Akshay Kumar: 'ಭೂತ್ ಬಂಗ್ಲಾ' ಚಿತ್ರ ರಿಲೀಸ್‌ಗೆ ರೆಡಿ; ವಿಶೇಷ ಪೋಸ್ಟ್ ಹಂಚಿಕೊಂಡ ನಟ ಅಕ್ಷಯ್
ಅಕ್ಷಯ್ ಕುಮಾರ್ ಮತ್ತು ವಾಮಿಕಾ ಗಬ್ಬಿ ಜೋಡಿಯ ʼಭೂತ್ ಬಂಗ್ಲಾʼ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರೀಕರಣದ ದೃಶ್ಯವೊಂದನ್ನು ನಟ ಅಕ್ಷಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಾಮಿಕಾ ಗಬ್ಬಿಯೊಂದಿಗೆ ಜಲಪಾತವೊಂದರಲ್ಲಿ ರೊಮ್ಯಾಂಟಿಕ್ ಸೀನ್‌ನಲ್ಲಿ ಕಾಣಿಸಿಕೊಂಡಿರುವ ದೃಶ್ಯವನ್ನುಅಕ್ಷಯ್ ಶೇರ್ ಮಾಡಿಕೊಂಡಿದ್ದಾರೆ.

Akshay Kumar, Wamiqa Gabbi Romance

ನವದೆಹಲಿ: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಹಿಂದಿ ಚಿತ್ರರಂಗದ ಟಾಪ್ ನಟ ಎನಿಸಿಕೊಂಡಿದ್ದಾರೆ. ಅದರಲ್ಲೂ ಅಕ್ಷಯ್ ನಟನೆಯ 4-5 ಸಿನಿಮಾಗಳು ವರ್ಷಕ್ಕೆ ರಿಲೀಸ್ ಆಗುತ್ತಿರುತ್ತವೆ. ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್ ಆದರೂ ಹೊಸ ಹೊಸ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಇದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ʼಕೇಸರಿ: ಚಾಪ್ಟರ್ 2’ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂದುಕೊಂಡಷ್ಟು ಸಕ್ಸಸ್ ಕಂಡಿಲ್ಲ. ಇದೀಗ ಅಕ್ಷಯ್ ಕುಮಾರ್ ಮತ್ತು ವಾಮಿಕಾ ಗಬ್ಬಿ ಜೋಡಿಯ ಹೊಸ ಸಿನಿಮಾ ʼಭೂತ್ ಬಂಗ್ಲಾʼದ ಚಿತ್ರೀಕರಣ ಪೂರ್ಣಗೊಂಡಿದ್ದು ಶೂಟಿಂಗ್ ದೃಶ್ಯವೊಂದನ್ನು ನಟ ಅಕ್ಷಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ಹಾರರ್ ಕಾಮಿಡಿ ಸಿನಿಮಾ ʼಭೂತ್ ಬಂಗ್ಲಾʼ ಶೂಟಿಂಗ್ ಪೂರ್ಣ ಗೊಂಡಿರುವ ವಿಚಾರನ್ನು ನಟ ಅಕ್ಷಯ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ವಾಮಿಕಾ ಗಬ್ಬಿಯೊಂದಿಗೆ ಜಲಪಾತದ ಬಳಿ ಕಾಣಿಸಿಕೊಂಡಿರುವ ರೊಮ್ಯಾಂಟಿಕ್ ಸೀನ್‌ನ ದೃಶ್ಯವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ʼಭೂತ್ ಬಂಗ್ಲಾʼ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸೃಜನಶೀಲ ವ್ಯಕ್ತಿ ಪ್ರಿಯನ್ ಸರ್ ಜತೆಗೆ ನನ್ನ ಸಾಹಸ, ಎಕ್ತಾ ಜತೆ ನನ್ನ ಎರಡನೇ ಸಿನಿಮಾ, ವಾಮಿಕಾ ಜತೆ ಮೊದಲ ಪ್ರಯಾಣ. ಈ ಖುಷಿ ಮತ್ತು ನೆನಪುಗಳಿಗೆ ನಾನು ಋಣಿಯಾಗಿದ್ದೇನೆ ಎಂದು ಪೋಸ್ಟ್‌ನಲ್ಲಿ ಬರೆದು ಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಮಲಯಾಳಂನ ಸ್ಟಾರ್ ನಿರ್ದೇಶಕ ಪ್ರಿಯದರ್ಶನ್ 14 ವರ್ಷಗಳ ಬಳಿಕ ಅಕ್ಷಯ್ ಕುಮಾರ್ ಜತೆ ಈ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ಶೋಭಾ ಕಪೂರ್, ಏಕ್ತಾ ಕಪೂರ್ ಅವರ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿ ಫಿಲ್ಮ್ಸ್ ಬ್ಯಾನರ್ ಜತೆಗೆ ಅಕ್ಷಯ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಅಕ್ಷಯ್ ಮತ್ತು ಪ್ರಿಯದರ್ಶನ್ ಜೋಡಿ ಸುಮಾರು ದಶಕಗಳ ನಂತರ ಮತ್ತೆ ಒಂದಾಗುತ್ತಿರುವುದು ವಿಶೇಷ.
ಇದನ್ನು ಓದಿ: Kannada New Movie: ʼನಾಯಿ ಇದೆ ಎಚ್ಚರಿಕೆʼ ಚಿತ್ರದ ಟ್ರೈಲರ್, ಸಾಂಗ್ಸ್ ಬಿಡುಗಡೆ ಮಾಡಿದ ಇಂದ್ರಜಿತ್ ಲಂಕೇಶ್
ʼಭೂತ್ ಬಾಂಗ್ಲಾʼದಲ್ಲಿ ಟಬು, ಪರೇಶ್ ರಾವಲ್, ಶರ್ಮನ್ ಜೋಶಿ, ಮಿಥಿಲಾ ಪಾಲ್ಕರ್, ರಾಜ್‌ಪಾಲ್ ನೌರಂಗ್ ಯಾದವ್, ಜಾವೇದ್ ಜಾಫೇರಿ ಮತ್ತು ಇತರ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾರರ್ ಕಾಮಿಡಿಯಾಗಿ ತಯಾರಾಗುತ್ತಿರುವ ʼಭೂತ್ ಬಾಂಗ್ಲಾʼ ಮುಂದಿನ ವರ್ಷ ಏಪ್ರಿಲ್ 2ರಂದು ಬಿಡುಗಡೆಯಾಗಲಿದೆ.
‘ಭೂತ್ ಬಂಗ್ಲಾ’ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ರಿವೀಲ್ ಆಗಿದೆ. ಕೈಯಲ್ಲಿ ಹಾಲಿನ ಬೌಲ್ ಹಿಡಿದ ಅಕ್ಷಯ್ ಬೆನ್ನ ಮೇಲೆ ಕಪ್ಪು ಬಣ್ಣದ ಬೆಕ್ಕೊಂದು ಉಗ್ರವಾಗಿ ಪೋಸ್ ಕೊಟ್ಟಿದೆ. ಅವರ ಹಿಂದೆ ಭಯಾನಕವಾಗಿರುವ ಅರಮನೆಯೊಂದು ಇದೆ. ಸದ್ಯ ಈ ಪೋಸ್ಟರ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ʼಭೂತ್ ಬಂಗ್ಲಾʼದಲ್ಲಿ ಭಯ ಮತ್ತು ನಗು ಎರಡೂ ಖಚಿತ. ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿಯ ಝಲಕ್ ಅನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.