Aishwarya Rangarajan: ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕಿ ಐಶ್ವರ್ಯ ರಂಗರಾಜನ್; ಫೋಟೋಸ್ ವೈರಲ್
ಜೀ ಕನ್ನಡ ವಾಹಿನಿಯ ಸ್ಪರ್ಧಿಗಳು ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದನ್ನು ಪ್ರತಿ ಸೀಸನ್ ನಲ್ಲಿ ನೋಡುತ್ತಿದ್ದೇವೆ. ಅದೇ ರೀತಿ ತನ್ನ ಹಾಡುಗಳು ಮೂಲಕ ಮೆಚ್ಚುಗೆ ಪಡೆದಿದ್ದ ಗಾಯಕಿ ಐಶ್ವರ್ಯ ರಂಗರಾಜನ್. ಐಶ್ವರ್ಯ ರಂಗರಾಜನ್ ಇದೀಗ ತಮ್ಮ ಬಹುಕಾಲದ ಗೆಳೆಯ, ಪ್ರೀತಿಸಿದ ಹುಡುಗ ಸಾಯಿ ಸ್ವರೂಪ್ ಜೊತೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
aishwarya rangarajan marriage -
Yashaswi Devadiga
Nov 3, 2025 6:17 PM
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನರಿಗೆ ಪರಿಚಯವಾದ ಗಾಯಕಿ ಐಶ್ವರ್ಯ ರಂಗರಾಜನ್. ನಟ ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲಿ 'ಶೇಕ್ ಇಟ್ ಪುಸ್ಪವತಿ' ಹಾಡು ಹಾಡಿರುವ ಐಶ್ವರ್ಯ ರಂಗರಾಜನ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಐಶ್ವರ್ಯ ರಂಗರಾಜನ್ ಇದೀಗ ತಮ್ಮ ಬಹುಕಾಲದ ಗೆಳೆಯ, ಪ್ರೀತಿಸಿದ ಹುಡುಗ ಸಾಯಿ ಸ್ವರೂಪ್ ಜೊತೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಗಳೂರು ಮೂಲದ ಸಾಯಿ ಸ್ವರೂಪ್ ಎಂಬುವವರ ಜೊತೆಗೆ ಐಶ್ವರ್ಯಾ ಅವರ ಮದುವೆ ನಿಶ್ಚಯವಾಗಿತ್ತು.
ಇದೀಗ ಐಶ್ವರ್ಯ ಮತ್ತು ಸಾಯಿ ಸ್ವರೂಪ್ ಅವರ ಮದುವೆಯು ನೆರವೇರಿದೆ. ಇವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮಗಳು ಜಾನಕಿ ಸೀರಿಯಲ್ನಲ್ಲಿ ಐಶ್ವರ್ಯಾ ರಂಗರಾಜನ್ ಅವರು ನಟಿಸಿದ್ದರು. ಈ ಹಿಂದೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿದ್ದ ಗಾಯಕಿ 'ಎಂಗೇಜ್ಡ್. ನಾವು ಪರ್ಫೆಕ್ಟ್ ಫಿಚ್ ಹುಡುಕಿಕೊಂಡಿದ್ದೇನೆ. ಇನ್ನು ಮುಂದೆ ಬೆಂಗಳೂರಿನಿಂದ ಮಂಗಳೂರು ಅಪ್ ಆಂಡ್ ಡೌನ್' ಎಂದು ಐಶ್ವರ್ಯ ಬರೆದುಕೊಂಡಿದ್ದರು.
ಕೆಲದಿನಗಳ ಹಿಂದೆಯಷ್ಟೇ ಐಶ್ವರ್ಯ ತಮ್ಮ ಹೊಸ ಆಲ್ಬಂ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದರು. ನಿನಗೆಂದೇ ಎನ್ನುವ ಟೈಟಲ್ ಹೊಂದಿರುವ ಆಲ್ಬಂ ಹಾಡಿನಲ್ಲಿ ಐಶ್ವರ್ಯ ತಮ್ಮ ಫಿಯಾನ್ಸಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ, ನಮಾಮಿ ನಮಾಮಿ, ಮಳೆಯೇ ಮಳೆಯೇ, ಟ್ರೋಲ್ ಆಗುತ್ತೆ ಸೇರಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಐಶ್ವರ್ಯ ರಂಗನಾಥ್ 'ಸರಿಗಮಪ ಸೀಸನ್ 11' ರಲ್ಲಿ ಭಾಗಿಯಾಗಿದ್ದರು, ತಮ್ಮ ಗಾಯನ ಪ್ರತಿಭೆ ಮೂಲಕ ಟಾಪ್ 3 ಸ್ಥಾನಕ್ಕೆ ಆಯ್ಕೆ ಆದರು. ಟ್ರೋಫಿ ಗೆಲ್ಲದೆ ಇದ್ದರೂ ಅವರಿಗೆ ಅವಕಾಶಗಳು ಸಿಗುತ್ತಾ ಹೊಯ್ತು.ಈ ಗಾಯಕಿ ತಮಿಳಿನ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದರು.
ತೀರ್ಪುಗಾರರಾದ ಶ್ರೀನಿವಾಸ್ ಹಾಗೂ ಸುಜಾತ ಹಾಡು ಕೇಳಿ ಖುಷಿ ಆಗಿದ್ದರು. ನಿಮ್ಮನ್ನು ಪಡೆಯಲು ಈ ಕಾರ್ಯಕ್ರಮ ಅದೃಷ್ಟ ಮಾಡಿದೆ ಎಂದು ಐಶ್ವರ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತ ಮಾಡಿಕೊಂಡಿದ್ದರು.