ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bribery Case: ಆರ್‌ಟಿಸಿ ದುರಸ್ತಿಗೆ 12 ಸಾವಿರ ಲಂಚ ಸ್ವೀಕಾರ; ಶಿರಸ್ತೇದಾರ ಸೇರಿ ಮೂವರ ಬಂಧನ

Hangal News: ಆರ್‌ಟಿಸಿ ದುರಸ್ತಿಗೆ 12 ಸಾವಿರ ಲಂಚ ಸ್ವೀಕಾರ ಪಡೆಯುತ್ತಿದ್ದ ಹಾನಗಲ್ ತಹಸೀಲ್ದಾರ್‌ ಕಚೇರಿಯ ಶಿರಸ್ತೇದಾರ ತಮ್ಮಣ್ಣ ಕಾಂಬಳೆ, ಎಸ್‌ಡಿಎ ಗುಳಪ್ಪ ಮನಗುಳಿ, ಕೃತ್ಯಕ್ಕೆ ಸಹಕರಿಸಿದ್ದ ಎಸ್‌ಡಿಎ ಶಿವಾನಂದ ಬಡಿಗೇರ್ ಎಂಬುವವರನ್ನು ಲೋಕಾಯುಕ್ತ ಪೊಲೀಸ್ ದಸ್ತಗಿರಿ ಮಾಡಿದ್ದಾರೆ.

ಆರ್‌ಟಿಸಿ ದುರಸ್ತಿಗೆ 12 ಸಾವಿರ ಲಂಚ ಸ್ವೀಕಾರ; ಮೂವರ ಬಂಧನ

-

Prabhakara R Prabhakara R Oct 18, 2025 9:09 PM

ಹಾವೇರಿ: ಆರ್‌ಟಿಸಿ ಉತಾರ (ಪಹಣಿ) ದುರಸ್ತಿಗೆ 12 ಸಾವಿರ ಲಂಚ ಪಡೆಯುವ (Bribery Case) ವೇಳೆ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಹಾನಗಲ್‌ ತಹಸೀಲ್ದಾರ್‌ ಕಚೇರಿಯಲ್ಲಿ (Hangal Tahasildar Office) ನಡೆದಿದೆ. ನವೀನ್ ಪಾಟೀಲ್ ಎಂಬುವವರ ಆರ್‌ಟಿಸಿ ಉತಾರ ದುರಸ್ತಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, 12 ಸಾವಿರ ಲಂಚ ಪಡೆಯುವ ವೇಳೆ ಮೂವರು ನೌಕರರು ಸಿಕ್ಕಿಬಿದ್ದಿದ್ದಾರೆ.

ಹಾನಗಲ್ ತಹಸೀಲ್ದಾರ್‌ ಕಚೇರಿಯ ಶಿರಸ್ತೇದಾರ ತಮ್ಮಣ್ಣ ಕಾಂಬಳೆ, ಎಸ್‌ಡಿಎ ಗುಳಪ್ಪ ಮನಗುಳಿ, ಕೃತ್ಯಕ್ಕೆ ಸಹಕರಿಸಿದ್ದ ಎಸ್‌ಡಿಎ ಶಿವಾನಂದ ಬಡಿಗೇರ್ ಎಂಬುವವರನ್ನು ಲೋಕಾಯುಕ್ತ ಪೊಲೀಸ್ ದಸ್ತಗಿರಿ ಮಾಡಿದ್ದಾರೆ. ಹಾವೇರಿ ಲೋಕಾಯುಕ್ತರು ಇವರನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.

ನವೀನ ಅವರ ಕೆಲಸ ಮಾಡಿಕೊಡುವ ಮುನ್ನ ಶನಿವಾರದಂದು ಹಾನಗಲ್‌ ತಹಸೀಲ್ದಾರ್ ಕಚೇರಿಯಲ್ಲಿ ಹಣ ಪಡೆದುಕೊಳ್ಳುವ ಸಮಯದಲ್ಲಿ‌, ಹಾವೇರಿ ಲೋಕಾಯುಕ್ತ ಪೊಲೀಸ್ ತಂಡ ಪುರಾವೆ ಸಮೇತ ಇವರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದೆ. ಮೂವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಚ್ಚಿನಿಂದ ಕೈಬೆರಳು ಕತ್ತರಿಸಿ ಮಹಿಳೆಯ ದರೋಡೆ ಮಾಡಿದ ಇಬ್ಬರ ಸೆರೆ

