ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Zaira Wasim: 25ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ದಂಗಲ್' ಖ್ಯಾತಿಯ ನಟಿ ಝೈರಾ

'ದಂಗಲ್' ಮತ್ತು 'ಸೀಕ್ರೆಟ್ ಸೂಪರ್‌ಸ್ಟಾರ್' ಖ್ಯಾತಿಯ ಬಾಲಿವುಡ್ ನಟಿ ಝೈರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಮದುವೆ ಸಮಾರಂಭದ ಕೆಲವು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಸೋಶಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದಿಢೀರ್ ಮದುವೆಯಾದ ಬಾಲಿವುಡ್ ನಟಿ ಝೈರಾ

Actress Zaira Wasim -

Profile Pushpa Kumari Oct 18, 2025 7:04 PM

ಮುಂಬೈ: ಬಾಲಿವುಡ್‌ ನಟಿ, 25 ವರ್ಷದ ಝೈರಾ ವಾಸಿಮ್ (Zaira Wasim) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್‌ನ 'ದಂಗಲ್ (Dangal) ಮತ್ತು 'ಸೀಕ್ರೆಟ್ ಸೂಪರ್‌ಸ್ಟಾರ್' ಖ್ಯಾತಿಯ ಝೈರಾ ದಿಢೀರ್‌ ಆಗಿ ವಿವಾಹವಾಗಿದ್ದು ಮದುವೆ ಸಮಾರಂಭದ ಕೆಲವು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಜೊತೆಗೆ ವಿಶೇಷ ಪೋಸ್ಟ್ ಶೇರ್‌ ಮಾಡಿದ್ದಾರೆ. ಒಂದು ಫೋಟೊದಲ್ಲಿ ಅವರು ಮದುವೆ ರಿಜಿಸ್ಟ್ರೇಶನ್‌ಗೆ ಸಹಿ ಹಾಕುತ್ತಿರುವ ದೃಶ್ಯ ಕಾಣಬಹುದು.‌ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

2019ರಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯರಾದ ಝೈರಾ ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಇದೀಗ ಸರ್‌ಪ್ರೈಸ್ ಎಂಬಂತೆ ಮದುವೆ ಸಮಾರಂಭದ ಎರಡು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ಫೋಟೊ ಜತೆಗೆ 'ಕಬೂಲ್ ಹೈ' ಎಂಬ ಶೀರ್ಷಿಕೆಯನ್ನು ಕೂಡ ಅವರು ನೀಡಿದ್ದಾರೆ. ವೈರಲ್ ಆದ ಫೋಟೊದಲ್ಲಿ ಮೆಹೆಂದಿ ಮತ್ತು ಪಚ್ಚೆ ಉಂಗುರ ಧರಿಸಿದ್ದ ನಟಿ ಝೈರಾ ತನ್ನ ಮದುವೆಯ ಅಗ್ರಿಮೆಂಟ್‌ಗೆ ಸಹಿ ಹಾಕಿದ್ದನ್ನು ಕಾಣಬಹುದು. ಇನ್ನೊಂದು ಫೋಟೊದಲ್ಲಿ ಅವರು ಪತಿಯೊಂದಿಗೆ ಚಂದ್ರನನ್ನು ನೋಡುತ್ತಿರುವ ದೃಶ್ಯವಿದೆ. ಝೈರಾ ಹಂಚಿಕೊಂಡ ಫೋಟೊದಲ್ಲಿ ಅವರ ಮುಖ ಚಹರೆಯೇನು ಕಾಣಿಸುತ್ತಿಲ್ಲ. ಅಷ್ಟು ಮಾತ್ರವಲ್ಲದೆ ತಾನು ಯಾರನ್ನು ವಿವಾಹವಾಗಿದ್ದೇನೆಂಬ ಸಿಕ್ರೇಟ್ ಅನ್ನು ಕೂಡ ಅವರು ಬಿಟ್ಟುಕೊಟ್ಟಿಲ್ಲ.

ಇದನ್ನು ಓದಿ:BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಔಟ್‌

ಝೈರಾ ವಾಸಿಮ್ 16ನೇ ವಯಸ್ಸಿನಲ್ಲಿ ಆಮಿರ್ ಖಾನ್ ಅವರ ʼದಂಗಲ್ʼ ಚಿತ್ರದಲ್ಲಿ ಕುಸ್ತಿಪಟು ಗೀತಾ ಫೋಗಟ್ ಅವರ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿ‌ಮಾದಲ್ಲಿ ಅವರ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕಾರ ಕೂಡ ಲಭಿಸಿತ್ತು. ಅನಂತರ ಅವರು ʼಸೀಕ್ರೆಟ್ ಸೂಪರ್‌ಸ್ಟಾರ್ʼ ಸಿನಿಮಾದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದದರು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. 2019ರಲ್ಲಿ ಝೈರಾ ಸಿನಿಮಾ ರಂಗ ತೊರೆ‌ಯುತ್ತಿರುವುದಾಗಿ ಘೋಷಿಸಿದರು.