ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಿಗ್‌ ಬಾಸ್ʼ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾದಲ್ಲಿ ನಾಯಕಿ ಆಗ್ತಾರಾ ಯಶಸ್ವಿನಿ? ಹೊರಬಿತ್ತು ಗುಡ್‌ ನ್ಯೂಸ್

ʻಬಿಗ್‌ ಬಾಸ್ʼ ಗಿಲ್ಲಿ ನಟನ ಚಿತ್ರದಲ್ಲಿ ಅಭಿನಯಿಸುವ ಕುರಿತು ಯಶಸ್ವಿನಿ ಕೆ. ಸ್ವಾಮಿ ಅವರು ವಿಶ್ವವಾಣಿ ಟಿವಿಯ ಸಂದರ್ಶನದಲ್ಲಿ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್‌ಗೂ ಮುನ್ನವೇ ಸಿನಿಮಾವೊಂದರ ಮಾತುಕತೆ ನಡೆದಿತ್ತು, ಪಾತ್ರ ಚೆನ್ನಾಗಿದ್ದರೆ ಗಿಲ್ಲಿ ಜೊತೆ ನಟಿಸಲು ನಾನು ಸಿದ್ಧ ಎಂದು ಅವರು ತಿಳಿಸಿದ್ದಾರೆ.

‌'ಬಿಗ್ ಬಾಸ್' ವಿನ್ನರ್ ಗಿಲ್ಲಿ ನಟನ ಸಿನಿಮಾಗೆ ನಾಯಕಿಯಾಗ್ತಾರಾ ಯಶಸ್ವಿನಿ?

-

Avinash GR
Avinash GR Apr 16, 2026 7:43 PM

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿರುವ ಗಿಲ್ಲಿ ನಟ ಅವರು ಬಿಗ್‌ ಬಾಸ್‌ಗೆ ಹೋಗಿ, ವಿನ್ನರ್‌ ಆದಮೇಲೆ ತಮ್ಮ ಕ್ರೇಜ್‌ ಹೆಚ್ಚಿಸಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು? ಯಾವ ಶೋ ಮಾಡ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ವಿಶ್ವವಾಣಿ ಟಿವಿ ಜೊತೆಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿರುವ ನಟಿ ಯಶಸ್ವಿನಿ ಕೆ. ಸ್ವಾಮಿ, ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಗಿಲ್ಲಿ ನಟನ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದು ಅವರ ಬಹಿರಂಗ ಪಡಿಸಿದ್ದಾರೆ.

ಬಿಗ್‌ ಬಾಸ್‌ಗೆ ಹೋಗುವುದಕ್ಕೂ ಮುನ್ನ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಗಿಲ್ಲಿ ಫೇಮಸ್‌ ಆಗಿದ್ದರು. ಆ ಶೋನಲ್ಲಿ ನಟನಿಗೆ ಯಶಸ್ವನಿ ಕೆ. ಸ್ವಾಮಿ ಅವರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ಜೋಡಿ ಬಹಳ ಫೇಮಸ್‌ ಆಗಿತ್ತು. ಇದೀಗ ಗಿಲ್ಲಿ ನಟ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗುವ ಚಾನ್ಸ್‌ ಸಿಗುವ ಸಾಧ್ಯತೆ ಎಂಬ ಬಗ್ಗೆ ಯಶಸ್ವಿನಿ ಮಾತನಾಡಿದ್ದಾರೆ.

Gilli Nata: ʻಇನ್‌ಸ್ಟಾಗ್ರಾಮ್‌ನಲ್ಲಿ ರಘು ಅಣ್ಣ ಅನ್‌ಫಾಲೋ ಮಾಡಿದ್ದು ಗೊತ್ತೇ ಇರಲಿಲ್ಲʼ; ಅಚ್ಚರಿಯ ವಿಚಾರ ತಿಳಿಸಿದ ಗಿಲ್ಲಿ ನಟ!