robbery case hosakerehalli

ಬೆಂಗಳೂರು: ಬೆಂಗಳೂರಿನ (Bengaluru crime news) ಹೊಸಕೆರೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ (Assault case) ನಡೆಸಿ ಆಕೆಯ ಎರಡು ಬೆರಳುಗಳನ್ನು ಕತ್ತರಿಸಿ, ಅವರ ಚಿನ್ನದ ಸರಗಳನ್ನು ದರೋಡೆ (Robbery Case) ಮಾಡಿದ ಇಬ್ಬರು ಪಾತಕಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆಯ ಭಯಾನಕತೆಯನ್ನು ತೋರಿಸಿದ್ದವು.

ಆರೋಪಿಗಳನ್ನು ಪ್ರವೀಣ್ ಮತ್ತು ಯೋಗಾನಂದ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಉಷಾ ಮತ್ತು ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರು ಸೆಪ್ಟೆಂಬರ್ 13ರಂದು ರಾತ್ರಿ ಗಣೇಶ ಹಬ್ಬದ ಆರ್ಕೆಸ್ಟ್ರಾದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದರು. ಇಬ್ಬರೂ ಪಾತಕಿಗಳು ಬೈಕ್‌ನಲ್ಲಿ ಅವರ ಬಳಿಗೆ ಬಂದು ಬೆದರಿಸಿ ಅವರ ಚಿನ್ನದ ಸರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಭಯಭೀತರಾದ ಉಷಾ ತಮ್ಮ ಚಿನ್ನದ ಸರವನ್ನು ಕೊಟ್ಟುಬಿಟ್ಟರು. ಆದರೆ ವರಲಕ್ಷ್ಮಿ ವಿರೋಧಿಸಿದಾಗ, ಯೋಗಾನಂದ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಅವರ ಎರಡು ಬೆರಳುಗಳನ್ನು ಕತ್ತರಿಸಿದ್ದ.

ಇದನ್ನೂ ಓದಿ: Viral Video: ಪತ್ನಿಯ ಲವ್ವರ್‌ ಎಂದು ತಪ್ಪಾಗಿ ಭಾವಿಸಿ ಯುವಕನ ಮೇಲೆ ಬರ್ಬರ ಹಲ್ಲೆ- ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ನಂತರ ಆರೋಪಿಗಳು 55 ಗ್ರಾಂ ಚಿನ್ನಾಭರಣಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರ ವಿಶೇಷ ತನಿಖಾ ತಂಡ ವಾರಗಳ ಕಾಲ ಈ ದುಷ್ಕರ್ಮಿಗಳನ್ನು ಹುಡುಕಾಡಿತ್ತು. ಇಬ್ಬರೂ ತಮಿಳುನಾಡು, ಗೋವಾಗಳಿಗೆ ಪರಾರಿಯಾಗಿ ಅಲ್ಲಿ ಕಾಲ ಕಳೆದಿದ್ದು, ನಂತರ ರಾಜ್ಯಕ್ಕೆ ಬಂದಾಗ ಸಿಕ್ಕಿಬಿದ್ದಿದ್ದಾರೆ. ಇವರು ಕದ್ದ 74 ಗ್ರಾಂ ಚಿನ್ನಾಭರಣ ಮತ್ತು ದಾಳಿಗೆ ಬಳಸಿದ ಆಯುಧವನ್ನು ಪತ್ತೆಹಚ್ಚಲಾಗಿದೆ.

ಆರೋಪಿಗಳಲ್ಲಿ ಒಬ್ಬನಾದ ಯೋಗಾನಂದ, ಘಟನೆಯ ನಂತರ ಪುದುಚೇರಿ, ಮುಂಬೈ ಮತ್ತು ಗೋವಾಕ್ಕೆ ಪ್ರಯಾಣಿಸಿದ್ದ. ನಂತರ ಕರ್ನಾಟಕದ ತನ್ನ ಹುಟ್ಟೂರಾದ ಮರಸಿಂಗನಹಳ್ಳಿ ಗ್ರಾಮಕ್ಕೆ ಹಿಂದಿರುಗಿದ್ದ. ಈತ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.