Radheyaa Review: ಸಮಾಜದಲ್ಲಿನ ಅನ್ಯಾಯದ ವಿರುದ್ಧ ತಿರುಗಿಬೀಳುವ ʻರಾಧೇಯʼ!
Radheyaa Movie Review And Rating: ಅಜಯ್ ರಾವ್, ಸೋನಲ್ ಮೊಂಥೆರೋ, ಧನ್ಯಾ ಬಾಲಕೃಷ್ಣ ಅಭಿನಯದ ʻರಾಧೇಯʼ ಸಿನಿಮಾವು ಟ್ರೇಲರ್ ಮೂಲಕವೇ ಎಲ್ಲರ ಗಮನಸೆಳೆದಿತ್ತು. ಈ ಚಿತ್ರವೀಗ ತೆರೆಕಂಡಿದೆ. ಹಾಗಾದರೆ, ಈ ಚಿತ್ರ ಹೇಗಿದೆ? ಇಲ್ಲಿದೆ ಮಾಹಿತಿ.
-
Movie: ರಾಧೇಯ
Release Date: ನವೆಂಬರ್ 21, 2025
Language: ಕನ್ನಡ
Genre: ಥ್ರಿಲ್ಲರ್, ಸಸ್ಪೆನ್ಸ್
Director: ವೇದ ಗುರು
Cast: ಅಜಯ್ ರಾವ್, ಸೋನಲ್ ಮೊಂಥೆರೋ, ಧನ್ಯಾ ಬಾಲಕೃಷ್ಣ, ಅರವಿಂದ್ ರಾವ್, ಗಿರಿ ಶಿವಣ್ಣ,
Duration: 121 Minutes
Rating: 3/5
36 ಕೊಲೆ ಮಾಡಿರುವ ರಾಧೇಯನಿಗೆ ಹೆಚ್ಚಿನ ವಿಚಾರಣೆ ಇಲ್ಲದೇ ನೇರವಾಗಿ ಮರಣದಂಡನೆ ಘೋಷಿಸುತ್ತದೆ ನ್ಯಾಯಾಲಯ. ಅದು ರಾಧೇಯನ ಆಸೆ ಕೂಡ ಆಗಿರುತ್ತದೆ. ಇನ್ನೇನು ಗಲ್ಲಿಗೇರಬೇಕಾದ ರಾಧೇಯ, ಜೈಲಿನಲ್ಲೂ ಹಲವು ಟ್ವಿಸ್ಟ್‌ಗಳಿಗೆ ಕಾರಣವಾಗುತ್ತಾನೆ. ಅಲ್ಲಿಂದ ʻರಾಧೇಯʼ ಸಿನಿಮಾ ಕುತೂಹಲಕರ ಹಾದಿಯಲ್ಲಿ ಸಾಗುವುದಕ್ಕೆ ಮುಂದಾಗುತ್ತದೆ.
ಅಜಯ್ ರಾವ್, ಸೋನಲ್ ಮೊಂಥೆರೋ, ಧನ್ಯಾ ಬಾಲಕೃಷ್ಣ ಅಭಿನಯದ ʻರಾಧೇಯʼ ಸಿನಿಮಾವನ್ನು ವೇದ ಗುರು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಅವರು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಕಥೆಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅಜಯ್ ರಾವ್ ಅವರನ್ನು ಸೆಲೆಕ್ಟ್ ಮಾಡಿಕೊಂಡಿರುವುದು ವಿಶೇಷ. ಯಾಕೆಂದರೆ, ಅಜಯ್ ರಾವ್ ಈವರೆಗೂ ಈ ಮಾದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ! ಸೈಕೋಪಾತ್ ಶೈಲಿಯ ಪಾತ್ರವೊಂದಕ್ಕೆ ಅಜಯ್ ರಾವ್ ಜೀವ ತುಂಬಲು ಪ್ರಯತ್ನಿಸಿದ್ದಾರೆ.
Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್ ರಾವ್ ಮಾಡಿ ಸಾಲ ಎಷ್ಟು ಗೊತ್ತಾ?
ರಾಧೇಯ ಕಥೆ ಏನು?