ಒಂದು ಸಿನಿಮಾಗೆ ಮಾತುಕತೆ ಅಗಿದೆ

"ಪಾತ್ರ ಚೆನ್ನಾಗಿದ್ರೆ ಖಂಡಿತ ನಾನು ಗಿಲ್ಲಿ ನಟನ ಸಿನಿಮಾದಲ್ಲಿ ನಟಿಸುತ್ತೇನೆ. ಈ ಸಂಬಂಧ ಒಂದು ಸಿನಿಮಾಗೆ ಮಾತುಕತೆ ಕೂಡ ಅಗಿದೆ. ಆದರೆ ಅದಿನ್ನೂ ಕನೆಕ್ಟ್‌ ಆಗಿಲ್ಲ ಅಷ್ಟೇ. ಸದ್ಯ ಗಿಲ್ಲಿ ಜೊತೆಗಿನ ಸಿನಿಮಾ ಮಾತುಕತೆ ಮಾತ್ರ ಆಗಿರುವುದರಿಂದ, ಅದಿನ್ನೂ ಪ್ರೊಸೆಸ್‌ ಆಗಬೇಕು, ಸಿನಿಮಾ ಆರಂಭ ಆಗಬೇಕು. ಇದೆಲ್ಲಾ ಅದಮೇಲೆ ನೋಡೋಣ" ಎಂದು ಯಶಸ್ವಿನಿ ಕೆ. ಸ್ವಾಮಿ ಹೇಳಿದ್ದಾರೆ.

ಬಿಗ್‌ ಬಾಸ್‌ಗೂ ಮುನ್ನವೇ ನಡೆದ ಡಿಸ್ಕಷನ್‌

"ಈ ಸಿನಿಮಾದ ಮಾತುಕತೆ ಗಿಲ್ಲಿ ಬಿಗ್‌ ಬಾಸ್‌ಗೆ ಹೋಗುವುದಕ್ಕೂ ಮುನ್ನವೇ ಆಗಿದ್ದು. ಅವನ ಜೊತೆಗೂ ಇದರ ಬಗ್ಗೆ ಮಾತನಾಡಿದ್ದೇವೆ. ಈಗ ಬಿಗ್‌ ಬಾಸ್‌ನಿಂದ ಹೊರಗೆ ಬಂದಿದ್ದು, ಅವನ ರೇಂಜ್‌ ಬದಲಾಗಿದೆ. ಈಗ ಆಯ್ಕೆಗಳು ಜಾಸ್ತಿ ಆಗಿದ್ದು, ಬೇರೆ ಯಾರನ್ನಾದರೂ ತೆಗೆದುಕೊಳ್ಳಬಹುದು. ನನಗೆ ಆ ಅವಕಾಶ ಸಿಕ್ಕರೆ ಖಂಡಿತ ಒಪ್ಪಿಕೊಳ್ಳುತ್ತೇನೆ" ಎಂದು ಯಶಸ್ವಿನಿ ಕೆ. ಸ್ವಾಮಿ ಹೇಳಿದ್ದಾರೆ.

ಯಶಸ್ವಿನಿ ಅವರ ಸಂದರ್ಶನ



ನನಗೆ ಧನುಷ್‌ - ಗಿಲ್ಲಿ ಒಂದೇ

"ನನಗೆ ಧನುಷ್‌ ಗೌಡ ಮತ್ತು ಗಿಲ್ಲಿ ನಟ ಇಬ್ಬರು ಸಮಾನರು. ಗಿಲ್ಲಿ ಬಗ್ಗೆ ಮಾತನಾಡಿದೆ ಎಂದಮಾತ್ರಕ್ಕೆ, ಧನುಷ್‌ ಬಗ್ಗೆ ಮಾತನಾಡಲ್ಲ ಅಂತಲ್ಲ ಅಥವಾ ಧನುಷ್‌ ಬಗ್ಗೆ ಮಾತನಾಡಿದೆ ಎಂಬಮಾತ್ರಕ್ಕೆ ಗಿಲ್ಲಿಗಿಂತ ಹೆಚ್ಚು ಅಂತ ಅಲ್ಲ. ಇಬ್ಬರು ನನಗೆ ಸಮಾನರೇ, ಇಬ್ಬರು ನನಗೆ ಸ್ನೇಹಿತರೇ. ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆ ಇಲ್ಲ. ಈಗ ಧನುಷ್‌ ಅವರ ಆಲ್ಬಂ ಸಾಂಗ್‌ ರಿಲೀಸ್‌ ಆಗಿದೆ. ಎಲ್ಲರ ಸಪೋರ್ಟ್‌ ಧನುಷ್‌ಗೆ ಇರಲಿ" ಎಂದು ಯಶಸ್ವಿನಿ ಹೇಳಿದ್ದಾರೆ.