದೇ ವರ್ಷ ಬಾಲಿವುಡ್‌ನ ʼಭುಜ್‌: ಡಿ ಪ್ರೈಡ್‌ ಆಫ್‌ ಇಂಡಿಯಾʼ ಚಿತ್ರವೂ ತೆರೆ ಕಂಡಿತು. ಅದಾದ ಬಳಿಕ 3 ವರ್ಷ ನಟನೆಗೆ ಬ್ರೇಕ್‌ ತೆಗೆದುಕೊಂಡರು.

ಇನ್ನು ಕಳೆದ ವರ್ಷ ರಿಲೀಸ್‌ ಆದ ʼತಂಕಮಣಿʼ ಮಲಯಾಳಂ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಂಬ್ಯಾಕ್‌ ಮಾಡಿದರು. 2024ರಲ್ಲಿ ಕನ್ನಡದ ʼರಾಮನ ಅವತಾರʼ ಸಿನಿಮಾ ರಿಲೀಸ್‌ ಆಗಿದೆ.

2021ರಲ್ಲಿ ಹಸೆಮಣೆಗೇರಿದ ಪ್ರಣಿತಾ

ಚಿತ್ರರಂಗದ ಉತ್ತುಂಗದಲ್ಲಿರುವಾಗಲೇ ಪ್ರಣಿತಾ 2021ರಲ್ಲಿ ಹಸೆಮಣೆಗೇರಿದರು. ನಿತಿನ್‌ ರಾಜು ಎಂಬವರನ್ನು ವರಿಸಿದ ಪ್ರಣಿತಾ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅಖತ್‌ ಆ್ಯಕ್ಟಿವ್‌ ಆಗಿರುವ ಅವರು ಸದ್ಯದಲ್ಲೇ ಹೊಸ ಚಿತ್ರಕ್ಕೆ ಸಹಿ ಹಾಕಲಿದ್ದಾರೆ.