ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಭೂಮಿ ಕೇಡಿಗಾಗಿ ಬೀಸಿರೋ ಬಲೆ 'ಜೀವ' ಇಂದ ಬಯಲಾಗುತ್ತಾ?

Amruthadhaare Serial: ಅಮೃತಧಾರೆಯಲ್ಲಿ ರೋಚಕ ಘಟ್ಟದತ್ತ ಸಾಗುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ (Jaidev) ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಜೀವಾ ಕೂಡ ಇದಕ್ಕೆ ಸಾಥ್‌ ಕೂಡ ಇದ್ದಾನೆ. ಆದರೀಗ ಸಣ್ಣ ಎಡವಟ್ಟು ಆದಂತಿದೆ.

ಭೂಮಿ ಕೇಡಿಗಾಗಿ ಬೀಸಿರೋ ಬಲೆ 'ಜೀವ' ಇಂದ ಬಯಲಾಗುತ್ತಾ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Aug 25, 2026 10:33 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare serial) ರೋಚಕ ಘಟ್ಟದತ್ತ ಸಾಗುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ (Jaidev) ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಜೀವಾ (Jeeva) ಕೂಡ ಇದಕ್ಕೆ ಸಾಥ್‌ ಕೂಡ ಇದ್ದಾನೆ. ಆದರೀಗ ಸಣ್ಣ ಎಡವಟ್ಟು ಆದಂತಿದೆ.

ಜೀವಾ ಸಣ್ಣ ಎಡವಟ್ಟು

ಪಬ್‌ನಲ್ಲಿ ಜೈದೇವ್‌ ತೂರಾಡಿಕೊಂಡು ಡ್ಯಾನ್ಸ್‌ ಕೂಡ ಮಾಡಿದ್ದಾನೆ. ಈ ವೇಳೆ ಜೈದೇವ್‌ ಬಾಯಿಯಿಂದ ಸತ್ಯ ಬಾಯಿ ಬಿಡಿಸಲು ನೋಡಿದ್ದಾರೆ ಮಲ್ಲಿ ಟೀಂ. ಆದರೆ ಈ ವೇಳೆ ಜೀವಾ ಸಣ್ಣ ಎಡವಟ್ಟು ಮಾಡಿದ್ದಾನೆ.

ಇದನ್ನೂ ಓದಿ: Kangana Ranaut: ರಾಖಿ ಸಾವಂತ್, ಸೋನು ಸೂದ್ ಸೇರಿದಂತೆ ಅನೇಕ ತಾರೆಯರನ್ನ ತರಾಟೆಗೆ ತೆಗೆದುಕೊಂಡ ಕಂಗನಾ!

ಪೊಲೀಸ್ ಅಧಿಕಾರಿ ಮಧುರಾ ಜೊತೆ ಜೀವಾ ಮಾತನಾಡಿದ್ದಾನೆ. ಇದನ್ನು ಜೈದೇವ್‌ ನೋಡಿದ್ದಾನೆ. ಹೀಗಾಗಿ ಮಧುರಾಳಿಗೆ ಜೀವಾ ಏನು ಮಾತಾಡುತ್ತಿದ್ದ ಎಂದು ಪ್ರಶ್ನೆ ಇಟ್ಟಿದ್ದಾನೆ. ಮುಂದೆ ಜೈದೇವ್‌ಗೆ ಅನುಮಾನ ಬರೋ ಚಾನ್ಸ್‌ ಕೂಡ ಇದೆ.



ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಾಳೆ. ಅತ್ತ ಶಕುಂತಲಾಗೆ ಭಯ ಶುರುವಾಗಿದೆ. ತನ್ನ ಬೆನ್ನ ಹಿಂದೆ ಏನೋ ನಡೆಯುತ್ತಿದೆ ಅಂತ ಅನುಮಾನ ಶುರು ಆಗಿದೆ.

ತನ್ನ ತಮ್ಮನ ಬಳಿ ಈ ಬಗ್ಗೆ ಕೇಳಿದ್ದಾಳೆ. ಶಕುನಿ ಮಾಮ ಎಲ್ಲ ವಿಚಾರ ಹೇಳಿ ಬಿಡ್ತನಾ ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ. ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್‌ನನ್ನು ಎಚ್ಚರಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ಜೈದೇವ್‌ ಕೂಡ ಅಲರ್ಟ್‌ ಆಗಿರಬಹುದು.

ಇದನ್ನೂ ಓದಿ: Amruthadhaare serial: ಹಳ್ಳಕ್ಕೆ ಬಿದ್ದ ಕೇಡಿ ಜೇಡಿ! ಪ್ಲ್ಯಾನ್‌ ಫ್ಲಾಪ್ ಮಾಡ್ತಾನಾ ಶಕುನಿ ಮಾವ?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