ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Agnisakshi Serial: ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರೋಮೋ ಔಟ್‌! ಹೊಸ ಲುಕ್‌ನಲ್ಲಿ ಶಮಂತ್ ಬ್ರೋ ಗೌಡ

shamanth bro gowda: ಈ ಮೊದಲು ಆರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗಿದ್ದ ಈ ಸೀರಿಯಲ್​ಗೆ ಈಗ ಶಮಂತ್ ಬ್ರೋ ಗೌಡ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ . 2020ರ ಜನವರಿ 3ರಂದು ಈ ಧಾರಾವಾಹಿ ಕೊನೆ ಆಯಿತು. ಬರೋಬ್ಬರಿ 1588 ಎಪಿಸೋಡ್ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತು. ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಬ್ರೋ ಗೌಡ ನಟಿಸಿದ್ದರು. . ಆ ಬಳಿಕ ಅವರು ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಈ ಧಾರಾವಾಹಿ ಮೂಲಕ ಕಮ್‌ಬ್ಯಾಕ್‌ ಆಗುತ್ತಿದ್ದಾರೆ.

‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರೋಮೋ ಔಟ್‌; ಹೊಸ ಲುಕ್‌ನಲ್ಲಿ ಶಮಂತ್!

ಅಗ್ನಿಸಾಕ್ಷಿ ಧಾರಾವಾಹಿ -

Yashaswi Devadiga
Yashaswi Devadiga Apr 24, 2026 9:34 AM

ಬರೋಬ್ಬರಿ ಏಳು ವರ್ಷಗಳ ಕಾಲ ತೆರೆ ಕಂಡ ಧಾರಾವಾಹಿ ಅಗ್ನಿಸಾಕ್ಷಿ (Agni Sakshi Serial). ಕನ್ನಡಿಗರ ಫೇವರಿಟ್ ಸೀರಿಯಲ್ ಗಳಲ್ಲಿ ಒಂದಾಗಿತ್ತು. ಸೀರಿಯಲ್ ನಟ-ನಟಿಯರು ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಡಿಂಪಲ್ ಕಪಲ್ ಗಳಾದ ಸಿಧ್ದಾರ್ಥ್ ಮತ್ತು ಸನ್ನಿಧಿ ವೀಕ್ಷಕರ ಮೋಸ್ಟ್ ಫೇವರಿಟ್ ಕಪಲ್ ಗಳಾಗಿದ್ದರು. ಇದೀಗ ಹೊಸ 'ಅಗ್ನಿಸಾಕ್ಷಿ' ಧಾರಾವಾಹಿ ಪ್ರೋಮೋ ಬಿಡುಗಡೆಯಾಗಿದ್ದು, ಶಮಂತ್ ಬ್ರೋ ಗೌಡ (shamanth gowda) ಹಾಗೂ ವರ್ಷಿಣಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶಮಂತ್ ಅತ್ಯಂತ ಅಹಂ ಉದ್ಯಮಿಯಾಗಿ, ವರ್ಷಿಣಿ (Varshini) ಸಿಟ್ಟಿಗೆದ್ದ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಧಾರಾವಾಹಿ ಮೂಲಕ ಕಮ್‌ಬ್ಯಾಕ್‌

ಈ ಮೊದಲು ಆರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗಿದ್ದ ಈ ಸೀರಿಯಲ್​ಗೆ ಈಗ ಶಮಂತ್ ಬ್ರೋ ಗೌಡ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ . 2020ರ ಜನವರಿ 3ರಂದು ಈ ಧಾರಾವಾಹಿ ಕೊನೆ ಆಯಿತು. ಬರೋಬ್ಬರಿ 1588 ಎಪಿಸೋಡ್ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತು. ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಬ್ರೋ ಗೌಡ ನಟಿಸಿದ್ದರು. . ಆ ಬಳಿಕ ಅವರು ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಈ ಧಾರಾವಾಹಿ ಮೂಲಕ ಕಮ್‌ಬ್ಯಾಕ್‌ ಆಗುತ್ತಿದ್ದಾರೆ.

ಇದನ್ನೂ ಓದಿ: Akshay Kumar: ನಕಲಿ ಮೀಸೆ ಅಂಟಿಸಿಕೊಂಡು ಟ್ರೋಲ್; ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ಹಳೆಯಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ನಟಿಸಿರುವ ವೈಷ್ಣವಿ ಗೌಡ , ಮಾಯಾ ಪಾತ್ರಧಾರಿ ಇಶಿತಾ ವರ್ಷ, ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ, ಅಂಜಲಿ ಪಾತ್ರಧಾರಿ ಸುಕೃತಾ ನಾಗ್, ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ, ಗೌತಮ್ ಪಾತ್ರಧಾರಿ ಶಶಾಂಕ್, ರಾಧಿಕಾ ಪಾತ್ರಧಾರಿ ಅನುಷಾ ರಾವ್ ನಟಿಸಿದ್ದರು.

ಈ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ಅವರು ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ನಾಯಕ ಕಾರ್‌ನಲ್ಲಿ ಬರುತ್ತಾ ಇರುತ್ತಾನೆ. ನಾಯಕಿ ನಡೆದುಕೊಂಡು ಬರುತ್ತಿರುತ್ತಾಳೆ. ಜೋರಾಗಿ ಮಳೆ ಬಂದ ಕಾರಣ, ವರ್ಷಿಣಿ ಕೈಯಿಂದ ಛತ್ರಿಯನ್ನು ಕಿತ್ತುಕೊಳ್ಳುವ ಶಮಂತ್ ತನ್ನ ಆಫೀಸ್ ಒಳಗೆ ಹೋಗುತ್ತಾನೆ. ಇದರಿಂದ ಸಿಟ್ಟಾಗುವ ವರ್ಷಿಣಿ ಬಂದು ಶಮಂತ್ಗೆ ಬೈಯುತ್ತಾರೆ.ಈ ರೀತಿಯಲ್ಲಿ ಪ್ರೋಮೋ ಇದೆ.

ಪ್ರೋಮೋ ಕಂಡು, ಶಮಂತ್‌ ಲುಕ್‌ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಫ್ಯಾನ್ಸ್‌. ಅವನು ಅಹಂಕಾರದ ಅಗ್ನಿಪರ್ವತ.. ಅವಳು ಸ್ವಾಭಿಮಾನದ ಚಂಡಮಾರುತ.. ಇವರಿಬ್ಬರ ಮುಖಾಮುಖಿಯೇ ಒಂದು ‘ಸಮರ’ ಪ್ರೇಮಕತೆ! ಎಂದು ಕ್ಯಾಪ್ಷನ್‌ ಕೊಟ್ಟಿದೆ ವಾಹಿನಿ. ಪ್ರಸಾರ ಯಾವಾಗಿನಿಂದ ಅನ್ನೋದು ರಿವೀಲ್‌ ಮಾಡಿಲ್ಲ.

ಇದನ್ನೂ ಓದಿ: Dr Rajkumar Birthday: ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್; ವಿಡಿಯೋ ವೈರಲ್‌

ಶಮಂತ್ ಬ್ರೋ ಗೌಡ ಅವರು ‘ಬಿಗ್ ಬಾಸ್’ ಅಲ್ಲಿ ಕಾಣಿಸಿಕೊಂಡರು. ಆ ಬಳಿಕ ಅವರಿಗೆ ‘ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅವರು ನಟಿಸಿದರು. ಇನ್ನು, ವರ್ಷಿಣಿ ಗೌಡ ‘ಜಯಂ’ ಹೆಸರಿನ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು.