'ಅಮೃತಧಾರೆ'' ಧಾರಾವಾಹಿ (Amruthadhaare) ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ಇನ್ನೇನು ಮಿಂಚು ರಹಸ್ಯ ಗೌತಮ್‌ಗೆ ಗೊತ್ತಾಗಬೇಕು, ಅಷ್ಟರಲ್ಲಿ ಲಕ್ಷ್ಮೀಕಾಂತ್‌ನನ್ನು ಜೈದೇವ್ ಕಿಡ್ನಾಪ್ ಮಾಡಿದ್ದಾನೆ. ಅಷ್ಟೇ ಇಲ್ಲ ಈಗ ಮಿಂಚು ಕೂಡ ಜೈದೇವ್ (Jaidev) ಪಾಲಾಗಿದ್ದಾಳೆ. ಜೈದೇವ್‌ನ ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಗೌತಮ್ (Gowtham diwan) ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗೌತಮ್ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈಗ ಭೂಮಿನೇ ಸ್ವತಃ ಮಗಳನ್ನು ಹುಡುಕಿಕೊಂಡು ಹೋಗಿದ್ದಾಳೆ.
ಮಿಂಚುಳನ್ನು ಭೂಮಿ ಹಾಗೂ ಪಾರ್ಥ ಹುಡುಕಿಕೊಂಡು ಹೋಗಿದ್ದಾರೆ. ಒಬ್ಬ ರೌಡಿ ಬಳಿ ಈ ಬಗ್ಗೆ ಮಾತನಾಡಿ ಹಣವನ್ನು ನೀಡಿದ್ದಾಳೆ, ಆತ ಈಗ ಮಿಂಚು ಎಲ್ಲಿದ್ದಾಳೆ ಎನ್ನೋದರ ಬಗ್ಗೆ ಸುಳಿವು ನೀಡಿದ್ದಾನೆ. ಪ್ರೋಮೋದಲ್ಲಿ ಭೂಮಿ ಮಗಳನ್ನು ಹುಡುಕಲು ಯಶಸ್ವಿ ಆಗುತ್ತಾಳಾ ಅನ್ನೋ ಕುತೂಹಲ ಇದೆ.
ಇದನ್ನೂ ಓದಿ: Kannada serial TRP: ಕನ್ನಡ ಕಿರುತೆರೆಯ ಟಾಪ್ 5 ಸೀರಿಯಲ್‌ಗಳು ಯಾವುವು?
ಇಷ್ಟರವರೆಗೆ ಆಗಿದ್ದೇನು?
ಜೈದೇವ್ ಬಳಿ ಮಿಂಚು ಇದ್ದಾಳೆ. ಮಿಂಚು ಸ್ಕೂಲ್‌ನಿಂದ ನೇರವಾಗಿ ಮನೆಯಿಂದ ಆಚೆ ಹೋಗಲು ನಿರ್ಧಾರ ಮಾಡಿದ್ದಾಳೆ. ಮಹಿಮಾ ಜೊತೆ ಇರಲು ಇಷ್ಟ ಪಡದ ಮಿಂಚು ಮನೆಯನ್ನೇ ಬಿಟ್ಟು ಹೋಗಿದ್ದಾಳೆ. ಈಗ ಸ್ಕೂಲ್‌ನಿಂದ ಮಿಂಚು ಕಾಣೆಯಾಗಿದ್ದಾಳೆ ಎಂದು ಕಾಲ್ ಬಂದಿದೆ.ಅಷ್ಟೊತ್ತಿಗೆ ಗೌತಮ್ ಮನೆಗೆ ಅಪರಚಿತ ದಂಪತಿ ಬಂದಿದ್ದಾರೆ. ಮಿಂಚು ದತ್ತು ಕೊಡುತ್ತಿರುವ ಸಂದರ್ಭದಲ್ಲಿ ದಿವಾನ್ ಮನೆಗೆ ಇಬ್ಬರ ಆಗಮನವಾಗಿದೆ. ಈ ಇಬ್ಬರು ಮಿಂಚು ನಮ್ಮ ಮಗಳು ಎಂದು ಹೇಳಿದ್ದಾರೆ. ನಾವು ಮಗುವನ್ನು ಬಿಟ್ಟು ಹೋಗಿದ್ದೀವಿ.
ಯಾರೋ ಆಕೆಯನ್ನು ಸಾಕಿದ್ದರು. ನಂತರ ಅವರು ವಿದೇಶಕ್ಕೆ ತೆರಳುವಾಗ ಮಗಳನ್ನು ಬಿಟ್ಟು ಹೋಗಿದ್ದರು. ಆನಂತರ ಯಾರೋ ಡ್ರೈವರ್ ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಜೈದೇವ್ ಹೇಳಿಕೊಟ್ಟಂತೆ ಹೇಳಿದ್ದಾರೆ. ಪೊಲೀಸರು ಈಗ ಗೌತಮ್ ಮನೆಗೆ ಬಂದಿದ್ದಾರೆ.
ನಾನು ಮಗು ಕೇಳಿಕೊಂಡು ಬರ್ತೇವೆ ಅಂತ ಮಗುವನ್ನು ಅಡಗಿಸಿ ಇಟ್ಟಿದ್ದಾರೆ ಎಂದು ಪೊಲೀಸರ ಬಳಿ ಹೇಳಿದ್ದಾರೆ. ಇಷ್ಟು ವರ್ಷ ಯಾರೂ ಮಗಳನ್ನು ಹುಡುಕಿಕೊಂಡು ಬಂದಿಲ್ಲ. ನಮ್ಮ ಜೊತೆ ಬೆಳೆದಳು ಅಂತ ಗೌತಮ್ ಹೇಳಿದ್ದಾನೆ. ಆದರೆ ಕಾನೂನು ಪ್ರಕಾರ ತಪ್ಪಾಗಿದ್ದರಿಂದ ಮಗು ಸಿಗೋ ತನಕ ಗೌತಮ್ ಪೊಲೀಸ್ ಕಸ್ಟಡಿಗೆ ಇರಬೇಕಾಗಿದೆ.
ಜ್ಯೋತಿಷ್ಯರು ನುಡಿದಂತೆ ಮಗಳಿಂದ ಗೌತಮ್‌ಗೆ ಕಂಟಕ ಎದುರಾಗಿದ್ದಾರೆ. ಗೌತಮ್ ಈಗ ಪೊಲೀಸರ ಬಳಿ ಇದ್ದು, ಮಗಳನ್ನು ಹೇಗೆ ರಕ್ಷಿಸಿಕೊಳ್ತಾನೆ? ಇನ್ನು ಲಕ್ಷ್ಮೀಕಾಂತ್ ಕಥೆ ಗೌತಮ್‌ಗೆ ಇಲ್ಲಿಯವರೆಗೆ ಗೊತ್ತಾಗಿಲ್ಲ. ಗೌತಮ್ ಕೈಗೆ ಲಕ್ಷ್ಮೀಕಾಂತ್ ಸಿಕ್ತಾನಾ..? ಭೂಮಿಕಾ ಮುಂದೆ ಏನು ಮಾಡ್ತಾಳೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಮಿಂಚು ಕಿಡ್ನಾಪ್, ಗೌತಮ್ ಪೊಲೀಸ್ ಕಸ್ಟಡಿಗೆ! ಜೈದೇವ್ ಅಬ್ಬರ ಶುರು
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