ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amitabh Bachchan: ಜಯಾ ಬಚ್ಚನ್ ಬೈಗುಳ ತಪ್ಪಿಸಲು ಏನು ಮಾಡ್ತಾರೆ ಅಮಿತಾಭ್‌?

Amitabh Bachchan: ಅಮಿತಾಬ್ ಬಚ್ಚನ್ (Amitabh Bachchan) ಅವರ ವೈಯಕ್ತಿಕ ಜೀವನದ ಕ್ಷಣಗಳನ್ನು ಹಂಚಿಕೊಳ್ಳಲು ಒಂದು ಮಾಧ್ಯಮವಾಗಿದೆ . ಸ್ಪರ್ಧಿಗಳೊಂದಿಗೆ ಸಂವಹನ ನಡೆಸುವಾಗ, ನಟ ಆಗಾಗ್ಗೆ ತಮ್ಮ ಕುಟುಂಬ ಮತ್ತು ಮದುವೆಯ ಬಗ್ಗೆ ಹೇಳಿಕೊಂಡಿದ್ದುಇದೆ. ಈ ಬಾರಿ, ಅವರು ತಮ್ಮ ಪತ್ನಿ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಅವರಿಂದ ಬೈಗುಳ ತಪ್ಪಿಸಲು ಏನು ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದರು .

ಜಯಾ ಬಚ್ಚನ್ ಬೈಗುಳ ತಪ್ಪಿಸಲು ಏನು ಮಾಡ್ತಾರೆ ಅಮಿತಾಭ್‌?

ಅಮಿತಾಭ್‌ ಬಚ್ಚನ್‌ -

Yashaswi Devadiga
Yashaswi Devadiga Aug 25, 2026 11:11 AM

ಕೌನ್ ಬನೇಗಾ ಕರೋಡ್ ಪತಿ 18 ( Kaun Banega Crorepati ) ಕಾರ್ಯಕ್ರಮವು ಅಮಿತಾಬ್ ಬಚ್ಚನ್ (Amitabh Bachchan) ಅವರ ವೈಯಕ್ತಿಕ ಜೀವನದ ಕ್ಷಣಗಳನ್ನು ಹಂಚಿಕೊಳ್ಳಲು ಒಂದು ಮಾಧ್ಯಮವಾಗಿದೆ . ಸ್ಪರ್ಧಿಗಳೊಂದಿಗೆ ಸಂವಹನ ನಡೆಸುವಾಗ, ನಟ ಆಗಾಗ್ಗೆ ತಮ್ಮ ಕುಟುಂಬ ಮತ್ತು ಮದುವೆಯ ಬಗ್ಗೆ ಹೇಳಿಕೊಂಡಿದ್ದುಇದೆ. ಈ ಬಾರಿ, ಅವರು ತಮ್ಮ ಪತ್ನಿ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಅವರಿಂದ ಬೈಗುಳ ತಪ್ಪಿಸಲು ಏನು ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದರು .

ಇತ್ತೀಚಿನ ಕಂತಿನಲ್ಲಿ, ಒಬ್ಬ ಸ್ಪರ್ಧಿ ಅಮಿತಾಬ್ ಅವರನ್ನು ಜಯಾ ಬಚ್ಚನ್ ತಡವಾಗಿ ಮನೆಗೆ ಬಂದಾಗ ಅವರನ್ನು ಗದರಿಸುತ್ತಾರಾ ಎಂದು ಕೇಳಿದರು. ಆಗ ಅಮಿತಾಭ್‌ ಹೇಳಿದ್ದು ಹೀಗೆ.

ಇದನ್ನೂ ಓದಿ: Kangana Ranaut: ರಾಖಿ ಸಾವಂತ್, ಸೋನು ಸೂದ್ ಸೇರಿದಂತೆ ಅನೇಕ ತಾರೆಯರನ್ನ ತರಾಟೆಗೆ ತೆಗೆದುಕೊಂಡ ಕಂಗನಾ!

