Ambareesh Birthday: ಅಂಬಿ ಮನಸ್ಸು ಸಮುದ್ರದಷ್ಟೇ ವಿಶಾಲ; ಸುಮಲತಾ ಭಾವುಕ ಪೋಸ್ಟ್!
Ambareesh Birthday: ಮೇ 29 ರಂದು ಅಂಬರೀಶ್ ಪ್ರತಿ ವರ್ಷ ತಮ್ಮ ಜನ್ಮ ದಿನವನ್ನ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರ ಅಭಿಮಾನಿಗಳು ಈ ಕೆಲಸ ಮಾಡುತ್ತಾರೆ. ಮನೆಯವರು ಈ ದಿನವನ್ನ ಮರೆತ್ತಿಲ್ಲ. ಸುಮಲತಾ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ . ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಸುಮಲತಾ ಅಂಬರೀಶ್ -
ಇಂದು ರೆಬೆಲ್ ಸ್ಟಾರ್ ಅಂಬರೀಶ್ (ambareesh) ಅವರ 74 ನೇ ಜನ್ಮ ದಿನ. ಮೇ 29 ರಂದು ಅಂಬರೀಶ್ ಪ್ರತಿ ವರ್ಷ ತಮ್ಮ ಜನ್ಮ ದಿನವನ್ನ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರ ಅಭಿಮಾನಿಗಳು ಈ ಕೆಲಸ ಮಾಡುತ್ತಾರೆ. ಮನೆಯವರು ಈ ದಿನವನ್ನ ಮರೆತ್ತಿಲ್ಲ. ಸುಮಲತಾ (Sumalatha) ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ . ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಸುಮಲತಾ ಪೋಸ್ಟ್ ಏನು?
ಸದಾ ನಿಮ್ಮ ನೆನಪಲ್ಲಿ, ಎಂದೆಂದಿಗೂ ನಮ್ಮ ಹೃದಯದಲ್ಲಿ...
ಇಂದು ಅವರ 74ನೇ ಜನ್ಮದಿನ. ಅಭಿಮಾನಿಗಳು ಪ್ರೀತಿಯಿಂದ ಕೊಂಡಾಡುವ "ರೆಬಲ್ ಸ್ಟಾರ್", ತನ್ನ ಬಳಿ ಸಹಾಯ ಕೇಳಿ ಬಂದವರನ್ನು ಎಂದಿಗೂ ಬರಿಗೈಯ್ಯಲ್ಲಿ ಕಳುಹಿಸದ "ಕಲಿಯುಗದ ಕರ್ಣ"... ಈ ಎರಡೂ ಅಂಕಿತಗಳಿಗೆ ಪ್ರತಿರೂಪವಾಗಿದ್ದ ಅಂಬರೀಶ್ ಅವರ ಬದುಕೇ ಒಂದು ಹಬ್ಬವಾಗಿತ್ತು.
ಇದನ್ನೂ ಓದಿ: System on OTT: ನಂಬರ್ 1 ಟ್ರೆಂಡಿಂಗ್‌ನಲ್ಲಿ ಸೋನಾಕ್ಷಿ ಸಿನ್ಹಾ- ಜ್ಯೋತಿಕಾ ಮೂವಿ; ಈ ಒಟಿಟಿಯಲ್ಲಿ ಸ್ಟ್ರೀಮಿಂಗ್!
ಬೆಲೆ ಕಟ್ಟಲಾಗದು
ಅವರಲ್ಲಿದ್ದ ಆ ಕರುಣೆ, ಔದಾರ್ಯ, ಸದಾ ಹಸನ್ಮುಖಿ ವ್ಯಕ್ತಿತ್ವ ಮತ್ತು ಜನರ ಮೇಲಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು. ಅವರ ಮನಸ್ಸು ಸಮುದ್ರದಷ್ಟೇ ವಿಶಾಲವಾಗಿತ್ತು. ಕಣ್ಣೆದುರು ಬಂದ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ದೊಡ್ಡ ಗುಣ ಅವರದ್ದಾಗಿತ್ತು. ಅವರ ಒಡನಾಟ ಸಿಕ್ಕಿದ್ದೇ ನಮ್ಮ ಪುಣ್ಯ ಅಂತ ಅದೆಷ್ಟೋ ಜನ ಇವತ್ತಿಗೂ ಹೆಮ್ಮೆಯಿಂದ ಹೇಳುತ್ತಾರೆ.
ಇವತ್ತು ಈ ನಮ್ಮ ಕುಟುಂಬ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ಅವರ ನೆರಳಲ್ಲಿ ಬೆಳೆದು, ಅವರೊಂದಿಗಿನ ಆಪ್ತ ಕ್ಷಣಗಳನ್ನು ಆನಂದಿಸಿದ ಅದೆಷ್ಟೋ ಆತ್ಮೀಯ ಸ್ನೇಹಿತರು ಇಂದಿಗೂ ಅವರನ್ನ ಸ್ಮರಿಸಿ, ಭಾವುಕರಾಗುತ್ತಾರೆ.
ಅವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ.
ಇದನ್ನೂ ಓದಿ: Karan Johar: ಶಾರುಖ್, ಆಲಿಯಾ ಭಟ್ ಸೇರಿದಂತೆ ಪ್ರಮುಖರನ್ನು ಅನ್‌ಫಾಲೋ ಮಾಡಿದ ಕರಣ್ ಜೋಹರ್!
ನಮ್ಮೆಲ್ಲರ ಮನಸ್ಸಿನಲ್ಲಿ ನೀವು ಸದಾ ಅಮರ... ಅನು ದಿನವೂ, ಅನುಕ್ಷಣವೂ ನಮ್ಮ ಕುಟುಂಬದ ಉಸಿರಾಗಿರುವ ನೀವೆಂದಿಗೂ ನಮ್ಮ ಹೆಮ್ಮೆಯ "ರೆಬೆಲ್ ಸ್ಟಾರ್ʼʼ ಎಂದು ಬರೆದುಕೊಂಡಿದ್ದಾರೆ.