ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಜಿತ್‌ ಕುಮಾರ್‌ ಸಂಭಾವನೆ ಕೇಳಿ ಶಾಕ್‌ ಆದ್ರಾ ನಿರ್ಮಾಪಕರು? ʻಇಷ್ಟೊಂದು ಡಿಮ್ಯಾಂಡ್‌ ಮಾಡಿದ್ರೆ ಸಿನಿಮಾ ಮಾಡೋದ್ಹೇಗೆʼ ಅಂದ್ರು ನೆಟ್ಟಿಗರು!

Ajith Kumar Salary: ನಟ ಅಜಿತ್ ಕುಮಾರ್‌ ಅವರು ತಮ್ಮ ಮುಂದಿನ 64ನೇ ಸಿನಿಮಾಕ್ಕಾಗಿ ಬರೋಬ್ಬರಿ 163 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಈ ದುಬಾರಿ ಮೊತ್ತದ ಕಾರಣದಿಂದಲೇ ಸಿನಿಮಾದಿಂದ ನಿರ್ಮಾಪಕರು ಹಿಂದೆ ಸರಿಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅಬ್ಬಬ್ಬಾ! ನಟ ಅಜಿತ್‌ ಕುಮಾರ್‌ ಸಂಭಾವನೆ ಇಷ್ಟೊಂದಾ?

-

Avinash GR
Avinash GR Feb 11, 2026 5:06 PM

ತಮಿಳು ನಟ ಅಜಿತ್‌ ಕುಮಾರ್‌ ಸದ್ಯ ಸಿನಿಮಾಗಿಂತ ಹೆಚ್ಚಾಗಿ ರೇಸಿಂಗ್‌ ಕಡೆಗೆ ಜಾಸ್ತಿ ಗಮನ ನೀಡುತ್ತಿದ್ದಾರೆ ಎಂಬ ಟಾಕ್‌ ಅವರ ಫ್ಯಾನ್ಸ್‌ ಕಡೆಯಿಂದಲೇ ಕೇಳಿಬರುತ್ತಿದೆ. ಸದ್ಯ ಎಲ್ಲರ ಅವರ ಮುಂದಿನ ಸಿನಿಮಾದ ಮೇಲಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಅವರ ವಿಡಮುಯಾರ್ಚಿ ತೆರೆಕಂಡು ಪ್ಲಾಫ್‌ ಎನಿಸಿಕೊಂಡರೆ, ಏಪ್ರಿಲ್‌ನಲ್ಲಿ ರಿಲೀಸ್‌ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ಅಲ್ಲಿಂದಲ್ಲಿಗೆ ಎನ್ನುವಂತೆ ಆಗಿತ್ತು.

ಮುಂದಿನ ಸಿನಿಮಾಗೆ ಡೈರೆಕ್ಟರ್‌ ಯಾರು?

ಇದೀಗ ಆ ಎರಡೂ ಸಿನಿಮಾಗಳು ತೆರೆಕಂಡು ವರ್ಷವಾಗುತ್ತಾ ಬಂದರೂ, ಅಜಿತ್‌ ಕುಮಾರ್‌ ಮಾತ್ರ ತಮ್ಮ ಮುಂದಿನ ಸಿನಿಮಾವನ್ನು ಆರಂಭಿಸಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ನಡುವೆ ಸಿನಿಮಾ ಸೆಟ್ಟೇರಲು ತಡವಾಗುತ್ತಿರುವುದೇ ಅಜಿತ್‌ ಕುಮಾರ್‌ ಡಿಮ್ಯಾಂಡ್‌ ಮಾಡುತ್ತಿರುವ ದುಬಾರಿ ಸಂಭಾವನೆಯಿಂದ ಎಂಬ ಟಾಕ್‌ ಕೇಳಿಬಂದಿದೆ. ಗುಡ್‌ ಬ್ಯಾಡ್‌ ಅಗ್ಲಿ ಡೈರೆಕ್ಷನ್‌ ಮಾಡಿದ್ದ ಅಧಿಕ್‌ ರವಿಚಂದ್ರನ್‌ ಅವರೇ ಅಜಿತ್‌ ನಟನೆಯ 64ನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂಬುದು ಬಹಳ ಹಿಂದೆಯೇ ಫಿಕ್ಸ್‌ ಆಗಿದೆ.

Ajith Kumar: ಸ್ವಲ್ಪ ಶಾಂತವಾಗಿರಿ.... ಫ್ಯಾನ್ಸ್‌ಗೆ ನಟ ಅಜಿತ್‌ ಕುಮಾರ್‌ ರಿಕ್ವೆಸ್ಟ್‌!

ನಿರ್ಮಾಪಕರೇ ಸಿಗುತ್ತಿಲ್ಲವೇ?

ಸಂಪೂರ್ಣ ಸ್ಕ್ರಿಪ್ಟ್‌ ರೆಡಿ ಮಾಡಿಕೊಂಡು ಅಧಿಕ್‌ ಸಿನಿಮಾ ಮಾಡಲು ರೆಡಿಯಾಗಿದ್ದಾರಂತೆ. ಆದರೆ ಅಜಿತ್‌ ಅವರ ಸಂಭಾವನೆ ಮ್ಯಾಟರ್‌ನಿಂದಾಗಿ ನಿರ್ಮಾಪಕರು ಫೈನಲ್‌ ಆಗುತ್ತಿಲ್ಲ ಎಂಬುದು ಕೇಳಿಬಂದಿರುವ ಮಾಹಿತಿ. ಈ ಹಿಂದೆ ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆ ಅಜಿತ್‌ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತಾದರೂ, ಆ ಬಗ್ಗೆ ಈಗ ಅಪ್ಡೇಟ್‌ ಇಲ್ಲ.

163 ಕೋಟಿ ರೂ. ಕೇಳಿದ್ರಾ ಅಜಿತ್?‌

ಮೂಲಗಳ ಪ್ರಕಾರ, ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸಲು ಅಜಿತ್‌ ಕುಮಾರ್‌ ಬರೋಬ್ಬರಿ 163 ಕೋಟಿ ರೂ. ಸಂಭಾವನೆಗೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಜಿತ್‌ ಅವರ ಇತ್ತೀಚಿಗಿನ ಕೆಲ ಸಿನಿಮಾಗಳು ಅಷ್ಟೊಂದು ದೊಡ್ಡ ಗೆಲುವನ್ನು ಪಡೆದಿಲ್ಲ. ಹೀಗಿರುವಾಗ ಯಾವ ಗ್ಯಾರಂಟಿ ಮೇಲೆ ಅಷ್ಟೊಂದು ಸಂಭಾವನೆ ಕೊಟ್ಟು ಸಿನಿಮಾ ಮಾಡೋದು ಎಂಬ ಗೊಂದಲದಲ್ಲಿ ನಿರ್ಮಾಪಕರು ಇದ್ದಾರಂತೆ. ಈಚೆಗೆ ತೆಲುಗಿನ ಅನಿಲ್‌ ಸುಂಕರ ಕೂಡ ನಿರ್ಮಾಣ ಮಾಡುವ ಮನಸ್ಸು ಮಾಡಿ, ಹಿಂದೆ ಸರಿದರು. ಇಷ್ಟೊಂದು ದುಬಾರಿ ಸಂಭಾವನೆಯನ್ನು ಹೀರೋಗೆ ಕೊಟ್ಟರೆ, ನಿರ್ಮಾಪಕರು ಸಿನಿಮಾ ಮಾಡೋದಾದರೂ ಹೇಗೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.