" ನಮ್ಮ ಕುಟುಂಬದ್ದೇ ಒಂದು ಫ್ಯಾಮಿಲಿ ಗ್ರೂಪ್‌ ಇದೆ. ನಾನು ಅವರಿಗೆ ನನಗೆ ಎಲ್ಲೋ ಶೂಟಿಂಗ್ ಇದೆ ಮತ್ತು ತಡವಾಗುತ್ತದೆ ಎಂದು ಹೇಳುತ್ತೇನೆ, ಆದ್ದರಿಂದ ಅವರು ನನಗಾಗಿ ಊಟಕ್ಕೆ ಕಾಯಬಾರದು ಎಂದು. ನಾನು ಎಲ್ಲವನ್ನೂ ಮೊದಲೇ ತಿಳಿಸುತ್ತೇನೆ. ಆದರೆ ನಾನು ಜಯಾ ಬಚ್ಚನ್ ಹೇಳದಿದ್ದರೆ, ನನ್ನನ್ನು ಗದರಿಸಿ, 'ನೀವು ಎಲ್ಲಿದ್ದೀರಿ? ಇದು ಮನೆಗೆ ಬರುವ ಸಮಯವೇ?' ಎಂದು ಕೂಗಾಡಿ ತನ್ನ ಊಟವನ್ನು ತಿಂದು ಮಲಗುತ್ತಾಳೆ ಎಂದಿದ್ದಾರೆ.

"ನಾಲ್ಕು, ಎಂಟು ಅಥವಾ 10 ಸಿಬ್ಬಂದಿ ಇದ್ದರೂ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ, ಎಲ್ಲಾ ಕೆಲಸಗಳನ್ನು ನಾನೇ ಮಾಡುತ್ತೇನೆ. ಶುಚಿಗೊಳಿಸುವಿಕೆ ಮತ್ತು ಎಲ್ಲವನ್ನೂ ನಾನೇ ನೋಡಿಕೊಳ್ಳುತ್ತೇನೆ. ನನಗೆ ಅಡುಗೆ ಮಾಡುವುದು ಹೇಗೆಂದು ತಿಳಿದಿಲ್ಲ, ಆದ್ದರಿಂದ ಕೆಲವೊಮ್ಮೆ ನಾವು ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡುತ್ತೇವೆ, ಅಥವಾ ಕೆಲವೊಮ್ಮೆ ನಾನು ಜಯಾ ಅವರನ್ನು ', ದಯವಿಟ್ಟು ಏನಾದರೂ ಮಾಡಿ' ಎಂದು ಕೇಳುತ್ತೇನೆ. ಪ್ರತಿದಿನ ನನಗಾಗಿ ವಿಭಿನ್ನ ಅಡುಗೆಯನ್ನು ತಯಾರಿಸುತ್ತಾಳೆ ಮತ್ತು ನನಗೆ ಅದು ಇಷ್ಟವಾಯಿತಾ ಇಲ್ಲವಾ ಎಂದು ಕೇಳುತ್ತಾಳೆ ಎಂದರು.

1971 ರಲ್ಲಿ ಗುಡ್ಡಿ ಚಿತ್ರದ ಸೆಟ್‌ಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಭೇಟಿ ಆದರು. ಜಯಾ ಅಮಿತಾಬ್‌ನತ್ತ ಆಕರ್ಷಿತರಾದರು. ೧೯೭೨ ರಲ್ಲಿ ಏಕ್ ನಜರ್ ಚಿತ್ರೀಕರಣದ ಸಮಯದಲ್ಲಿ ಅಮಿತಾಬ್ ಅವರಿಗೆ ಹತ್ತಿರವಾದರು.

ಇದನ್ನೂ ಓದಿ: Amruthadhaare Serial: ಭೂಮಿ ಕೇಡಿಗಾಗಿ ಬೀಸಿರೋ ಬಲೆ 'ಜೀವ' ಇಂದ ಬಯಲಾಗುತ್ತಾ?

ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಶ್ವೇತಾ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್. ಅವರಿಗೆ ಮೂವರು ಮೊಮ್ಮಕ್ಕಳು - ನವ್ಯ ನವೇಲಿ ನಂದಾ, ಅಗಸ್ತ್ಯ ನಂದಾ ಮತ್ತು ಆರಾಧ್ಯ ಬಚ್ಚನ್.