ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gowri Serial: ‘ಗೌರಿ’ ಸೀರಿಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌; ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು!

Zee Pwer: ಜೀ ಪವರ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಗೌರಿ'. ಇದು ಆಗಸ್ಟ್ 25ರಿಂದ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿದೆ. ನಟಿ ಕಾವ್ಯಶ್ರೀ ಈ ಧಾರಾವಾಹಿಯಲ್ಲಿ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಕ್ಕನಿಗಾಗಿ ಮಹಾತ್ಯಾಗ ಮಾಡುವ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಶ್ಮಿತ್ ಜೈನ್ಅ ವರು ಈ ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

‘ಗೌರಿ’ ಬಿಗ್‌ ಟ್ವಿಸ್ಟ್‌;  ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು

ಗೌರಿ ಧಾರಾವಾಹಿ -

Yashaswi Devadiga
Yashaswi Devadiga Dec 13, 2025 6:50 PM

ಜೀ ಪವರ್‌ನಲ್ಲಿ (Zee Kannada) ಪ್ರಸಾರವಾಗುವ ಧಾರಾವಾಹಿ 'ಗೌರಿ' (Gowri TV Serial). ಇದು ಆಗಸ್ಟ್ 25ರಿಂದ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿದೆ. ನಟಿ ಕಾವ್ಯಶ್ರೀ (Kavyashree) ಈ ಧಾರಾವಾಹಿಯಲ್ಲಿ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಕ್ಕನಿಗಾಗಿ ಮಹಾತ್ಯಾಗ ಮಾಡುವ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಶ್ಮಿತ್ ಜೈನ್ (Sushmitha Jain) ಅವರು ಈ ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವೊಂದು ಎದುರಾಗಿದೆ.

ಈ ಧಾರಾವಾಹಿಯಲ್ಲಿ ಅಭಿಮನ್ಯು ಹಾಗೂ ಗೌತಮಿ ವಿವಾಹ ನಡೆದಿದೆ. ಅದು ಕೂಡ ಆಗಸದಲ್ಲಿ ಎಂಬುದು ವಿಶೇಷ. ಅಮ್ಮ ರಮಾದೇವಿ ಮಾತನ್ನು ಅಭಿ ಎಂದಿಗೂ ವಿರೋಧಿಸಿದವನಲ್ಲ. ಅವನು ಗೌತಮಿಯನ್ನು ಮದುವೆ ಆಗಿದ್ದಾನೆ. ಅದೂ ಅಮ್ಮನ ವಿರೋಧದ ಮಧ್ಯೆ ಎಂಬುದು ವಿಶೇಷ.ಧಾರಾವಾಹಿ ತನ್ನ ವಿಭಿನ್ನ ಕಥಾ ಹಂದರದಿಂದ ಈಗಾಗಲೇ ಕನ್ನಡಿಗರ ಮನೆ ತಲುಪಿದೆ.

ಇದನ್ನೂ ಓದಿ: Kannada Serial TRP: ಕುಸಿದ ಅಣ್ಣಯ್ಯ ಧಾರಾವಾಹಿ ಟಿಆರ್​ಪಿ: ನಂಬರ್ 1 ಧಾರಾವಾಹಿ ಇದುವೇ ನೋಡಿ

ಬಾನು ಭುವಿಯ ನಡುವೆ ಮೂರು ಗಂಟಿನ ನಂಟು. ಪ್ರೀತಿಸುತ್ತಿದ ಜೋಡಿ ವಿಮಾನದಲ್ಲೇ ಮದುವೆಯಾಗುವ ವಿಭಿನ್ನ ಸನ್ನಿವೇಶಕ್ಕೆ ವೀಕ್ಷಕರು ಕಾಯುತ್ತಿದ್ದಾರೆ.

ಏನಿದು ಕಥೆ?

ಕಾವ್ಯಶ್ರೀ ಗೌಡ ಅವರು ಹಳ್ಳಿ ಹುಡುಗಿಯಾಗಿದ್ದು, ಅಕ್ಕನಿಗೋಸ್ಕರ ಏನು ಬೇಕಿದ್ರೂ ಮಾಡೋಕೆ ರೆಡಿ ಆಗುತ್ತಾಳೆ. ಆದರೆ ಅವಳ ಅಕ್ಕ ಮಾತ್ರ ಹಣಕ್ಕಾಗಿ ಏನು ಬೇಕಿದ್ರೂ ಮಾಡ್ತಾಳೆ. ಅವಳಿಗೆ ತಂಗಿ ಕಷ್ಟ ಗೊತ್ತೇ ಆಗೋದಿಲ್ಲ.

ಶ್ರೀಮಂತ ಮನೆಯಲ್ಲಿ ಕಾವ್ಯಶ್ರೀ ಮನೆ ಕೆಲಸದವರ ಪಾತ್ರ ಮಾಡ್ತಿದ್ರೆ, ಅದೇ ಮನೆಗೆ ಅವಳ ಅಕ್ಕ ಸುಳ್ಳು ಹೇಳಿಕೊಂಡು ಸೊಸೆಯಾಗಿ ಎಂಟ್ರಿ ಕೊಡ್ತಾಳೆ. ಅಮೃತಧಾರೆ' ಧಾರಾವಾಹಿಯಲ್ಲಿ ಈಗ ಪಾರ್ಥ ಆಗಿ ಜನರ ಮನಸ್ಸು ಗೆದ್ದಿರುವ ನಟ ಕರಣ್‌ ಕೆ ಆರ್‌ ಅವರು ಈ ಹಿಂದೆ 'ಅರಸಿ' ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸುತ್ತಿದ್ದರು.

ಇದನ್ನೂ ಓದಿ: Kannada Serial TRP: ಅಮೃತಧಾರೆ ಟ್ವಿಸ್ಟ್​ಗೆ ಮನಸೋತ ವೀಕ್ಷಕರು: ನಂ. 1 ಧಾರಾವಾಹಿ

ಇನ್ನು, ಜೀ ಪವರ್ ಚಾನೆಲ್ ಬಗ್ಗೆ ಹೇಳುವುದಾದರೆ, ಈ ಮೊದಲು ಜೀ ಪಿಚ್ಚರ್ ಎಂದು ಪ್ರಸಾರವಾಗುತ್ತಿದ್ದ ವಾಹಿನಿಯನ್ನೇ ಈಗ ಜೀ ಪವರ್ ಹೆಸರಿನಲ್ಲಿ ಲಾಂಚ್ ಮಾಡಲಾಗಿದೆ. ಗೌರಿ ಸೇರಿದಂತೆ, ರಾಜಕುಮಾರಿ, ಜೋಡಿ ಹಕ್ಕಿ, ಶುಭಸ್ಯ ಶೀಘ್ರಂ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಈ ವಾಹಿನಿಯಲ್ಲಿ ಪ್ರಸಾರವಾಗ ಹಳ್ಳಿ ಪವರ್ ಎಂಬ ರಿಯಾಲಿಟಿ ಶೋ ಕೂಡ ಪ್ರಸಾರ ಆರಂಭಿಸಿದೆ.