ರಾಧೇಯ ಒಬ್ಬ ಫಾರೆನ್ಸಿಕ್ ಅಧಿಕಾರಿಯಾಗಿದ್ದವನು. ಆದರೆ ಇಂತಹ ಚಾಣಾಕ್ಷ ಅಧಿಕಾರಿ ದಿಢೀರನೇ ಹತ್ತಾರು ಕೊಲೆ ಆರೋಪದಲ್ಲಿ ಪೊಲೀಸರಿಗೆ ಸಿಕ್ಕಿಬೀಳುತ್ತಾನೆ. ಅಲ್ಲಲ್ಲ, ಶರಣಾಗುತ್ತಾನೆ. ಅಲ್ಲದೆ, ಈತನ ಮೇಲೆ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಆರೋಪವೂ ಇದೆ. ಇಷ್ಟೆಲ್ಲಾ ಕೇಸ್‌ಗಳು ರಾಧೇಯನ ಮೇಲೆ ಬರಲು ಕಾರಣವೇನು? ರಾಧೇಯ ನಿಜಕ್ಕೂ ಕೊಲೆಗಾರನೇ ಅನ್ನೋದನ್ನು ಫ್ಲಾಶ್‌ಬ್ಯಾಕ್ ಶೈಲಿಯಲ್ಲಿ ಹೇಳಿಕೊಂಡು ಹೋಗಿದ್ಧಾರೆ ನಿರ್ದೇಶಕರು. ರಾಧೇಯ ಎಂಬುದು ಮಹಾಭಾರತದ ಕರ್ಣನ ಮತ್ತೊಂದು ಹೆಸರು. ದಾನ ಮಾಡುವ ವಿಚಾರದಲ್ಲಿ ಕರ್ಣ ಖ್ಯಾತನಾಗಿದ್ದ. ಹಾಗಾಗಿ, ಈ ಚಿತ್ರದಲ್ಲಿ ಬರುವ ಈ ರಾಧೇಯ ಏನು ದಾನ ಮಾಡುತ್ತಾನೆ? ಏನು ತ್ಯಾಗ ಮಾಡುತ್ತಾನೆ ಎಂಬುದನ್ನು ತೆರೆಮೇಲೆ ನೋಡಬೇಕು.
ಮೇಕಿಂಗ್ ಹೇಗಿದೆ?
ನಿರ್ದೇಶಕ ವೇದ ಗುರು ಅವರಿಗೆ ಸಿನಿಮಾ ಮೇಕಿಂಗ್ ಕಲೆ ಒಲಿದಿದೆ. ಅದಕ್ಕೆ ಚಿತ್ರದಲ್ಲಿನ ತಾಂತ್ರಿಕ ನೈಪುಣ್ಯತೆಯೇ ಸಾಕ್ಷಿ. ವಿಯಾನ್ (ಸ್ಯಾಂಡಿ) ಅವರ ಹಿನ್ನೆಲೆ ಸಂಗೀತ ಮತ್ತು ರಮ್ಮಿ ಅವರ ಛಾಯಾಗ್ರಹಣ ಹೈಲೈಟ್ ಎನಿಸುತ್ತದೆ. ಸಿನಿಮಾದ ಅವಧಿಯೂ 2 ಗಂಟೆ 1 ನಿಮಿಷ ಮಾತ್ರ. ಚಿತ್ರಕಥೆಯಲ್ಲಿ ಕೆಲವೊಂದಿಷ್ಟು ಓರೆಕೊರೆಗಳನ್ನು ಸರಿ ಮಾಡಿಕೊಳ್ಳುವ ಅವಕಾಶ ನಿರ್ದೇಶಕರಿಗೆ ಇದ್ದವು. ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಕಥಾನಾಯಕ ಸಿಡಿದೇಳುವಂತಹ ಸಾಕಷ್ಟು ಕಥೆಗಳು ಬಂದಿವೆ. ಆದರೆ ರಾಧೇಯ ಆ ವಿಚಾರದಲ್ಲಿ ಕೊಂಚ ಭಿನ್ನವಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಒಂದಷ್ಟು ಟ್ವಿಸ್ಟ್‌ಗಳು ಥ್ರಿಲ್ ನೀಡುತ್ತವೆ. ಆದರೆ ಆರಂಭದಿಂದಲೂ ಇಂಥದ್ದೇ ಥ್ರಿಲ್ ನೀಡುವಂತಹ ಅವಕಾಶ ನಿರ್ದೇಶಕರಿಗಿತ್ತು.
ಅಜಯ್ ರಾವ್ ನಟನೆಯ ʼರಾಧೇಯʼ ಸಿನಿಮಾ ಟೀಮ್ ಸಂದರ್ಶನ
ಗಮನಸೆಳೆಯುವ ನಟ ಅಜಯ್ ರಾವ್ ಅಭಿನಯ
ನಟ ಅಜಯ್ ರಾವ್ ಅವರು ಈ ಚಿತ್ರದಲ್ಲಿ ಸೈಕೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಅವರು ಮಾಡಿರುವ ಎಲ್ಲಾ ಪಾತ್ರಗಳಿಗೆ ಹೋಲಿಕೆ ಮಾಡಿದರೆ, ಇದು ನಿಜಕ್ಕೂ ಭಿನ್ನ ಎನ್ನಬಹುದು. ಉಳಿದಂತೆ ಪತ್ರಕರ್ತೆಯಾಗಿ ಸೋನಲ್ ಮೋಂಥೆರೋ ಮಿಂಚಿದ್ದಾರೆ. ಧನ್ಯಾ ಬಾಲಕೃಷ್ಣ ನಿಭಾಯಿಸಿರುವ ಪಾತ್ರ ಕಥೆಗೆ ಟ್ವಿಸ್ಟ್ ನೀಡುತ್ತದೆ. ಉಳಿದಂತೆ ಅರವಿಂದ್ ರಾವ್, ಗಿರಿ ಶಿವಣ್ಣ, ಅಶೋಕ್ ರಾವ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.