ಭಾರತ ಮತ್ತೊಂದು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ: ಪಾಕಿಸ್ತಾನ ಅಧ್ಯಕ್ಷ ಜರ್ದಾರಿ ಆರೋಪ
ಭಾರತ ಮತ್ತೊಂದು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಆರೋಪಿಸಿದ್ದಾರೆ. ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ಟೀಕಿಸಿದ ಅವರು, ಇದು ಸರಳ ಜಲ ಭಯೋತ್ಪಾದನೆ ಎಂದು ಹೇಳಿದರು. ನವದೆಹಲಿಯು ರಾಜಕೀಯ ಹತೋಟಿಗಾಗಿ ನೀರಿನ ಹರಿವನ್ನು ಅಸ್ತ್ರಗೊಳಿಸುತ್ತಿದೆ ಎಂದು ಆರೋಪಿಸಿದರು.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದ (Indus Water Treaty) ಸ್ಥಗಿತಗೊಳಿಸುವ ಮೂಲಕ ಭಾರತ ಮತ್ತೊಂದು ಯುದ್ಧದ ಸಿದ್ಧತೆ ನಡೆಸುತ್ತಿದೆ. ಇದು ಅತ್ಯಂತ ಸುಲಭವಾಗಿ ನಡೆಸಬಹುದಾದ ಜಲ ಭಯೋತ್ಪಾದನೆಯಾಗಿದೆ. ರಾಜಕೀಯ ಹತೋಟಿಗಾಗಿ ನವದೆಹಲಿಯು (delhi) ನೀರಿನ ಹರಿವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ (Pakistan President Zardari) ಆರೋಪಿಸಿದರು. ಇಸ್ಲಾಮಾಬಾದ್ (Islamabad) ಮಾತುಕತೆಗೆ ಮುಕ್ತವಾಗಿದೆ. ನವದೆಹಲಿಯೂ ಯುದ್ಧ ರಂಗ ಭೂಮಿಯನ್ನು ಬಿಟ್ಟು ಮಾತುಕತೆಗೆ ಮರಳುವಂತೆ ಅವರು ಒತ್ತಾಯಿಸಿದರು.
ವಿರೋಧ ಪಕ್ಷದ ಪ್ರತಿಭಟನೆಗಳ ನಡುವೆ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ನಾಯಕರು ಮತ್ತೊಂದು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಾದೇಶಿಕ ಶಾಂತಿಯ ಪ್ರತಿಪಾದಕನಾಗಿ ನಾನು ಅದನ್ನು ಶಿಫಾರಸು ಮಾಡುವುದಿಲ್ಲ ಎಂದರು.
ಭಾರತಕ್ಕೆ ನನ್ನ ಸಂದೇಶವೆಂದರೆ ಅರ್ಥಪೂರ್ಣ ಮಾತುಕತೆ ನಡೆಸುವುದು. ಯಾಕೆಂದರೆ ಇದು ಪ್ರಾದೇಶಿಕ ಭದ್ರತೆಗೆ ಇರುವ ಏಕೈಕ ಮಾರ್ಗವಾಗಿದೆ ಎಂದರು.
ಬುರ್ಜ್ ಖಲೀಫಾದ ತೀರಾ ಪಕ್ಕದಲ್ಲೇ ಹಾದು ಹೋದ ವಿಮಾನ: ಬೆಚ್ಚಿಬೀಳಿಸುವ ವಿಡಿಯೊ
ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ಟೀಕಿಸಿದ ಅವರು, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ದಕ್ಷಿಣ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಅಫ್ಘಾನಿಸ್ತಾನದ ಭಯೋತ್ಪಾದನಾ ಬೆದರಿಕೆಗಳ ಬಗ್ಗೆ ಮಾತನಾಡಿದ ಅವರು, ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ದೇಶವು ಮತ್ತೊಂದು ದುರಂತ ದಾಳಿಗೆ ಬಲಿಯಾಗಬಹುದು. ಗಡಿಯಾಚೆಗಿನ ಉಗ್ರಗಾಮಿ ಚಟುವಟಿಕೆಯನ್ನು ತಡೆಯಲು ಪಾಕಿಸ್ತಾನ ರಾಜತಾಂತ್ರಿಕ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಪಾಕಿಸ್ತಾನದ ಮಣ್ಣು ಪವಿತ್ರವಾಗಿದೆ. ನಮ್ಮ ಶಾಂತಿಯನ್ನು ಅಸ್ಥಿರಗೊಳಿಸಲು ನೆರೆಯ ಪ್ರದೇಶವನ್ನು ಬಳಸಲು ದೇಶೀಯ ಅಥವಾ ವಿದೇಶಿ ಯಾವುದೇ ಘಟಕವನ್ನು ನಾವು ಅನುಮತಿಸುವುದಿಲ್ಲ. ದೋಹಾ ಒಪ್ಪಂದದ ಅಡಿಯಲ್ಲಿ ಉಗ್ರಗಾಮಿ ಗುಂಪುಗಳು ಅಫ್ಘಾನ್ ನೆಲದಿಂದ ಕಾರ್ಯನಿರ್ವಹಿಸುವುದನ್ನು ತಡೆಯಲು ಮಾಡಿದ ಬದ್ಧತೆಗಳನ್ನು ಪಾಲಿಸಲು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಇರಾನ್‌ನಿಂದ ದುಬೈಯಲ್ಲಿ ಡಬಲ್ ಸ್ಟ್ರೈಕ್: ಅಮೆರಿಕ ಸೇನಾ ಕಟ್ಟಡ, ಆಸ್ಟ್ರೇಲಿಯಾ ಸೇನಾ ನೆಲೆಗಳ ಮೇಲೂ ದಾಳಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾತನಾಡಿದ ಅವರು, ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತಾಪ ಸೂಚಿಸಿದರು. ಯುಎಇ, ಬಹರೈನ್, ಜೋರ್ಡಾನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಯನ್ನು ಖಂಡಿಸಿದರು.
ದೇಶದ ಅಧ್ಯಕ್ಷರಾಗಿ ಸಂಸತ್ತಿನ ಅಧಿವೇಶನವನ್ನು ಉದ್ದೇಶಿಸಿ ಸೋಮವಾರ ಜರ್ದಾರಿ ಅವರು ಮಾಡಿರುವುದು ಅವರ ಒಂಬತ್ತನೇ ಭಾಷಣವಾಗಿದೆ. ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸೇರಿದ ವಿರೋಧ ಪಕ್ಷದ ಸದಸ್ಯರು ಪದೇ ಪದೇ ಜರ್ದಾರಿ ಅವರ ಭಾಷಣಕ್ಕೆ ಅಡ್ಡಿಪಡಿಸಲೆತ್ನಿಸಿದರು. ಜೈಲಿನಲ್ಲಿರುವ ತಮ್ಮ ನಾಯಕ ಮತ್ತು ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.